»   » ಬಿಕಿನಿಯಲ್ಲಿ ಗಮನಸೆಳೆದ 38ರ ಹಾಟ್ ಬ್ಯೂಟಿ ಬಿಪಾಶಾ!

ಬಿಕಿನಿಯಲ್ಲಿ ಗಮನಸೆಳೆದ 38ರ ಹಾಟ್ ಬ್ಯೂಟಿ ಬಿಪಾಶಾ!

Posted By:
Subscribe to Filmibeat Kannada

ಬಾಲಿವುಡ್ ಹಾಟ್ ಬ್ಯೂಟಿ ಬಿಪಾಶಾ ಬಸು ರವರು ತಮಗೆ ಹೆಚ್ಚು ವಯಸ್ಸಾದಂತೆಲ್ಲಾ ಇನ್ನೂ ಸೆಕ್ಸಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

'ಯೋಗ' ಅಂದ್ರೆ ಈ ನಟಿಯರಿಗೇಕೆ ಇಷ್ಟೊಂದು ಇಷ್ಟ.!

'ಅಲೋನ್' ಚಿತ್ರದ ನಂತರ ಬಿಪಾಶಾ ಬಸು ರವರು ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದು ಅಪರೂಪವೇ. ಆದರೂ ಸಹ ಆಗಾಗ ಹಲವು ಕಾರಣಗಳಿಂದ ಸುದ್ದಿಯಲ್ಲಿರುತ್ತಾರೆ. ಅಂತೆಯೇ ಈಗ ಅವರು ವಯಸ್ಸು 38 ದಾಟಿದರೂ ತಮ್ಮ ಮೈಮಾಟದಿಂದ ಪಡ್ಡೆಗಳ ನಿದ್ದೆಕೆಡಿಸುವ ಚಟುವಟಿಕೆಗಳಿಂದ ಸುದ್ದಿಯಾಗಿದ್ದಾರೆ. ಹೌದು, ಬಿಪಾಶಾ ತಮ್ಮ ಇನ್‌ಸ್ಟಗ್ರಾಂನಲ್ಲಿ ಇತ್ತೀಚೆಗೆ ಮೈಮಾ ಬೀಚ್‌ನಲ್ಲಿ ತೆಗೆಸಿಕೊಂಡಿರುವ ಒಂದು ಬಿಕಿನಿ ಅವತಾರವನ್ನು ಅಪ್‌ಲೋಡ್‌ ಮಾಡಿದ್ದು, ಆ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Love the body you live in ❤️ #throwback #Miami #southbeach #monkeylove #loveyourself #beachbum

A post shared by bipashabasusinghgrover (@bipashabasu) on Aug 2, 2017 at 2:15am PDT

ಸದಾ ತಮ್ಮ ಫಿಟ್‌ನೆಸ್ ಬಗ್ಗೆ ಕಾಳಜಿ ವಹಿಸುವ ಬಿಪಾಶಾ ರವರು ಮೈಮಾ ಬೀಚ್‌ನಲ್ಲಿ ಪಿಂಕ್ ಕಲರ್ ಬಿಕಿನಿಯನ್ನು ತೊಟ್ಟು ಸಖತ್ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಇನ್‌ಸ್ಟಗ್ರಾಂನಲ್ಲಿ ಅಪ್‌ಲೋಡ್ ಮಾಡಿರುವ ಪಿಂಕ್ ಕಲರ್ ಬಿಕಿನಿ ಫೋಟೋ ಜೊತೆಗೆ, 'ನಮ್ಮನ್ನು ನಾವು ಮೊದಲು ಪ್ರೀತಿಸಿದಾಗ ಮಾತ್ರ, ಇತರರಿಗೆ ಆಕರ್ಷಕವಾಗಿ ಕಾಣುತ್ತೇವೆ' ಎಂದು ಬರೆದಿದ್ದಾರೆ. ಅವರ ಈ ಫೋಟೋ ನೋಡಿದ ಅಭಿಮಾನಿಗಳು ಬ್ಯೂಟಿಫುಲ್ ಮತ್ತು ಸತ್ಯವಾದ ಅಲೋಚನೆ, ನಿಮ್ಮ ದಿನನಿತ್ಯ ಡಯಟ್ ಬಗ್ಗೆ ಶೇರ್ ಮಾಡಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. 95 ಸಾವಿರಕ್ಕೂ ಅಧಿಕ ಲೈಕ್ಸ್‌ಗಳು ಸಿಕ್ಕಿವೆ.

ಶಿವರಾಜ್ ಕುಮಾರ್ ಚಿತ್ರಕ್ಕಾಗಿ ಬರ್ತಾರಂತೆ ಬಿಪಾಶ ಬಸು!

English summary
Bollywood Actress Bipasha Basu's pink color bikini hot photo gone viral in Social Media platforms

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada