ಸಲ್ಲೂ ಬೇಟೆ ಹುಚ್ಚಿಗೆ 'ಸಾಥ್' ಕೊಟ್ಟವರಿಗೆ ಶುರುವಾಯ್ತು ಭೀತಿ

By ಜೇಮ್ಸ್ ಮಾರ್ಟಿನ್

ಬಾಲಿವುಡ್ ನ ಬ್ಯಾಡ್ ಬ್ಯಾಯ್ ಎಂದೇ ಕರೆಸಿಕೊಳ್ಳುವ 'ಬೀಯಿಂಗ್ ಹ್ಯೂಮನ್' ಮೂಲಕ ಅನೇಕ ನಿರ್ಗತಿಕರ ಪಾಲಿಗೆ ಆಶಾಕಿರಣವಾಗಿರುವ ಸಲ್ಮಾನ್ ಖಾನ್ ಜತೆಗಾರರಿಗೆ ಮತ್ತೆ ಸಂಕಟ ಶುರುವಾಗಿದೆ.

ಬೆನಿಫಿಟ್ ಆಫ್ ಡೌಟ್ ಅಧಾರದ ಮೇಲೆ ಸಲ್ಲೂ ಮಿಯಾ ಏನೋ ಜಾಮೀನು ಪಡೆದು ಹೊರ ಬಂದಿದ್ದಾನೆ. ಆದರೆ, ಜತೆಗಾರರು ಈ ಕೇಸಿನಿಂದ ಖುಲಾಸೆಗೊಂಡರೂ ಮತ್ತೆ ವಿಚಾರಣೆ ಭೀತಿಯಲ್ಲಿದ್ದಾರೆ.

ಕೃಷ್ಣಮೃಗ ಬೇಟೆ ಪ್ರಕರಣದ ಟೈಮ್ ಲೈನ್

1998ರ ಕೃಷ್ಣಮೃಗ ಬೇಟೆ ಪ್ರಕರಣ ಗೊತ್ತಿರಬೇಕಲ್ಲ. ಹಮ್ ಸಾಥ್ ಸಾಥ್ ಹೈ ಚಿತ್ರದ ಶೂಟಿಂಗ್ ಮಾಡೋಕೆ ರಾಜಸ್ಥಾನಕ್ಕೆ ಹೋಗಿದ್ದ ಸಲ್ಲೂ ಅಂಡ್ ಗ್ಯಾಂಗಿಗೆ ಕಂಕಾನಿ ಗ್ರಾಮಕ್ಕೆ ಹೋಗಿ 'ಶೂಟ್' ಮಾಡುವ ಐಡಿಯಾ ಯಾವನ್ ಕೊಟ್ನೋ, ವಿನಾಶದ ಅಂಚಿನಲ್ಲಿರುವ್ ಮುಗ್ಧ ಕೃಷ್ಣಮೃಗ ಬಲಿಯಾಗಿಬಿಟ್ಟಿತು.

'ಕೃಷ್ಣಮೃಗದ ನಾಲ್ಕನೇ ಸಂತತಿಗೆ ಸಿಕ್ತು ನ್ಯಾಯ!'

ಈ ಕೇಸ್ ಏನಾಗಿದೆ: ಸಲ್ಲೂಗೆ ಜಾಮೀನು, ಸೈಫ್ ಅಲಿ ಖಾನ್, ರವೀನಾ ಟಂಡನ್, ನೀಲಂ, ತಬು ಮತ್ತು ಗೈಡ್ ದುಷ್ಯಂತ್ ಸಿಂಗ್ ಗೆ ಪ್ರಕರಣದಿಂದ ಖುಲಾಸೆ ಮಾಡಲಾಗಿದೆ. ಆದರೆ, ಇದನ್ನು ಪ್ರಶ್ನಿಸಿ ರಾಜಸ್ಥಾನ ಸರ್ಕಾರವು ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ.. ಈ ಕೇಸಿನ ಬಗ್ಗೆ ಇನ್ನಷ್ಟು ಮಾಹಿತಿ ಮುಂದಿದೆ.

 'ಹಮ್ ಸಾಥ್ ಸಾಥ್ ಹೈ' ಚಿತ್ರದ ಶೂಟಿಂಗ್ ವೇಳೆ

'ಹಮ್ ಸಾಥ್ ಸಾಥ್ ಹೈ' ಚಿತ್ರದ ಶೂಟಿಂಗ್ ವೇಳೆ

1998ರಲ್ಲಿ 'ಹಮ್ ಸಾಥ್ ಸಾಥ್ ಹೈ' ಚಿತ್ರದ ಶೂಟಿಂಗ್ ವೇಳೆ ಸಲ್ಮಾನ್ ಖಾನ್ ರಿಂದ ರಾಜಸ್ಥಾನದ ಕಂಕನಿ ಹಳ್ಳಿಯ ಬಳಿ ಕೃಷ್ಣಮೃಗ ಬೇಟೆಯಾಡಿದ್ದರು. ಕಂಕನಿ ಗ್ರಾಮಸ್ಥರಿಂದ ಸಲ್ಮಾನ್ ಖಾನ್ ಹಾಗೂ ಇತರ ನಟರ ವಿರುದ್ಧ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವನ್ಯಜೀವಿ ಸಂರಕ್ಷಣೆ ಕಾಯ್ದೆ 51 ಹಾಗೂ ದುಷ್ಟ ಕಾರ್ಯ ಮಾಡಲು ಗುಂಪು ಸೇರಿರುವ ಆರೋಪದ ಮೇಲೆ IPC ಸೆಕ್ಷನ್ 149 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಸಲ್ಮಾನ್ ಖಾನ್ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು.

