ಸಿನಿಮಾ ಆಗಲಿದೆ ಭಾರತದ ಮೊದಲ 'ಸೂಪರ್ ಸ್ಟಾರ್' ಜೀವನ

ಈಗಾಗಲೇ ಹಲವು ನಟ-ನಟಿಯರ ಜೀವನ ಸಿನಿಮಾ ಆಗಿದೆ. ಭಾರತದ ಮೊದಲ ಚಲನಚಿತ್ರ ನಿರ್ಮಿಸಿದ ದಾದಾ ಸಾಹೇಬ್ ಫಾಲ್ಕೆಯಿಂದ ಹಿಡಿದು, ನಟಿ ಶಕೀಲ ವರೆಗೆ ಹಲವು ನಟ-ನಟಿಯರ ಜೀವನ ತೆರೆಗೆ ಬಂದಿದೆ. ಇದೀಗ ಭಾರತದ ಪ್ರಪ್ರಥಮ ಸೂಪರ್ ಸ್ಟಾರ್ ರಾಜೇಶ್ ಖನ್ನ ಜೀವನ ಸಿನಿಮಾ ಆಗುವ ಆರಂಭಿಕ ಹಂತದಲ್ಲಿದೆ.

ಅಕ್ಷಯ್ ಕುಮಾರ್ ಮಾವ ಸಹ ಆಗಿರುವ ರಾಜೇಶ್ ಖನ್ನ ಭಾರತ ಚಿತ್ರರಂಗದ ಮೊದಲ ಸೂಪರ್ ಸ್ಟಾರ್. ರಾಜೇಶ್ ಖನ್ನ ಜೀವನದ ಒಳಮುಖಗಳನ್ನು ತೆಗೆದಿಡುವ ಪ್ರಯತ್ನವನ್ನು ಸಿನಿಮಾ ಮಾಡಲಿದೆ.

ರಾಜೇಶ್ ಖನ್ನ ಭಾರತದ ಮೊದಲ ಸೂಪರ್ ಸ್ಟಾರ್ ಆಗಿದ್ದವರು. ಕೇವಲ ಮೂರು ವರ್ಷದಲ್ಲಿ ಸತತ 17 ಸೂಪರ್-ಡೂಪರ್ ಹಿಟ್ ನೀಡಿದ ಖ್ಯಾತಿ ಇವರದ್ದು. ಸುಂದರ ವದನ ರಾಜೇಶ್ ಖನ್ನಗೆ ಯುವತಿಯರು ರಕ್ತದಿಂದ ಪತ್ರ ಬರೆಯುತ್ತಿದ್ದರು, ರಾಜೇಶ್ ಖನ್ನ ಚಿತ್ರದೊಂದಿಗೆ ಕೆಲವು ಯುವತಿಯರು ವಿವಾಹ ಸಹ ಆದರು. ರಾಜೇಶ್ ಖನ್ನ ವಿವಾಹವಾದಾಗ ಕೆಲವು ಯುವತಿಯರು ಆತ್ಮಹತ್ಯೆ ಸಹ ಮಾಡಿಕೊಂಡಿದ್ದರು. 60-70ರ ದಶಕದಲ್ಲಿ ರಾಜೇಶ್ ಖನ್ನ ಎಂದರೆ ಯುವತಿಯರಿಗೆ ದೊಡ್ಡ ಮಟ್ಟದ ಕ್ರೇಜ್ ಇತ್ತು.

Biopic On Indias First Super Star Rajesh Khanna

ರಾಜೇಶ್ ಖನ್ನ ಜೀವನ ಆಧರಿಸಿ 'ಡಾರ್ಕ್ ಸ್ಟಾರ್: ದಿ ಲೋನ್ಲಿನೆಸ್ ಆಪ್ ಬೀಯಿಂಗ್ ರಾಜೇಶ್ ಖನ್ನ' ಹೆಸರಿನ ಪುಸ್ತಕ ರಚಿಸಲಾಗಿದ್ದು, ಪುಸ್ತಕ ಆಧರಿಸಿ ಸಿನಿಮಾ ತಯಾರಾಗಲಿದೆ. ಗೌತಮ್ ಚಿಂತಾಮಣಿ ಬರೆದಿರುವ ಈ ಪುಸ್ತಕದ ಹಕ್ಕುಗಳನ್ನು ನಿರ್ಮಾಪಕ ನಿಖಿಲ್ ದ್ವಿವೇದಿ ಖರೀದಿಸಿದ್ದಾರೆ.

''ಡಾರ್ಕ್ ಸ್ಟಾರ್: ದಿ ಲೋನ್ಲಿನೆಸ್ ಆಪ್ ಬೀಯಿಂಗ್ ರಾಜೇಶ್ ಖನ್ನ' ಪುಸ್ತಕದ ಹಕ್ಕನ್ನು ಪಡೆದಿದ್ದೀನಿ. ಸಿನಿಮಾವನ್ನು ನಿರ್ದೇಶಿಸಲು ಫರ್ಹಾ ಖಾನ್ ಜೊತೆ ಮಾತುಕತೆ ಚಾಲ್ತಿಯಲ್ಲಿದೆ. ರಾಜೇಶ್ ಖನ್ನ ಜೀವನವನ್ನು ತೆರೆಯ ಮೇಲೆ ತರಲು ಕಾತರನಾಗಿದ್ದೇನೆ,'' ಎಂದಿದ್ದಾರೆ ನಿರ್ಮಾಪಕ ನಿಖಿಲ್ ದ್ವಿವೇದಿ.

