Don't Miss!
- News
Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಾಜಿದ್ ಖಾನ್ ಬಂಡವಾಳ ಬಯಲಾಗಿದ್ದಕ್ಕೆ ಬಿಪಾಶಾ ಬಸುಗೆ ಖುಷಿ.!
Recommended Video

ಬಾಲಿವುಡ್ ನ ಖ್ಯಾತ ನಿರ್ದೇಶಕ ಸಾಜಿದ್ ಖಾನ್ ಬಂಡವಾಳ ಬಟಾ ಬಯಲಾಗಿದೆ. ಸಾಜಿದ್ ಖಾನ್ ಕುರಿತ ನಗ್ನ ಸತ್ಯವನ್ನ ಮೂವರು ಮಹಿಳೆಯರು ಬಹಿರಂಗ ಪಡಿಸಿದ್ದಾರೆ.
ಸಾಜಿದ್ ಖಾನ್ 'ಕಾಮುಕ' ಮುಖ ಬಹಿರಂಗವಾಗುತ್ತಿದ್ದಂತೆಯೇ, 'ಹೌಸ್ ಫುಲ್-4' ಚಿತ್ರದ ನಿರ್ದೇಶಕನ ಸ್ಥಾನದಿಂದ ಕೆಳಕ್ಕೆ ಇಳಿದಿದ್ದಾರೆ. ಈ ಬೆಳವಣಿಗೆ ಬಿಪಾಶಾ ಬಸುಗೆ ಸಿಕ್ಕಾಪಟ್ಟೆ ಖುಷಿ ಹಾಗೂ ಸಮಾಧಾನ ತಂದಿದೆ.
ನಿರ್ದೇಶಕ
ಸಾಜಿದ್
ಖಾನ್
'ಕಾಮಪುರಾಣ'
ಬಿಚ್ಚಿಟ್ಟ
ನಟಿ
ಮತ್ತು
ಪತ್ರಕರ್ತೆ
ಸಾಜಿದ್ ಖಾನ್ ವಿರುದ್ಧ ದನಿ ಎತ್ತಿದ ಮಹಿಳೆಯರ ಬಗ್ಗೆ ಬಿಪಾಶಾ ಬಸು ಹೆಮ್ಮೆ ಪಟ್ಟಿದ್ದಾರೆ. ''ಶೂಟಿಂಗ್ ಸೆಟ್ ನಲ್ಲಿರುವ ಮಹಿಳಾ ಸಿಬ್ಬಂದಿ ಜೊತೆಗಿನ ಸಾಜಿದ್ ಖಾನ್ ವರ್ತನೆಯಿಂದ ನಾನು ಬೇಸರಗೊಂಡಿದ್ದೇನೆ'' ಎಂದಿದ್ದಾರೆ ನಟಿ ಬಿಪಾಶಾ ಬಸು. ಮುಂದೆ ಓದಿರಿ...

ಒರಟು ಸ್ವಭಾವ
2014 ರಲ್ಲಿ ಬಿಡುಗಡೆ ಆದ ಸಾಜಿದ್ ಖಾನ್ ನಿರ್ದೇಶನದ 'ಹಮ್ ಶಕಲ್ಸ್' ಚಿತ್ರದಲ್ಲಿ ಬಿಪಾಶಾ ಬಸು ಅಭಿನಯಿಸಿದ್ದರು. ಈ ಬಗ್ಗೆ ಮಾತನಾಡಿದ ಬಿಪಾಶಾ ಬಸು, ''ನಾನು ಸಾಜಿದ್ ಖಾನ್ ರಿಂದ ಲೈಂಗಿಕ ಕಿರುಕುಳ ಅನುಭವಿಸಿಲ್ಲ. ಆದರೆ ಮಹಿಳೆಯರ ಜೊತೆಗೆ ಆತನ ವರ್ತನೆ ಮಾತ್ರ ತೀರಾ ಒರಟು'' ಅಂತಾರೆ.
ಆಡಿಷನ್
ಅಂತ
ಮನೆಗೆ
ಕರೆದು
ನಟಿಗೆ
ಬಟ್ಟೆ
ಕಳಚಲು
ಹೇಳಿದ್ನಂತೆ
ಸಾಜಿದ್
ಖಾನ್.!

