twitter
    For Quick Alerts
    ALLOW NOTIFICATIONS  
    For Daily Alerts

    ಸುಶಾಂತ್ ಸಿಂಗ್ ಪ್ರಕರಣಕ್ಕೆ ತಿರುವು: 'ಸ್ಟನ್ ಗನ್' ಬಳಸಿ ಕೊಲೆ ಮಾಡಲಾಗಿದ್ಯಾ?

    |

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟು ಎರಡು ತಿಂಗಳು ಕಳೆದಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು ವಿವಿಧ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಆದರೆ, ಸುಶಾಂತ್ ಅವರ ಸಾವು ಆತ್ಮಹತ್ಯೆಯಲ್ಲ, ಇದು ಪೂರ್ವ ನಿಯೋಜಿತ ಕೊಲೆ ಎಂದು ಕುಟುಂಬಸ್ಥರು ಹಾಗೂ ಅಭಿಮಾನಿಗಳು ವಾದಿಸುತ್ತಿದ್ದಾರೆ.

    Recommended Video

    Upendra ಪರಿಚಯಿಸಲು ಹೊರಟಿರೋ ಹೊಸ ಹೀರೋ ಯಾರು ? | Filmibeat Kannada

    ಸುಶಾಂತ್ ಅವರದ್ದು ಕೊಲೆ ಎನ್ನುವುದಕ್ಕೆ ಹಲವು ಅನುಮಾನಗಳನ್ನ ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ. ಸುಶಾಂತ್ ಅವರ ಮೃತ ದೇಹದ ಮೇಲೆ ಆಗಿರುವ ಗುರುತು, ಕತ್ತಿನ ಮೇಲೆ ಆಗಿರುವ ಗುರುತು, ಗೆಳತಿ ರಿಯಾ ಚಕ್ರವರ್ತಿ ಜೊತೆಗಿನ ಮನಸ್ತಾಪ, ಸುಶಾಂತ್ ಸಾಯುವುದಕ್ಕೂ ಹಿಂದಿನ ದಿನಗಳಲ್ಲಿ ನಡೆದಿರುವ ಘಟನೆಗಳು, ಹಣದ ವ್ಯವಹಾರ ಹೀಗೆ ಒಂದೊಂದು ವಿಚಾರದಲ್ಲೂ ಇದು ಕೊಲೆ ಎಂದು ಆಗ್ರಹಿಸುತ್ತಿದ್ದಾರೆ.

    ಆತ್ಮಹತ್ಯೆನಾ ಅಥವಾ ಕೊಲೆನಾ? ಅನುಮಾನದಲ್ಲೇ ಅಂತ್ಯವಾಯ್ತು ತಾರೆಯರ ಸಾವುಆತ್ಮಹತ್ಯೆನಾ ಅಥವಾ ಕೊಲೆನಾ? ಅನುಮಾನದಲ್ಲೇ ಅಂತ್ಯವಾಯ್ತು ತಾರೆಯರ ಸಾವು

    ಇದೀಗ, ಸುಶಾಂತ್ ಪ್ರಕರಣದಲ್ಲಿ 'ಸ್ಟನ್ ಗನ್' ಬಳಕೆ ಆಗಿದ್ಯಾ ಎಂಬ ಅನುಮಾನ ವ್ಯಕ್ತವಾಗಿದೆ. ಸ್ಟನ್ ಗನ್ ಬಳಸಿ ಸುಶಾಂತ್ ಅವರನ್ನು ಕೊಲ್ಲಲಾಗಿದೆ ಎಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಿರುವ ಸುಬ್ರಮಣಿಯನ್ ಸ್ವಾಮಿ ಎನ್ಐಎ ತನಿಖೆ ಮಾಡಲಿ ಎಂದು ಆಗ್ರಹಿಸಿದ್ದಾರೆ. ಅಷ್ಟಕ್ಕೂ, ಏನಿದು ಸ್ಟನ್ ಗನ್? ಸುಶಾಂತ್ ಸಿಂಗ್ ಪ್ರಕರಣದಲ್ಲಿ ಈ ವಿಷಯ ಏಕೆ ಚರ್ಚೆಯಾಗುತ್ತಿದೆ? ಮುಂದೆ ಓದಿ...

    ಕೊಲೆ ಎಂದು ಹೇಳುತ್ತಿರುವ ಸುಬ್ರಮಣಿಯನ್ ಸ್ವಾಮಿ

    ಕೊಲೆ ಎಂದು ಹೇಳುತ್ತಿರುವ ಸುಬ್ರಮಣಿಯನ್ ಸ್ವಾಮಿ

    ಸುಶಾಂತ್ ಸಿಂಗ್ ರಜಪೂತ್ ಅವರದ್ದು ಸಹಜ ಸಾವಲ್ಲ, ಅದು ಕೊಲೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಈ ಹಿಂದೆಯೂ ಹೇಳಿದ್ದರು. ಈಗಲೂ ಅದೇ ವಿಚಾರವನ್ನು ಹೇಳುತ್ತಿದ್ದಾರೆ. ಇದು ಕೊಲೆ ಎನ್ನುವುದಕ್ಕೆ 26 ಕಾರಣಗಳನ್ನು ನೀಡಿದ್ದ ಸುಬ್ರಮಣಿಯನ್ ಸ್ವಾಮಿ ಈಗ ಸ್ಟನ್ ಗನ್ ಬಳಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

    ಸ್ಟನ್ ಗನ್ ಬಳಸಿ ಕೊಲೆ ಮಾಡಲಾಗಿದ್ಯಾ?

