Don't Miss!
- Technology
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
- News
ಆವಲಗುರ್ಕಿ: ಆದಿಯೋಗಿ ಪ್ರತಿಮೆ ನೋಡಲು ಬರುವ ಭಕ್ತರಿಂದ ಸುಂಕ ವಸೂಲಿ ಆರೋಪ, ಭುಗಿಲೆದ್ದ ಆಕ್ರೋಶ
- Sports
ಟೀಮ್ ಇಂಡಿಯಾಗೆ ಹೊಸ ತಲೆನೋವು: ಮಂಕಾಗಿದ್ದಾರೆ ಭರವಸೆ ಮೂಡಿಸಿದ್ದ ಆಟಗಾರರು
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಿನ್ನದ ಪದಕ ಗೆದ್ದ ಹಿಮಾದಾಸ್ ಬಯೋಪಿಕ್ ಸಿನಿಮಾಗೆ ತಯಾರಿ.!
ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಅಂಡರ್ 20 ಕ್ರೀಡಾಕೂಟದ ಮಹಿಳೆಯರ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತದ ಹಿಮಾದಾಸ್ ಈಗ ಬಾಲಿವುಡ್ ಪರದೆ ಮೇಲೆ ಮಿಂಚಲಿದ್ದಾರೆ.
ಕ್ರೀಡಾಪಟುಗಳ ಜೀವನವನ್ನ ತೆರೆಮೇಲೆ ತರುವುದ್ರಲ್ಲಿ ನಿಸ್ಸೀಮರಾಗಿರುವ ಬಾಲಿವುಡ್ ಮಂದಿ ಹಿಮಾದಾಸ್ ಜೀವನ ಚರಿತ್ರೆಯನ್ನ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಪ್ಲಾನ್ ಮಾಡಿದ್ದಾರೆ.
ಇಂತಹದೊಂದು ಆಲೋಚನೆ ಮಾಡಿರುವುದು ಬಿಟೌನ್ ಸೂಪರ್ ಅಕ್ಷಯ್ ಕುಮಾರ್. ಹೌದು, ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಕ್ಷಯ್ ಕುಮಾರ್, ''ಹಿಮಾದಾಸ್ ಬಗ್ಗೆ ಬಯೋಪಿಕ್ ಮಾಡುವ ಯೋಚನೆ ಇದೆ'' ಎಂದು ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.
ಚಿನ್ನದ
ಪದಕ
ಗೆದ್ದ
ಹಿಮಾದಾಸ್
ಗೆ
ಶುಭಕೋರಿದ
ಶ್ರೀಮುರಳಿ-ದುನಿಯಾ
ವಿಜಿ
''ಈ ವರೆಗೆ ರನ್ನಿಂಗ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ಸಿಕ್ಕಿರಲಿಲ್ಲ. ಈಗ ಹಿಮಾದಾಸ್ ಆ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ದೇಶದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟಕ್ಕೆ ಹಾರಿಸಿದ್ದಾರೆ. ಹಾಗಾಗಿ ಅವರ ಕುರಿತು ಒಂದು ಸಿನಿಮಾ ಮಾಡುವುದರಲ್ಲಿ ತಪ್ಪಿಲ್ಲ'' ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬಯೋಪಿಕ್ ಚಿತ್ರಗಳಿಗೆ ಹಾಗೂ ನೈಜಕಥೆಯಾಧರಿತ ಚಿತ್ರಗಳಿಗೆ ಹೆಚ್ಚು ಸೂಕ್ತವಾದ ನಟ ಅಂದ್ರೆ ಅಕ್ಷಯ್ ಕುಮಾರ್. ಈಗಾಗಲೇ ಹಲವು ಬಯೋಪಿಕ್ ಸಿನಿಮಾಗಳನ್ನ ಮಾಡಿರುವ ಅಕ್ಷಯ್ ಈ ಬಾರಿ ಮತ್ತೊಂದು ಸವಾಲಿನ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವ ಸೂಚನೆ ನೀಡಿದ್ದಾರೆ.
ಒಂದು ವೇಳೆ ಹಿಮಾದಾಸ್ ಬಗ್ಗೆ ಬಯೋಪಿಕ್ ಸೆಟ್ಟೇರಿದ್ರೆ, ಹಿಮಾ ಪಾತ್ರವನ್ನ ಯಾರು ಮಾಡಲಿದ್ದಾರೆ ಎಂಬುದು ಕುತೂಹಲ. ಇನ್ನುಳಿದಂತೆ ರಜನಿಕಾಂತ್ ಅಭಿನಯಿಸಿರುವ '2.0' ಬಿಡುಗಡೆಯಾಗಬೇಕಿದೆ. ಇದರ ಜೊತೆಗೆ 'ಗೋಲ್ಡ್' ಸಿನಿಮಾವೂ ತೆರೆಕಾಣಬೇಕಿದೆ. 'ಕೇಸರಿ' ಮತ್ತು ಹೌಸ್ ಫುಲ್ 4 ಚಿತ್ರಗಳು ಶೂಟಿಂಗ್ ನಡೆಯುತ್ತಿದೆ.