ರಾಜೇಶ್ ಖನ್ನ ಜೀವನ ಆಧರಿಸಿದ ಸಿನಿಮಾ ನಿರ್ದೇಶಿಸುತ್ತಿರುವ ಬಗ್ಗೆ ಮಾತನಾಡಿರುವ ಫರ್ಹಾ ಖಾನ್ ''ಗೌತಮ್ ಚಿಂತಾಮಣಿ ಬರೆದಿರುವ 'ಡಾರ್ಕ್ ಸ್ಟಾರ್: ದಿ ಲೋನ್ಲಿನೆಸ್ ಆಪ್ ಬೀಯಿಂಗ್ ರಾಜೇಶ್ ಖನ್ನ' ಪುಸ್ತಕವನ್ನು ನಾನು ಓದಿದ್ದೇನೆ ಅದೊಂದು ಅದ್ಭುತ ಪುಸ್ತಕ. ರಾಜೇಶ್ ಖನ್ನ ಜೀವನ ಬಹಳ ವರ್ಣರಂಜಿತವಾದುದು. ಅವರ ಜೀವನವನ್ನು ಸಿನಿಮಾ ಮಾಡುವ ಬಗ್ಗೆ ಮಾತುಕತೆ ಚಾಲ್ತಿಯಲ್ಲಿದೆ. ಈಗಲೇ ಈ ಬಗ್ಗೆ ಹಚ್ಚಿನ ಮಾಹಿತಿ ನೀಡಲಾಗದು'' ಎಂದಿದ್ದಾರೆ.

ಸೂಪರ್ ಸ್ಟಾರ್ ಆಗಿದ್ದ ರಾಜೇಶ್ ಖನ್ನ ಕೆಲವು ಪ್ರೇಮ ಸಂಬಂಧಗಳನ್ನು ಹೊಂದಿದ್ದರು. ಸ್ಟಾರ್ ಆಗಿ ಮೆರೆದ ಖನ್ನ ಹಲವು ವರ್ಷಗಳ ಕಾಲ ಒಬ್ಬಂಟಿಯಾಗಿ ಕಾಲ ಕಳೆಯಬೇಕಾಯಿತು. ರಾಜೇಶ್ ಖನ್ನ ಮೊದಲಿಗೆ ಫ್ಯಾಷನ್ ಡಿಸೈನರ್ ಹಾಗೂ ನಟಿ ಆಗಿದ್ದ ಅಂಜು ಮಹೇಂದ್ರನ್ ಅವರೊಟ್ಟಿಗೆ ಪ್ರೀತಿಯಲ್ಲಿದ್ದರು ಸುಮಾರು 7 ವರ್ಷಗಳ ಈ ಸಂಬಂಧ ಮುರಿದು ಬಿತ್ತು. ಬಳಿಕ 1973ರಲ್ಲಿ ಡಿಂಪಲ್ ಕಪಾಡಿಯಾ ಅನ್ನು ರಾಜೇಶ್ ಖನ್ನ ವಿವಾಹವಾದರು. ಇಬ್ಬರು ಮಕ್ಕಳು ಜನಿಸಿದರು. ಒಂಬತ್ತು ವರ್ಷದ ಬಳಿಕ ಇಬ್ಬರೂ ದೂರಾದರು. ಡಿಂಪಲ್ ಕಪಾಡಿಯಾ, ತಾನು ನಟನೆ ಮುಂದುವರೆಸಬೇಕು ಎಂದು ಹೇಳಿದ್ದು ರಾಜೇಶ್‌ಗೆ ಇಷ್ಟವಾಗಲಿಲ್ಲ. ಆದರೆ ಈ ಇಬ್ಬರು ವಿಚ್ಛೇಧನ ಪಡೆದುಕೊಳ್ಳಲಿಲ್ಲ. ಆದರೆ ಪರಸ್ಪರ ದೂರವಿದ್ದೇ ಜೀವನ ನಡೆಸಿದರು. 2012 ರಲ್ಲಿ ಅನಾರೋಗ್ಯದಿಂದಾಗಿ ರಾಜೇಶ್ ಖನ್ನ ನಿಧನ ಹೊಂದಿದರು.

ರಾಜೇಶ್ ಖನ್ನ ಅಳಿಯ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರೇ ತನ್ನ ಮಾವನ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ರಾಜೇಶ್ ಖನ್ನ ಪಾತ್ರಕ್ಕೆ ವಿಕ್ಕಿ ಕೌಶಲ್ ಹೆಸರು ಸಹ ಕೇಳಿ ಬರುತ್ತಿದೆ. ಸಿನಿಮಾದ ಬಗೆಗಿನ ಇನ್ನಷ್ಟು ಮಾಹಿತಿ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ.

More from Filmibeat

English summary
Biopic on India's first super star Rajesh Khanna. Farah Khan will direct the movie, Nitin Dwivedi will produce it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X