'ಮದುವೆಯ ಕರೆಯೋಲೆ' ಹಂಚಲು ಶುರುಮಾಡಿದ ಬಿಪಾಶಾ-ಕರಣ್
ಎರಡೆರಡು ಬಾರಿ ಮದುವೆ ಆಗಿ ವಿಚ್ಛೇದನ ಪಡೆದಿರುವ ಅನುಭವಿ ಕರಣ್ ಸಿಂಗ್ ಗ್ರೋವರ್ ಜೊತೆ ಎರಡು ವರ್ಷದಿಂದ ಪ್ರೇಮದ ಅಮಲಿನಲ್ಲಿ ತೇಲಾಡುತ್ತಿರುವ ಬಾಲಿವುಡ್ ಬೆಡಗಿ ಬಿಪಾಶಾ ಬಸು ಹೊಸ ಜೀವನಕ್ಕೆ ಅಡಿಯಿಡಲು ಸಜ್ಜಾಗಿದ್ದಾರೆ.
ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ ಪ್ಲಾನ್ ಪ್ರಕಾರ ಎಲ್ಲವೂ ನಡೆದರೆ, ಇದೇ ತಿಂಗಳ ಕೊನೆಗೆ ಜೋಡಿ ಹಕ್ಕಿಯ ಎರಡು ವರ್ಷದ ಪ್ರೀತಿಗೆ ಅಧಿಕೃತ ಮುದ್ರೆ ಬೀಳಲಿದೆ. [ಬಿಪಾಶಾ ಬಸು ಮದುವೆ ಫಿಕ್ಸ್ ಆಯ್ತಂತೆ, ಜೋಡಿ ಹಕ್ಕಿ ನೋಡಿ]

ವರದಿಗಳ ಪ್ರಕಾರ, ಏಪ್ರಿಲ್ 28 ರಂದು ಮೆಹೆಂದಿ ಕಾರ್ಯಕ್ರಮ ನಡೆಯಲಿದ್ದು, ಏಪ್ರಿಲ್ 29 ರಂದು ಬಿಪಾಶಾ ಬಸು-ಕರಣ್ ಸಿಂಗ್ ಗ್ರೋವರ್ ರವರ ವಿವಾಹ ಆರತಕ್ಷತೆ ಮುಂಬೈನಲ್ಲಿ ನಡೆಯಲಿದೆ.
ಅಪ್ಪಟ ಬೆಂಗಾಲಿ ಶೈಲಿಯಲ್ಲಿ ವಿವಾಹವಾಗಲು ಬಿಪಾಶಾ ಬಸು-ಕರಣ್ ಸಿಂಗ್ ಗ್ರೋವರ್ ನಿರ್ಧರಿಸಿದ್ದಾರೆ. ಈಗಾಗಲೇ ಆಪ್ತರಿಗೆ, ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ಆಮಂತ್ರಣ ಪತ್ರಿಕೆ ನೀಡುವಲ್ಲಿ ಇಬ್ಬರೂ ಬಿಜಿಯಾಗಿದ್ದಾರಂತೆ.
ಹೊಸ ಜೀವನಕ್ಕೆ ಅಡಿಯಿಡಲು ನಿರ್ಧರಿಸಿರುವ ನೂತನ ಜೋಡಿ ಬಿಪಾಶಾ ಬಸು-ಕರಣ್ ಸಿಂಗ್ ಗ್ರೋವರ್ ರವರ ಅಪರೂಪದ ಚಿತ್ರಗಳು ಇಲ್ಲಿದೆ. ಕೆಳಗಿರುವ ಫೋಟೋ ಗ್ಯಾಲರಿಯಲ್ಲಿ ನೋಡಿ.....
'ಮದುವೆಯ ಕರೆಯೋಲೆ' ಹಂಚಲು ಶುರುಮಾಡಿದ ಬಿಪಾಶಾ-ಕರಣ್


Click it and Unblock the Notifications