    ಸ್ಟನ್ ಗನ್ ಬಳಸಿ ಕೊಲೆ ಮಾಡಲಾಗಿದ್ಯಾ?

    ಸುಶಾಂತ್ ಸಿಂಗ್ ಅವರ ಕತ್ತಿನ ಮೇಲೆ ಗಾಯದ ಗುರುತಿದೆ. ಅದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸ್ಟನ್ ಗನ್ ಗೆ ಹೋಲಿಕೆಯಾಗುತ್ತಿದೆ ಎಂದು ನೆಟ್ಟಿಗನೊಬ್ಬ ಫೋಟೋ ಸಮೇತ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾನೆ. ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಸುಬ್ರಮಣಿಯನ್ ಸ್ವಾಮಿ ''ಈ ಗನ್‌ನ್ನು ಯಾವ ದೇಶದಿಂದ ಕಳ್ಳಸಾಗಣೆ ಮಾಡಲಾಗಿದಯೇ? ಈ ಬಗ್ಗೆ ಎನ್ಐಎ (National Investigation Agency - ರಾಷ್ಟ್ರೀಯ ತನಿಖಾ ಸಂಸ್ಥೆ) ತನಿಖೆ ಮಾಡಲಿ' ಎಂದು ಆಗ್ರಹಿಸಿದ್ದಾರೆ.

    ನಟ ಸುಶಾಂತ್ ಕೊಲೆಯಾಗಿದ್ದಾರೆ, ಸ್ವಾಮಿ ನೀಡಿದ 26 ಕಾರಣ

    ಯುಎಸ್‌ನಲ್ಲಿ 'ಸ್ಟನ್ ಗನ್' ಬಳಕೆ!

    ಯುಎಸ್‌ನಲ್ಲಿ 'ಸ್ಟನ್ ಗನ್' ಬಳಕೆ!

    ಯುಎಸ್‌ನಲ್ಲಿ ಈ ಸ್ಟನ್ ಗನ್ (ಕರೆಂಟ್ ಶಾಕ್-ಹೈ ವೋಲ್ಟೆಜ್) ಹೆಚ್ಚು ಬಳಕೆಯಾಗುತ್ತದೆ ಎಂದು ಹೇಳಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಔಷಧಿಗಳ ಪ್ರಯೋಗ ಸಂದರ್ಭದಲ್ಲಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಸ್ಟನ್ ಗನ್ ಬಳಕೆ ಮಾಡುತ್ತಾರೆ ಎನ್ನಲಾಗಿದೆ. ಸ್ಟನ್ ಗನ್ ಬಳಸಿ ಯುಎಸ್‌ ನೇವಿ ಸೀಲ್‌ನಲ್ಲಿ ಹತ್ಯೆ ಸಹ ಮಾಡಲಾಗಿದೆ, ಹತ್ಯೆ ಮಾಡಿ ಅದನ್ನು ಆತ್ಮಹತ್ಯೆ ಎಂದು ನಂಬಿಸಲಾಗಿತ್ತು. ಆದರೆ, ವಿಧಿವಿಜ್ಞಾನ ತಂದವರು ಅದನ್ನು ಕೊಲೆ ಎಂದು ಸಾಬೀತು ಪಡಿಸಿದ್ದರು ಎಂಬ ವಿಚಾರವೂ ಇಲ್ಲಿ ಸ್ಮರಿಸಬಹುದು.

    ಎನ್ಐಎ ತನಿಖೆಗೆ ಆಗ್ರಹ!

    ಎನ್ಐಎ ತನಿಖೆಗೆ ಆಗ್ರಹ!

    ಜೂನ್ 14ರಂದು ಸಾವನ್ನಪ್ಪಿದ್ದ ಸುಶಾಂತ್ ಸಿಂಗ್ ಪ್ರಕರಣವನ್ನು ಮುಂಬೈ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಸುಶಾಂತ್ ತಂದೆ ದೂರಿನ ಹಿನ್ನೆಲೆ ಪಾಟ್ನಾ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಬಿಹಾರ ಸರ್ಕಾರ ಸಿಬಿಐಗೆ ಈ ಪ್ರಕರಣವನ್ನು ವರ್ಗಾವಣೆ ಮಾಡಿದೆ. ಜಾರಿ ನಿರ್ದೇಶನಾಲಯ ಸಹ ಮನಿ ಲ್ಯಾಂಡರಿಂಗ್ ಕೇಸ್ ದಾಖಲಿಸಿಕೊಂಡಿದೆ. ಈಗ ಸ್ಟನ್ ಗನ್ ವಿಚಾರದಲ್ಲಿ ಎನ್ಐಎ ತನಿಖೆ ಆಗಲಿ ಎಂದು ಸುಬ್ರಮಣಿಯನ್ ಸ್ವಾಮಿ ಒತ್ತಾಯಿಸಿದ್ದಾರೆ.

    English summary
    BJP MP Subramanian Swamy has demanded an NIA probe into the alleged use of stun guns in Sushant Singh's case.
    Thursday, August 13, 2020, 15:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X