»   » ಸಲ್ಮಾನ್ ಖಾನ್ ಗಾಗಿ ಶುರುವಾಯ್ತು ಅಭಿಯಾನ

ಸಲ್ಮಾನ್ ಖಾನ್ ಗಾಗಿ ಶುರುವಾಯ್ತು ಅಭಿಯಾನ

Posted By:
Subscribe to Filmibeat Kannada

ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್ ಗೆ ಐದು ವರ್ಷ ಜೈಲು ಶಿಕ್ಷೆ ಪ್ರಕಟವಾಗಿದೆ. ಸಲ್ಲು ಬಾಯ್ ಜೈಲು ಸೇರಿರುವುದಕ್ಕೆ ಬಾಲಿವುಡ್ ಸಿನಿಮಾಮಂದಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಸಲ್ಮಾನ್ ಆಪ್ತರು ಮತ್ತು ಕುಟುಂಬದವರು ಸಲ್ಮಾನ್ ರನ್ನ ದೋಷಮುಕ್ತರಾಗಿ ಮಾಡುವುದು ಹೇಗೆ ಎಂದು ಯೋಚನೆ ಮಾಡುತ್ತಿದ್ದಾರೆ.

ಕೆಲವರು ಸಲ್ಮಾನ್ ಪರ ವಹಿಸಿಕೊಂಡರೆ ಇನ್ನೂ ಕೆಲವರು ಕಾನೂನಿಗೆ ತಲೆಬಾಗಲೇ ಬೇಕು ಎನ್ನುವ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಕೇವಲ ಸಿನಿಮಾದಲ್ಲಿನ ಅಭಿನಯ ಮಾತ್ರವಲ್ಲದೆ ಸಾಮಾಜಿಕ ಕೆಲಸಗಳಿಂದಲೂ ಗುರುತಿಸಿಕೊಂಡಿರುವ ಸಲ್ಮಾನ್ ಖಾನ್ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಸಲ್ಲು ಜೈಲು ಪಾಲಾಗುತ್ತಿದ್ದಾರೆ ಎನ್ನುವ ವಿಚಾರ ತಿಳಿದ ತಕ್ಷಣವೇ ಅಭಿಮಾನಿಗಳು ಸಲ್ಮಾನ್ ಪರವಾಗಿ ಅಭಿಯಾನ ಆರಂಭ ಮಾಡಿದ್ದಾರೆ.

ಸಲ್ಮಾನ್ ಗೆ ಜಾಮೀನು ಸಿಕ್ಕಿಲ್ಲ ಅಂದ್ರೆ 800 ಕೋಟಿ ನಷ್ಟ.! ಎಲ್ಲಿಂದ ಎಷ್ಟು ಕೋಟಿ.?

ಸಲ್ಮಾನ್ ಜೈಲು ಸೇರಿರುವುದನ್ನ ಸಹಿಸಲಾರದ ಅಭಿಮಾನಿಗಳು ಹೊಸದೊಂದು ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಹಾಗಾದರೆ ಹೇಗಿದೆ ಸಲ್ಲು ಫ್ಯಾನ್ಸ್ ನಡೆಸುತ್ತಿರುವ ಅಭಿಯಾನ? ಅಭಿಮಾನಿಗಳ ಜೊತೆ ಕೈ ಜೋಡಿಸಿರುವವರು ಯಾರು? ಇಲ್ಲಿ ಸಂಪೂರ್ಣ ಮಾಹಿತಿ ಮುಂದೆ ಓದಿ

ಸಲ್ಮಾನ್ ಗಾಗಿ ಅಭಿಯಾನ

ಸಲ್ಮಾನ್ ಗೆ ಜೈಲು ಶಿಕ್ಷೆ ಆಗಬಾರದು ಎಂದು ಅಭಿಮಾನಿಗಳು ಅಭಿಯಾನ ಆರಂಭ ಮಾಡಿದ್ದಾರೆ. ಸಾಮಾಜಿಕ ಜಾಲತಾಣವನ್ನು ಇದಕ್ಕೆ ಉಪಯೋಗಿಸಿಕೊಂಡಿದ್ದು, ಸಲ್ಲು ಫ್ಯಾನ್ಸ್ ಇದಕ್ಕೆ ಸಾಥ್ ನೀಡಿದ್ದಾರೆ.

ಐ ಸ್ಟ್ಯಾಂಡ್ ವಿತ್ ಸಲ್ಮಾನ್

ಐ ಸ್ಟ್ಯಾಂಡ್ ವಿತ್ ಸಲ್ಮಾನ್ ಎಂದು ಫೇಸ್ ಬುಕ್ ನಲ್ಲಿ ಪೇಜ್ ಕ್ರಿಯೆಟ್ ಮಾಡಲಾಗಿದೆ. ಸಾವಿರಾರು ಅಭಿಮಾನಿಗಳು ನಾವು ಸಲ್ಮಾನ್ ರನ್ನ ಬೆಂಬಲಿಸುತ್ತೇವೆ ಎಂದು ಸ್ಟೇಟಸ್ ಗಳನ್ನ ಅಪ್ಲೋಡ್ ಮಾಡಿದ್ದಾರೆ.

ವೈರಲ್ ಆಯ್ತು ಪುಟ್ಟ ಮಗುವಿನ ಮಾತು

ಐ ಸ್ಟ್ಯಾಂಡ್ ವಿತ್ ಸಲ್ಮಾನ್ ಫೇಸ್ ಬುಕ್ ಪೇಜ್ ನಲ್ಲಿ ಪುಟ್ಟ ಹುಡುಗಿ ಸಲ್ಮಾನ್ ಖಾನ್ ಬಗ್ಗೆ ಅಳುತ್ತಾ ಮಾತನಾಡಿರುವ ವಿಡಿಯೋ ಸಖತ್ ವೈರಲ್ ಆಗಿದೆ. ವಿಡಿಯೋದಲ್ಲಿ ಸಲ್ಮಾನ್ ಜೈಲಿಗೆ ಹೋಗಬಾರದು, ಅವರು ಹೊರಗಡೆ ಬರುವವರೆಗೂ ನಾನು ಊಟ ಮಾಡಲ್ಲ ಎಂದು ಪುಟ್ಟ ಬಾಲಕಿ ಹೇಳಿದ್ದಾಳೆ.

ಸಲ್ಮಾನ್ ಒಳ್ಳೆ ಮನುಷ್ಯ

ಸಲ್ಮಾನ್ ಖಾನ್ ತಪ್ಪು ಮಾಡಿದ್ದಾರೆ ಆದರೆ ಅದಕ್ಕಿಂತ ಹೆಚ್ಚಾಗಿ ಉತ್ತಮ ಕೆಲಸಗಳನ್ನ ಮಾಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಕ್ಕಳ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ. ಅದನ್ನು ಪರಿಗಣಿಸಿ ಶಿಕ್ಷೆಯನ್ನು ತಪ್ಪಿಸಿ ಎಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.

ಸಲ್ಮಾನ್ ಖಾನ್ ಜೈಲು ಸೇರಿದ್ದಕ್ಕೆ ಅತೀವ ಸಂತಸಗೊಂಡ ನಟಿ.!

English summary
Jodhpur court has convicted Bollywood Actor Salman Khan in 1998 Blackbuck poaching case. But Salman Khan fans have taken Social Media to campaign that 'Dabbang' star should be acquitted

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X