ಐವರಿಗೆ ಖುಲಾಸೆಯಾಗಿತ್ತು, ಆದರೆ, ಮತ್ತೆ ಸಂಕಷ್ಟ

ಐವರಿಗೆ ಖುಲಾಸೆಯಾಗಿತ್ತು, ಆದರೆ, ಮತ್ತೆ ಸಂಕಷ್ಟ

ಏಪ್ರಿಲ್ 05ರಂದು ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರಿಗೆ 5 ವರ್ಷಗಳ ಕಾಲ ಶಿಕ್ಷೆ ಪ್ರಕಟಿಸಲಾಯಿತು. ಜೋಧಪುರ ಜೈಲಿನಲ್ಲಿ ಎರಡು ರಾತ್ರಿ ಕಳೆದ ಸಲ್ಮಾನ್, ಜಾಮೀನು ಪಡೆದು ಹೊರ ಬಂದರು. ಮಿಕ್ಕ ಎಲ್ಲಾ ನಟ, ನಟಿಯರು ಹಾಗೂ ರಾಜಸ್ಥಾನಿ ಗೈಡ್ ದುಷ್ಯಂತ್ ಸಿಂಗ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಯಿತು. ಬೆನಿಫಿಟ್ ಆಫ್ ಡೌಟ್ ಎಂದು ಪರಿಗಣಿಸಿ, ಘಟನೆ ನಡೆದ ಸ್ಥಳದಲ್ಲಿದ್ದರೂ ಸೋನಾಲಿ ಬೇಂದ್ರೆ, ನೀಲಂ ಕೊಥಾರಿ, ತಬು, ಸೈಫ್ ಅಲಿ ಖಾನ್ ಹಾಗೂ ದುಷ್ಯಂತ್ ಸಿಂಗ್ ಅವರು ಕ್ರೈಂಗೆ ಕುಮ್ಮಕ್ಕು ನೀಡಿದ್ದರ ಬಗ್ಗೆ ಯಾವುದೇ ಸಾಕ್ಷಿ ಸಿಕ್ಕಿರಲಿಲ್ಲ

ತ್ವರಿತವಾಗಿ ಜಾಮೀನು ಪಡೆದಿದ್ದ ಸಲ್ಮಾನ್

ತ್ವರಿತವಾಗಿ ಜಾಮೀನು ಪಡೆದಿದ್ದ ಸಲ್ಮಾನ್

ಈ ಪ್ರಕರಣದಲ್ಲಿ ಸಲ್ಮಾನ್​ ಖಾನ್ ಅವರಿಗೆ 5 ವರ್ಷ ಶಿಕ್ಷೆ ಪ್ರಕಟಿಸಲಾಯಿತು. ಆದರೆ, ಜೋಧಪುರದ ಜೈಲಿನಲ್ಲಿದ್ದ ಸಲ್ಮಾನ್ ಗೆ ಷರತ್ತುಬದ್ಧ ಜಾಮೀನು ತಕ್ಷಣವೇ ಸಿಕ್ಕಿತು. 25 ಸಾವಿರ ರೂ ಭದ್ರತಾ ಠೇವಣಿ ಹಾಗೂ ವೈಯಕ್ತಿಕ ಬಾಂಡ್​ 50 ಸಾವಿರ ರೂ. ಇರಿಸಿ ಜಾಮೀನು ಪಡೆದರು. ವಿದೇಶಕ್ಕೆ ತೆರಳುವಾಗ ಕೋರ್ಟಿನ ಅನುಮತಿ ಅಗತ್ಯ ಎಂಬ ಷರತ್ತು ವಿಧಿಸಲಾಗಿದೆ.

ಸಲ್ಮಾನ್ ಬದುಕಲ್ಲಿ ಏನು ಬದಲಾಗಿಲ್ಲ

ಸಲ್ಮಾನ್ ಬದುಕಲ್ಲಿ ಏನು ಬದಲಾಗಿಲ್ಲ

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದ ಬಾಲಿವುಡ್ ನಟ ಸಲ್ಮಾನ್ ಖಾನ್ ವಿದೇಶಕ್ಕೆ ತೆರಳಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮನ್ನಿಸಿದ ನ್ಯಾಯಾಲಯವ್8, ವಿದೇಶಕ್ಕೆ ತೆರಳಲು ಅನುಮತಿ ನೀಡಿದೆ. ಕೆಲವು ವೈಯಕ್ತಿಕ ಕಾರಣಗಳಿಂದ ನಾಲ್ಕು ದೇಶಗಳಿಗೆ ತೆರಳಬೇಕಿದೆ ಎಂದು ಅರ್ಜಿಯಲ್ಲಿ ತಿಳಿಸಿರುವ ಖಾನ್, ಕೋರ್ಟಿನ ಅನುಮತಿ ಕೇಳಿದ್ದರು.

More from Filmibeat

English summary
Saif, Sonali Bendre, Tabu and Neelam are in trouble as Rajasthan government said it would appeal before the High Court against the acquittal of actors Sonali Bendre, Neelam Kothari, Tabu, Saif Ali Khan and others in the Blackbuck poaching case, ANI reported.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X