For Quick Alerts
  ALLOW NOTIFICATIONS  
  For Daily Alerts

  ಮಾದಕ ನಟಿ ಸನ್ನಿ ಲಿಯೋನ್ ಮತ್ತು ಇಮ್ರಾನ್ ಹಶ್ಮಿಗೆ ಇದ್ದಾನಾ 20 ವರ್ಷದ ಮಗ?

  |

  ಬಾಲಿವುಡ್ ನಟ ಇಮ್ರಾನ್ ಹಶ್ಮಿ ಮತ್ತು ನಟಿ ಸನ್ನಿ ಲಿಯೋನ್ ಅವರಿಗೆ 20 ವರ್ಷದ ಒಬ್ಬ ಮಗನಿದ್ದಾನೆ. ಈತ ಬಿಹಾರದ ಕಾಲೇಜಿನಲ್ಲಿ ಓದುತ್ತಿದ್ದಾನೆ. ಇಬ್ಬರಿಗೂ ಮದುವೆ ಆಗಿಲ್ಲ, ಹೀಗಿರುವಾಗ 20 ವರ್ಷದ ಮಗನಾ? ಎಂದು ಅಚ್ಚರಿಯಾಗುತ್ತಿದೆಯಾ. ಹೀಗೊಂದು ಘಟನೆ ಬಿಹಾರದ ಕಾಲೇಜುವೊಂದರಲ್ಲಿ ನಡೆದಿದೆ.

  ಧನರಾಜ್ ಮಹತೋ ಕಾಲೇಜಿನಲ್ಲಿ ಓದುತ್ತಿರುವ ಕುಂದನ್ ಕುಮಾರ್ ಎನ್ನುವ 2ನೇ ಬಿಎ ವಿದ್ಯಾರ್ಥಿ ಪರೀಕ್ಷಾ ಪ್ರವೇಶ ಪತ್ರದಲ್ಲಿ ತನ್ನ ಹೆತ್ತವರ ಹೆಸರನ್ನು ಸನ್ನಿ ಲಿಯೋನ್ ಮತ್ತು ಇಮ್ರಾನ್ ಹಶ್ಮಿ ಬರೆದಿದ್ದಾನೆ. ಕುಂದನ್ ಕುಮಾರ್ ಪರೀಕ್ಷಾ ಪ್ರವೇಶ ಪತ್ರದ ಸ್ಕ್ರೀನ್ ಶಾಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಕಾಲೇಜಿನ ಮೆರಿಟ್ ಪಟ್ಟಿಯಲ್ಲಿ ಸನ್ನಿ ಲಿಯೋನ್ ಟಾಪರ್: ಮತ್ತೆ ಕಾಲೇಜಿಗೆ ಹೋಗ್ತಾರಾ ಸನ್ನಿ?ಕಾಲೇಜಿನ ಮೆರಿಟ್ ಪಟ್ಟಿಯಲ್ಲಿ ಸನ್ನಿ ಲಿಯೋನ್ ಟಾಪರ್: ಮತ್ತೆ ಕಾಲೇಜಿಗೆ ಹೋಗ್ತಾರಾ ಸನ್ನಿ?

  ತಂದೆ-ತಾಯಿ ಹೆಸರನ್ನು ಮಾತ್ರ ಬದಲಾಯಿಸಿದಲ್ಲದೇ, ವಿಳಾಸವನ್ನು ತಪ್ಪಾಗಿ ನೀಡಿದ್ದಾರೆ. ಬಿಹಾರದ ಪ್ರಖ್ಯಾತ ರೆಡ್ ಲೈಟ್ ಏರಿಯಾ ಚತುರ್ಭುಜ್ ಸ್ಥಾನ್ ಎನ್ನುವ ವಿಳಾಸ ನೀಡಿದ್ದಾರೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನಟ ಇಮ್ರಾನ್ ಹಶ್ಮಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

  'ದೇವರಣಾನೆ ಅವನು ನನ್ನ ಮಗನಲ್ಲ' ಎಂದು ಇಮ್ರಾನ್ ಹಶ್ಮಿ ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.

  ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಲೇಜು ರಿಜಿಸ್ಟಾರ್ ರಾಮ್ ಕೃಷ್ಣ ಠಾಕೂರ್, ನಾವು ಈ ಬಗ್ಗೆ ತನಿಖೆಗೆ ಆದೇಶಿಸಿದ್ದೇವೆ. ಇದು ನಿಸ್ಸಂಶಯವಾಗಿ ಒಂದು ಕಿಡಿಗೇಡಿತನ ಮತ್ತು ಇದಕ್ಕೆ ವಿದ್ಯಾರ್ಥಿಯೇ ಕಾರಣವಾಗಬಹುದು. ವಿಚಾರಣೆಯ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

  ಇದಕ್ಕೋಸ್ಕರ ತುಂಬಾ ದಿನದಿಂದ ಕಾಯ್ತಾ ಇದ್ದೆ | prajwal Devaraj | Veeram | Filmibeat Kannada

  ಈ ಹಿಂದೆ ನಟಿ ಸನ್ನಿ ಲಿಯೋನ್ ಹೆಸರು ಕೊಲ್ಕತ್ತಾದ ಅಶುತೋಷ್ ಕಾಲೇಜಿನ ಪ್ರವೇಶ ಪಟ್ಟಿಯಲ್ಲಿ ಸನ್ನಿ ಲಿಯೋನ್ ಹೆಸರು ಇರುವುದು ಅಚ್ಚರಿಗೆ ಕಾರಣವಾಗಿತ್ತು. ಕಾಲೇಜು ಪ್ರವೇಶದ ಮೆರಿಟ್ ಪಟ್ಟಿಯಲ್ಲಿ ಸನ್ನಿ ಲಿಯೋನ್ ಹೆಸರಿನಲ್ಲಿ ಬಿ ಎ ಪ್ರವೇಶಕ್ಕೆ ಅರ್ಜಿ ಸಲ್ಲಿದ್ದರು. ಮೆರಿಟ್ ಪಟ್ಟಿಯಲ್ಲಿ ಸನ್ನಿ ಹೆಸರು ಮೊದಲ ಸ್ಥಾನದಲ್ಲಿತ್ತು. ಇದಕ್ಕೆ ಸನ್ನಿ ಲಿಯೋನ್ ಪ್ರತಿಕ್ರಿಯೆ ನೀಡಿ, 'ಮುಂದಿನ ಸೆಮಿಸ್ಟರ್ ನಲ್ಲಿ ನಿಮ್ಮಲ್ಲರನ್ನೂ ನೋಡುತ್ತೇನೆ. ನೀವೆಲ್ಲರು ನನ್ನ ತರಗತಿಯವರೇ ಎಂದು ಭಾವಿಸುತ್ತೇನೆ' ಎಂದಿದ್ದರು.

  English summary
  20 year old Bihar student Names Emraan Hashmi and Sunny Leone as Parents. Emraan Hashmi react About this.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X