ಗದರ್ 2 'ಭಾರತ ಮತ್ತು ಪಾಕಿಸ್ತಾನಕ್ಕೆ ಒಳ್ಳೆ ಸಂದೇಶ': ನಟಿ ಹೇಮಾ ಮಾಲಿನಿ

ಬಾಲಿವುಡ್‌ನ ಬ್ಲಾಕ್‌ಬಸ್ಟರ್ ಚಿತ್ರ ಗದರ್ 2 ನಲ್ಲಿ ಸನ್ನಿ ಡಿಯೋಲ್ ಅವರ ಪಾತ್ರವನ್ನು ನಟಿ ಮತ್ತು ಬಿಜೆಪಿ ಸಂಸದೆ ಹೇಮಾ ಮಾಲಿನಿ ಮೆಚ್ಚಿಕೊಂಡಿದ್ದಾರೆ. ಪಾತ್ರವನ್ನು ಮಾಡಿರುವುದಕ್ಕಾಗಿ ಸನ್ನಿ ಡಿಯೋಲ್ ಅವರನ್ನು ಮನಸಾರೆ ಶ್ಲಾಘಿಸಿದ್ದಾರೆ. ಹೇಮಾ ಮಾಲಿನಿ ಸನ್ನಿ ಡಿಯೋಲ್ ತಂದೆ ಮತ್ತು ನಟ ಧರ್ಮೇಂದ್ರ ಅವರನ್ನು ವಿವಾಹವಾಗಿದ್ದಾರೆ.

ಮುಂಬೈನ ಥಿಯೇಟರ್‌ನಲ್ಲಿ ಗದರ್ 2 ಚಲನಚಿತ್ರವನ್ನು ನೋಡಿದ ನಟಿ ಹೇಮಾ ಮಾಲಿನಿ, ಚಿತ್ರವನ್ನು 'ಇಂಟರೆಸ್ಟಿಂಗ್' ಎಂದು ಹೊಗಳಿದ್ದಾರೆ. ಇದರ ಜೊತೆಗೆ ಇದು 'ಭಾರತ ಮತ್ತು ಪಾಕಿಸ್ತಾನಕ್ಕೆ ಉತ್ತಮ ಸಂದೇಶ' ಎಂದು ಹೇಮಾ ಮಾಲಿನಿ ಹೇಳಿದ್ದಾರೆ.

BJP MP Hema Malini Hema Malini reaction after watching Sunny Deols Gadar 2

ಗದರ್ 2 ಬಗ್ಗೆ ಹೇಮಾ ಮಾಲಿನಿ ವಿಮರ್ಶೆ

ಸಿನಿಮಾ ನೋಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ಹೇಮಾ ಮಾಲಿನಿ, "ನಾನು ಈಗಷ್ಟೇ ಗದರ್ 2 ಅನ್ನು ನೋಡಿ ಬಂದೆ. ಇದು ಅದ್ಭುತ ಸಿನಿಮಾ. ನಾನು ಏನನ್ನು ನಿರೀಕ್ಷಿಸಿದ್ದೇನೋ ಅದು ಸರಿಯಾಗಿಯೇ ಇದೆ. ನೋಡುವಾಗ ಇದು 70 ಮತ್ತು 80 ರ ದಶಕದ ಕಾಲದ ಚಲನಚಿತ್ರದಂತೆ ಭಾಸವಾಯಿತು. ಅನಿಲ್ ಶರ್ಮಾ ಸಿನಿಮಾವನ್ನು ಸುಂದರವಾಗಿ ನಿರ್ದೇಶಿಸಿದ್ದಾರೆ" ಎಂದು ಹೇಳಿದ್ದಾರೆ.

ಶಾರುಖ್ ಖಾನ್‌ರ ಪಠಾಣ್‌ನ ಬಾಕ್ಸ್ ಆಫೀಸ್ ದಾಖಲೆಗಳನ್ನು ಸರಿಗಟ್ಟಲಿದೆಯೇ ಗದರ್ 2?
ಹೇಮಾ ಮಾಲಿನಿಯಿಂದ ಸನ್ನಿ ಡಿಯೋಲ್ ಶ್ಲಾಘನೆ

ಸಿನಿಮಾವನ್ನು ಹೊಗಳಿದ್ದು ಮಾತ್ರವಲ್ಲದೆ, ಹೇಮಾ ಮಾಲಿನಿ ಸನ್ನಿ ಡಿಯೋಲ್ ಅವರನ್ನು ಹೊಗಳಿದ್ದಾರೆ. "ಸನ್ನಿ ಅದ್ಭುತವಾಗ ನಟಿಸಿದ್ದಾರೆ. ಉತ್ಕರ್ಷ್, ಅನಿಲ್ ಶರ್ಮಾ ಜಿ ಅವರ ಮಗ ಅವರೂ ಸುಂದರ ನಟನೆ ಮಾಡಿದ್ದಾರೆ. ಹೊಸ ಹುಡುಗಿ ಕೂಡ ತುಂಬಾ ಚೆನ್ನಾಗಿದ್ದಾರೆ. ಚಿತ್ರ ನೋಡಿದ ನಂತರ ದೇಶದ ಬಗ್ಗೆ ಉಂಟಾಗಬೇಕಾದ ದೇಶಪ್ರೇಮವಿದೆ. ಕೊನೆಯಲ್ಲಿ ಮುಸಲ್ಮಾನರ ಸಹೋದರತ್ವದ ವಿಷಯವನ್ನೂ ತೋರಿಸಲಾಗಿದೆ. ಇದು ಭಾರತ ಮತ್ತು ಪಾಕಿಸ್ತಾನಕ್ಕೆ ಉತ್ತಮ ಸಂದೇಶ" ಎಂದು ಹೇಳಿದ್ದಾರೆ.

BJP MP Hema Malini Hema Malini reaction after watching Sunny Deols Gadar 2

'ಗದರ್ 2 ಬಾಕ್ಸ್ ಆಫೀಸ್ ಕಲೆಕ್ಷನ್'

ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಅಭಿನಯದ ಗದರ್ 2 ಚಿತ್ರವು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಈವರೆಗೆ 300 ಕೋಟಿ ರೂಪಾಯಿಯ ಗಡಿ ದಾಟಿದೆ. ಅನಿಲ್ ಶರ್ಮಾ ನಿರ್ದೇಶಿಸಿದ ಈ ಚಿತ್ರವು 2001 ರ ಬ್ಲಾಕ್‌ಬಸ್ಟರ್ "ಗದರ್: ಏಕ್ ಪ್ರೇಮ್ ಕಥಾ" ನ ಸೀಕ್ವೆಲ್ ಆಗಿದೆ. ಗದರ್ 2 ಚಿತ್ರ ಆಗಸ್ಟ್ 11 ರಂದು ಬಿಡುಗಡೆಯಾಗಿದೆ.

More from Filmibeat

English summary
Hema Malini reaction after watching Sunny Deol's Gadar 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X