ಕೆಟ್ಟ ಜೋಕ್ಸ್ ಹೇಳುತ್ತಿದ್ದ ಸಾಜಿದ್
''ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಈಗ ದನಿಯೆತ್ತುತ್ತಿರುವುದು ಉತ್ತಮ ಬೆಳವಣಿಗೆ. ಆದರೆ ನನಗೆ ಅಂತಹ ಅನುಭವ ಆಗಿಲ್ಲ. ಶೂಟಿಂಗ್ ಸೆಟ್ ನಲ್ಲಿ ಸಾಜಿದ್ ಖಾನ್ ಕೆಟ್ಟ ಕೊಳಕ ಜೋಕ್ ಗಳನ್ನು ಹೇಳುತ್ತಿದ್ದರು. ಆತನ ವರ್ತನೆ ನನ್ನನ್ನ ಡಿಸ್ಟರ್ಬ್ ಮಾಡುತ್ತಿತ್ತು'' ಅಂತಾರೆ.
ನೈತಿಕ
ಹೊಣೆ
ಹೊತ್ತು
ಡೈರೆಕ್ಟರ್
ಕ್ಯಾಪ್
ಕಳಚಿದ
ನಿರ್ದೇಶಕ
ಸಾಜಿದ್
ಖಾನ್.!

ಸಾಜಿದ್ ಮಟ್ಟಕ್ಕೆ ಇಳಿಯಲಿಲ್ಲ.!
''ಸಾಜಿದ್ ಮಟ್ಟಕ್ಕೆ ಇಳಿದು ಮಾತನಾಡದಿರಲು ನನಗೆ ಸೂಚಿಸಿದ್ದರು. ಹೀಗಾಗಿ, ನನ್ನ ಕೆಲಸವನ್ನು ಮುಗಿಸಿ ನಾನು ವಾಪಸ್ ಆಗುತ್ತಿದ್ದೆ'' ಎನ್ನುವ ಬಿಪಾಶಾ 2014 ರಲ್ಲಿ 'ಹಮ್ ಶಕಲ್ಸ್' ಶೂಟಿಂಗ್ ವೇಳೆ ಕಣ್ಣೀರು ಹಾಕಿದ್ದರು. ಅಲ್ಲದೇ, ಚಿತ್ರದ ಪ್ರಮೋಷನ್ ಗೆ ಬಾರದಿರಲು ನಿರ್ಧರಿಸಿದ್ದರು.
ಕಡೆಗೂ
ಕಠಿಣ
ನಿರ್ಧಾರ
ಕೈಗೊಂಡ
ಅಕ್ಷಯ್.!
ಬಾಲಿವುಡ್
ನಲ್ಲೀಗ
ಒಳ್ಳೆ
ಬೆಳವಣಿಗೆ.!

ನನಗೇನೂ ಮಾಡಿಲ್ಲ
''ಆತನ ನನ್ನೊಂದಿಗೆ ಏನೂ ಮಾಡಲಿಲ್ಲ. ಮಾಡಿದಿದ್ರೆ, 2014 ರಲ್ಲೇ ಮಾತನಾಡುತ್ತಿದ್ದೆ. ನನಗೆ ತುಂಬಾ ಜೋರು ಧ್ವನಿ ಇದೆ. ಅಗೌರವವನ್ನ ನಾನು ಎಂದೂ ಸಹಿಸುವುದಿಲ್ಲ'' ಎಂದು ಟ್ವಿಟ್ಟರ್ ನಲ್ಲಿ ಬಿಪಾಶಾ ಸ್ಪಷ್ಟ ಪಡಿಸಿದ್ದಾರೆ.
ಸಾಜಿದ್
ಖಾನ್
ವಿರುದ್ಧ
ಆರೋಪಗಳನ್ನು
ಕೇಳಿ
ಸಹೋದರಿ
ಫರಾ
ಖಾನ್
ಹೃದಯ
ಛಿದ್ರ.!

ತನುಶ್ರೀ ದತ್ತಾಗೆ ಧನ್ಯವಾದಗಳು
''ತನುಶ್ರೀ ದತ್ತಾಗೆ ಧನ್ಯವಾದಗಳು.. ಯಾಕಂದ್ರೆ, ಆಕೆಯಿಂದ ಎಷ್ಟೋ ಮಹಿಳೆಯರು ಧೈರ್ಯವಾಗಿ ಮಾತನಾಡುತ್ತಿದ್ದಾರೆ'' ಎಂದು ನಟಿ ಬಿಪಾಶಾ ಬಸು ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.