For Quick Alerts
  ALLOW NOTIFICATIONS  
  For Daily Alerts

  'EX' ಬಾಯ್ ಫ್ರೆಂಡ್ ಗಳಿಗೆ ಮದುವೆ ಕಾರ್ಡ್ ಕೊಡೋಲ್ವಂತೆ ಬಿಪ್ಸ್

  By ಸೋನು ಗೌಡ
  |

  ಬಿಟೌನ್ ನ ಹಾಟ್ ಕಪಲ್ ಗಳಾದ ಕೃಷ್ಣ ಸುಂದರಿ ಬಿಪಾಶಾ ಬಸು ಮತ್ತು ರೋಮ್ಯಾಂಟಿಕ್ ಹೀರೋ ಕರಣ್ ಸಿಂಗ್ ಗ್ರೋವರ್ ಅವರ ಮದುವೆ ತಯಾರಿ ಬಲು ಜೋರಾಗೇ ನಡೆಯುತ್ತಿದೆ.

  ಈಗಾಗಲೇ ವೆಡ್ಡಿಂಗ್ ಕಾರ್ಡ್ ತಯಾರಾಗಿದ್ದು, ಹಾಗು ನವ ಜೋಡಿಯ ಹೊಸ ಫೋಟೋ ಶೂಟ್ ಕೂಡ ನಡೆದಿದ್ದು, ಎಲ್ಲರೂ ಮದುವೆಯ ಓಡಾಟದ ಸಂಭ್ರಮದಲ್ಲಿದ್ದಾರೆ. ಜೊತೆಗೆ ವೆಡ್ಡಿಂಗ್ ಕಾರ್ಡ್ ಹಂಚುವಿಕೆಯ ಕಾರ್ಯದಲ್ಲೂ ನವ ಜೋಡಿಗಳು ಬ್ಯುಸಿಯಾಗಿದ್ದಾರೆ.[ಬಿಪಾಶಾ ಬಸು - ಕರಣ್ ಮದುವೆ ಆಮಂತ್ರಣ ಪತ್ರಿಕೆ ಹಿಂಗಿದೆ.!]

  ಈ ನಡುವೆ ಬಿಪಾಶಾ ಬಸು ಅವರು ಒಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಅದೇನಪ್ಪಾ ಅಂದ್ರೆ ಅವರ ಹಳೇ ಬಾಯ್ ಫ್ರೆಂಡ್ ಗಳನ್ನು ತಮ್ಮ ಮದುವೆಗೆ ಕರೆಯೊಲ್ಲ ಎಂದು ಹೇಳುವ ಮೂಲಕ ಬಾಂಬ್ ಸಿಡಿಸಿದ್ದಾರೆ. ಅವರ ಗೆಸ್ಟ್ ಲಿಸ್ಟ್ ನಲ್ಲಿ ನಾಲ್ವರು ಬಾಯ್ ಫ್ರೆಂಡ್ ಗಳ ಹೆಸರು ಇಲ್ವಂತೆ.

  ಹೌದು ಬಿಪಾಶಾ ಅವರ ಹಳೇ ಬಾಯ್ ಫ್ರೆಂಡ್ ಗಳಾದ ದಿನು ಮೋರ್ಯಾ, ಮಿಲಿಂದ್ ಸೊಮನ್, ಹರ್ಮನ್ ಬವೇಜ ಮತ್ತು ಜಾನ್ ಅಬ್ರಾಹಂ ಅವರನ್ನು ತಮ್ಮ ಮದುವೆಗೆ ಕರೆಯೊಲ್ಲ ಎಂದು ಹೇಳಿದ್ದಾರೆ.[ಕಪ್ಪು-ಬಿಳುಪಿನ ಫೋಟೋಶೂಟ್ ನಲ್ಲಿ ನವ ಜೋಡಿ ಬಿಪಾಶಾ-ಕರಣ್]

  ಬಿಪಾಶಾ ಅವರದು ಇದೊಂಥರಾ ಒಳ್ಳೆ ನಿರ್ಧಾರ ಅಂತಾನೇ ಅನಿಸುತ್ತಿದೆ. ಯಾಕೆಂದರೆ ಹೊಸ ಜೀವನಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಅವರು ತಮ್ಮ ಹಳೇ ಕಥೆಯನ್ನೆಲ್ಲಾ ಅಲ್ಲೇ ಬಿಟ್ಟು ಬರಲು ನಿರ್ಧಾರ ತಳೆದಿದ್ದಾರೆ.

  ಜಾನ್ ಅಬ್ರಾಹಂ ಅವರು ಒಬ್ಬರನ್ನು ಬಿಟ್ಟರೆ ಉಳಿದಂತೆ ದಿನು ಮೋರ್ಯಾ, ಹರ್ಮನ್, ಮತ್ತು ಮಿಲಿಂದ್ ಅವರು ಬಿಪಾಶಾ ಅವರ ಜೊತೆ ಒಳ್ಳೆಯ ಗೆಳೆಯರಂತಿದ್ದಾರೆ. ಆದರೂ ಅವರನ್ನು ಬಿಪಾಶಾ ಕರೆದಿಲ್ಲ. ಆದರೆ ದಿನು ಮೋರ್ಯಾ ಅವರು ತಮಗೆ ಆಹ್ವಾನ ಇಲ್ಲದಿದ್ದರೂ ನವ ಜೋಡಿಗಳನ್ನು ಸಂಪರ್ಕಿಸಿ ಶುಭ ಹಾರೈಸಿದ್ದಾರಂತೆ.['ಮದುವೆಯ ಕರೆಯೋಲೆ' ಹಂಚಲು ಶುರುಮಾಡಿದ ಬಿಪಾಶಾ-ಕರಣ್]

  ಏಪ್ರಿಲ್ 29 ರಂದು, Lower Parel, ಮುಂಬೈನ Pallazio Banquet ಹಾಲ್ ನಲ್ಲಿ ಸಂಜೆ 6.30ಕ್ಕೆ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೊವರ್ ಅವರ ವಿವಾಹ ಮಹೋತ್ಸವ ನೆರವೇರಲಿದೆ.

  ಬಿಪಾಶಾ ಅವರು 'ಎಕ್ಸ್' ಬಾಯ್ ಫ್ರೆಂಡ್ ಗಳ ಜೊತೆ ಹಾಗೂ ಹೊಸ ಗೆಳೆಯ ಕರಣ್ ಜೊತೆ ತೆಗಿಸಿಕೊಂಡಿರುವ ಫೋಟೋ ಗ್ಯಾಲರಿ ನೋಡಲು ಸ್ಲೈಡ್ಸ್ ಕ್ಲಿಕ್ಕಿಸಿ...

  'X' ಬಾಯ್ ಫ್ರೆಂಡ್ ಗಳಿಗೆ ಮದುವೆ ಕಾರ್ಡ್ ಕೊಡೋಲ್ವಂತೆ ಬೀಪ್ಸ್

  English summary
  Actress Bipasha Basu, has decided not to invite her ex-boyfriends to the wedding, and has cut off their names from the guest list. Bipasha Basu and Karan Singh Grover, are all set to tie the knot on April 29, 2016. Bips ex's include Dino Morea, Milind Soman, Harman Baweja and John Abraham.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X