For Quick Alerts
  ALLOW NOTIFICATIONS  
  For Daily Alerts

  ಶೀಘ್ರದಲ್ಲಿಯೇ ಪಾಕಿಸ್ತಾನದಲ್ಲೂ ಬಿಜೆಪಿ ಸರ್ಕಾರ: ಕಂಗನಾ ಭವಿಷ್ಯ

  |

  ನಟಿ ಕಂಗನಾ ರಣೌತ್ ಪಾಕಿಸ್ತಾನದ ಸರ್ಕಾರದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಶೀಘ್ರವೇ ಪಾಕಿಸ್ತಾನದಲ್ಲಿಯೂ ಬಿಜೆಪಿ ಸರ್ಕಾರ ರಚನೆ ಆಗಲಿದೆ ಎಂದಿದ್ದಾರೆ ಕಂಗನಾ.

  ಕಂಗನಾ ಅವರ ಬಿಜೆಪಿ ಪ್ರೀತಿ, ಪಾಕಿಸ್ತಾನ ದ್ವೇಷ ಪರಿಚಿತವೇ. ಟ್ವಿಟ್ಟರ್‌ನಲ್ಲಿ ಅವರು ಆಗಾಗ್ಗೆ ಬಿಜೆಪಿ ಪರವಾಗಿ, ಸರ್ಕಾರದ ಪರವಾಗಿ ಟ್ವೀಟ್‌ಗಳನ್ನು ಮಾಡುತ್ತಲೇ ಇರುತ್ತಾರೆ.

  ಇದೀಗ ಭಾರತ ತಯಾರಿಸಿರುವ 45 ಮಿಲಿಯನ್ ವ್ಯಾಕ್ಸಿನ್ ಅನ್ನು ವ್ಯಾಕ್ಸಿನೇಷನ್ ಮತ್ತು ರೋಗನಿರೋಧ ಮದ್ದು ವಿತರಣೆ ಜಾಗತಿಕ ಒಕ್ಕೂಟ ಕಾರ್ಯಕ್ರಮದಡಿ ಪಾಕಿಸ್ತಾನಕ್ಕೆ ನೀಡುತ್ತಿರುವ ಸುದ್ದಿಯ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ ರನೌತ್, 'ಇದರ ಅರ್ಥವೆಂದರೆ, ಪಾಕಿಸ್ತಾನ ಸಹ ನಮ್ಮಿಂದಲೇ ತುಂಡಾದ ಭಾಗ. ಅಲ್ಲೂ ಸಹ ಆದಷ್ಟು ಶೀಘ್ರವಾಗಿ ಬಿಜೆಪಿ ಸರ್ಕಾರ ರಚನೆ ಆಗಲಿದೆ. ಭಯೋತ್ಪಾದಕರು ನಮ್ಮವರಲ್ಲ, ಆದರೆ ಅಲ್ಲಿನ ಜನ ನಮ್ಮವರು' ಎಂದಿದ್ದಾರೆ ಕಂಗನಾ.

  ನಂತರ ಅದೇ ಟ್ವೀಟ್‌ನ ಕಮೆಂಟ್ ಒಂದಕ್ಕೆ ಉತ್ತರಿಸಿರುವ ಕಂಗನಾ 'ಮೋದಿಗೆ ನಾವು ಬೇಕಾಗಿಲ್ಲ. ನಮಗೆ ಮೋದಿ ಬೇಕಾಗಿದ್ದಾರೆ. ಅಖಂಡ ಭಾರತ ನಿರ್ಮಾಣಕ್ಕಾಗಿ ಮೋದಿ ನಮಗೆ ಬೇಕಾಗಿದ್ದಾರೆ. ನಾವೆಲ್ಲರೂ ಮತ್ತೆ ಮೋದಿ ಅವರನ್ನೇ ಪ್ರಧಾನಿಯಾಗಿ ಆಯ್ಕೆ ಮಾಡಬೇಕಿದೆ' ಎಂದು ಟ್ವೀಟ್ ಮಾಡಿದ್ದಾರೆ.

  ಮುಂದುವರೆದು, 'ಇನ್ನೆರಡು ಭಾರಿ ಅವರು ಪ್ರಧಾನಿ ಆದರೆ ಸಾಕು, ಭಾರತವನ್ನು ತನ್ನ ಹಳೆಯ ಸುವರ್ಣಯುಗಕ್ಕೆ ಮೋದಿ ಕರೆದುಕೊಂಡು ಹೋಗುತ್ತಾರೆ. ಆ ನಂತರ ಅವರು ಏನಾದರೂ ಮಾಡಿಕೊಳ್ಳಲಿ. ಆದರೆ ಈಗ ಮೋದಿ ಅವರ ಪ್ರತಿ ಉಸಿರು ಅಖಂಡ ಭಾರತದ ಕನಸೇ ಕಾಣುತ್ತಿರಬೇಕು. ನಾವೆಲ್ಲರೂ ಮನವಿ ಮಾಡಿದರೆ ಆ ಮನವಿಯನ್ನು ಅವರು ಖಂಡಿತ ಪುರಸ್ಕರಿಸುತ್ತಾರೆ ಎಂಬ ನಂಬಿಕೆ ನನಗೆ ಇದೆ ' ಎಂದಿದ್ದಾರೆ ಕಂಗನಾ.

  ಉಮಾಪತಿ ಗಿಫ್ಟ್,ತರುಣ್ ಗೆ ಕ್ರೆಡಿಟ್ ಅಂತಿದ್ದಾರೆ ರಾಬರ್ಟ್ ನೋಡಿದ ಪ್ರೇಕ್ಷಕರು | Roberrt | Filmibeat Kannada

  ಕಂಗನಾ ಅವರ ಈ ಟ್ವೀಟ್‌ ಸರಣಿಗೆ ಸಾಕಷ್ಟು ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

  English summary
  Actress Kangana Ranaut said in a tweet that BJP will form government in Pakistan soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X