ತುಂಬಾ ಮುದ್ದಾಗಿ ಕಾಣ್ತಿದ್ದೀಯಾ ; ವಿವಾದಾತ್ಮಕ ನಟಿಗೆ ಮೆಸೇಜ್ ಮಾಡಿದ ಸ್ಟಾರ್ ಕ್ರಿಕೆಟಿಗ - ಬ್ಲಾಕ್ ಮಾಡಿದ ಚೆಲುವೆ
ಕ್ರಿಕೆಟ್ ಮತ್ತು ಸಿನಿಮಾ ಈ ಎರಡು ಭಾರತದಲ್ಲಿ ಕೇವಲ ವೃತ್ತಿಗಳಲ್ಲ. ಬದಲಿಗೆ ಹಲವರ ಪಾಲಿಗೆ ಧರ್ಮ. ಬೆಳ್ಳಿತೆರೆಯ ಗ್ಲಾಮರ್ ಮತ್ತು ಕ್ರೀಡಾಂಗಣದಲ್ಲಿನ ರೋಚಕ ಸಮರ.. ಇವೆರಡು ವಾರಾನುವಾರ ಇಲ್ಲಿ ಸುದ್ದಿಯಾಗುತ್ತಾವೆ. ಇನ್ನೂ ಮೊದಲಾದರೆ ಕ್ರಿಕೆಟ್ ಮತ್ತು ಸಿನಿಮಾದ ನಡುವೆ ಪ್ರೇಮೋದ್ಬವ ಆಗುತ್ತಿತ್ತು. ಆದರೆ ಈಗ ಇದು ಸಾಮಾಜಿಕ ಜಾಲತಾಣದ ಕಾಲ.
ಈ ಕಾಲದಲ್ಲಿ ಹಲವರಿಗೆ ಪ್ರಚಾರದ ಹುಚ್ಚು ಹಿಡಿದಿದೆ. ಹೇಗಾದರೂ ಮಾಡಿ ಪ್ರಚಾರ ಪಡೆಯುವುದಷ್ಟೇ ಹಲವರ ಉದ್ದೇಶವಾಗಿರುತ್ತೆ. ವರ್ಷಾನುವರ್ಷ ಮನದಲ್ಲಿ ಹುದುಗಿದ ರಹಸ್ಯವನ್ನು ಹೊರ ಹಾಕುವುದು, ಯಾವುದಾದರೂ ಸ್ಫೋಟಕ ಹೇಳಿಕೆಯನ್ನು ನೀಡುವುದು.. ಈ ಮೂಲಕ ಗೂಗಲ್‌ನಲ್ಲಿ ಟ್ರೆಂಡ್ ಆಗುವುದು ಹಲವರ ಪಾಲಿಗೆ ಈಗ ಖಯಾಲಿ ಆಗಿದೆ. ಈ ಸಾಲಿನಲ್ಲಿ ಮೊದಲಿಂದ ಮುಂಚೂಣಿಯಲ್ಲಿರುವವರು ಪೂನಂ ಪಾಂಡೆ.

ಹೌದು, ಪ್ರಚಾರ ಪಡೆಯಲು ಏನು ಬೇಕಾದರೂ ಮಾಡುವವರಲ್ಲಿ ಮೊದಲಿಗರು ಪೂನಂ ಪಾಂಡೆ. ತನ್ನ ಸಾವನ್ನೇ ಪ್ರಚಾರಕ್ಕೆ ಬಂಡವಾಳ ಮಾಡಿಕೊಂಡ ಪೂನಂ ಪಾಂಡೆ ತನ್ನ ದೇಹಸಿರಿಯನ್ನ ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಪ್ರದರ್ಶನಕ್ಕೀಡುವ ಮೂಲಕ ಕೂಡ ಗಮನ ಸೆಳೆಯುವ ಪ್ರಯತ್ನ ಮಾಡ್ತಾರೆ. ಸುದ್ದಿಯಾಗ್ತಾರೆ.
