twitter
    For Quick Alerts
    ALLOW NOTIFICATIONS  
    For Daily Alerts

    ಕೃಷ್ಣಮೃಗ ಬೇಟೆ ಪ್ರಕರಣ: ಮತ್ತೆ ಕೊರೊನಾ ಸಬೂಬು ಹೇಳಿ ನ್ಯಾಯಾಲಯಕ್ಕೆ ಸಲ್ಮಾನ್ ಗೈರು

    |

    ಕೃಷ್ಣಮೃಗ ಬೇಟೆ ಪ್ರಕರಣದ ವಿಚಾರಣೆಗೆ ಸಲ್ಮಾನ್ ಖಾನ್ ಮತ್ತೆ ನ್ಯಾಯಾಲಯಕ್ಕೆ ಗೈರಾಗಿದ್ದಾರೆ. ಸೆಪ್ಟೆಂಬರ್ 16 ರ ಶನಿವಾರದಂದು ಸಲ್ಮಾನ್ ಖಾನ್ ಜೋದ್‌ಪುರ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ ಸಲ್ಮಾನ್ ಗೈರಾಗಿದ್ದಾರೆ.

    ಕೊರೊನಾ ಕಾರಣ ನೀಡಿರುವ ಸಲ್ಮಾನ್ ಖಾನ್, ಕೊರೊನಾ ಇರುವ ಕಾರಣ ನ್ಯಾಯಾಲಯಕ್ಕೆ ಬರಲಾಗುವುದಿಲ್ಲ ಎಂದು ಹೇಳಿದ್ದಾರೆ. ಸಲ್ಮಾನ್ ಖಾನ್ ಕೊಟ್ಟ ಕಾರಣವನ್ನು ಒಪ್ಪಿಕೊಂಡಿರುವ ನ್ಯಾಯಾಲಯವು ಪ್ರಕರಣವನ್ನು ಫೆಬ್ರವರಿ 06 ಕ್ಕೆ ಮುಂದೂಡಿದೆ.

    1998 ರಲ್ಲಿ ಜೋಧಪುರದಲ್ಲಿ 'ಹಮ್‌ ಸಾಥ್ ಸಾಥ್ ಹೇ' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದ ಸಲ್ಮಾನ್ ಖಾನ್, ಎರಡು ಕೃಷ್ಣಮೃಗಗಳನ್ನು ಬೇಟೆಯಾಗಿ ಕೊಂದಿದ್ದರು. ಈ ಪ್ರಕರಣದಲ್ಲಿ ಜೋಧಪುರ ಟ್ರಯಲ್ ನ್ಯಾಯಾಲಯವು ಸಲ್ಮಾನ್ ಖಾನ್ ಅಪರಾಧಿ ಎಂದು ತೀರ್ಪು ನೀಡಿ, ಐದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

    Blackbuck Poaching Case: Salman Khan Expemted To Attend Court

    ಟ್ರಯಲ್ ಕೋರ್ಟ್ ತೀರ್ಪನ್ನು ಸೆಷನ್ಸ್ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಇದರ ವಿಚಾರಣೆ ಪ್ರಸ್ತುತ ಜೋಧ್‌ಪುರ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ.

    ಕೆಲವು ತಿಂಗಳ ಹಿಂದೆ ಸಹ ಸಲ್ಮಾನ್ ಖಾನ್, ಕೊರೊನಾ ಕಾರಣ ನೀಡಿಯೇ ಪ್ರಕರಣದ ವಿಚಾರಣೆಗೆ ಗೈರಾಗಿದ್ದರು. ಈಗ ಎರಡನೇ ಬಾರಿ ಸಲ್ಮಾನ್ ಖಾನ್ ಕೊರೊನಾ ಕಾರಣ ನೀಡಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ.

    Recommended Video

    KGF ಮೀರಿಸಲಿದೆ ಸಲಾರ್ | Filmibeat Kannada

    ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸೈಫ್ ಅಲಿ ಖಾನ್, ಸೊನಾಲಿ ಬೇಂದ್ರೆ, ನೀಲಂ, ಟಬು ಅವರುಗಳು ಸಹ ಆರೋಪಿ ಆಗಿದ್ದರು. ಆದರೆ ಅವರನ್ನು ನ್ಯಾಯಾಲಯವು ಆರೋಪ ಮುಕ್ತಗೊಳಿಸಿತು. ಇದೇ ಪ್ರಕರಣದಲ್ಲಿ ಸಲ್ಮಾನ್ ಖಾನ್ ಒಂದು ವಾರ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಪ್ರಸ್ತುತ ಜಾಮೀನಿನ ಮೇಲೆ ಸಲ್ಮಾನ್ ಖಾನ್ ಹೊರಗಿದ್ದಾರೆ.

    English summary
    Salman Khan exepmted from attending court hearing in Blackbuck poaching case.
    Monday, January 18, 2021, 15:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X