ಇಂಥಾ ಪೂನಂ ಪಾಂಡೆ ವರ್ಲ್ಡ್ ಕಪ್ ಸಮರ ನಡೆಯುತ್ತಿರುವ ಈ ಸಮಯದಲ್ಲಿ ಖ್ಯಾತ ಕ್ರಿಕೆಟಿಗನೊಬ್ಬ ನನಗೆ ಸತತವಾಗಿ ಮೆಸೇಜ್ ಮಾಡುತ್ತಿದ್ದ ಎಂದು ಹೇಳಿದ್ದಾರೆ. ನೀವು ತುಂಬಾ ಕ್ಯೂಟ್ ಆಗಿದ್ದೀರಾ ಎಂದು ಹೇಳಿದ್ದ ಎಂದಿದ್ದಾರೆ.
ಈ ಕುರಿತು ''ಫಿಲ್ಮ್ ವಿಂಡೋ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪೂನಂ ಪಾಂಡೆ ಬ್ಲೂ ಟಿಕ್ ಹೊಂದಿರುವ ಹಲವರು ನನಗೆ ಮೆಸೇಜ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆ ಪೈಕಿ ಒಬ್ಬ ಖ್ಯಾತ ಕ್ರಿಕೆಟರ್ ಕೂಡ ಒಬ್ಬ ಎಂದು ಹೇಳಿರುವ ಪೂನಂ ಪಾಂಡೆ ಅದೊಂದು ದಿನ ಆತ ನೀನು ತುಂಬಾ ಮುದ್ದಾಗಿದ್ದೀಯಾ ಎಂದು ನನಗೆ ಮೆಸೇಜ್ ಮಾಡಿದ್ದ ಈ ಮೂಲಕ ಮಾತು ಕಥೆ ಶುರು ಮಾಡಿದ್ದ ಎಂದು ಹೇಳಿದ್ದಾರೆ.
ಮುಂದುವರೆದು ಆ ನಂತರ ಮೆಸೇಜ್‌ಗಳು ನಿರಂತರವಾಗಿ ಬರಲು ಶುರುವಾದವು ಎಂದು ಹೇಳಿರುವ ಪೂನಂ ಪಾಂಡೆ ಅದೊಂದು ದಿನ ಅವನ ವರ್ತನೆ ಮೀತಿ ಮೀರಿತ್ತು ಹೀಗಾಗಿ ನಾನು ಅವನನ್ನು ಬ್ಲಾಕ್ ಮಾಡಿದೆ ಎಂದು ಹೇಳಿದ್ದಾರೆ. ನಾನು ಯಾವುದೇ ಆಸಕ್ತಿ ತೋರಿಸದಿದ್ದರೂ ಆ ಕ್ರಿಕೆಟಿಗ ಮೆಸೇಜ್ ಮಾಡುವುದನ್ನು ನಿಲ್ಲಿಸಲಿಲ್ಲ. ಅವನು ಮತ್ತೆ ಮತ್ತೆ ಮೆಸೇಜ್ ಮಾಡುತ್ತಲೇ ಇದ್ದ, ಎಂದು ಹೇಳಿರುವ ಪೂನಂ, ಆತನ ಉದ್ದೇಶ ನನ್ನ ಜೊತೆ ಕೆಲ ಸಮಯ ಕಳೆಯುವುದಾಗಿತ್ತು, ಹೀಗಾಗಿ ಅವನು ಪ್ರೀತಿಯ ಡ್ರಾಮಾ ಮಾಡಲು ಶುರು ಮಾಡಿದ್ದ, ನನಗೆ ಅವನು ಸೀರಿಯಸ್ ಆಗಿದ್ದಾನೆ ಎಂದು ಅನಿಸಲಿಲ್ಲ ಎಂದು ಹೇಳಿದ್ದಾರೆ. ಕೊನೆಗೆ ಬ್ಲಾಕ್ ಮಾಡಿದೆ ಎಂದಿದ್ದಾರೆ.

ಎಂದಿನಂತೆ ತಮಗೆ ಮೆಸೇಜ್ ಮಾಡಿದ ಆ ಕ್ರಿಕೆಟರ್ ಯಾರು ಎನ್ನುವುದನ್ನು ಪೂನಂ ಪಾಂಡೆ ಹೇಳಿಲ್ಲ. ಹಲವರು ನನಗೆ ಮೆಸೇಜ್ ಮಾಡಿದ್ದಾರೆ ಆದರೆ ನಾನು ಅವರು ಯಾರು ಎನ್ನುವುದನ್ನು ಹೇಳುವುದಿಲ್ಲ ಎಂದು ಹೇಳಿರುವ ಪೂನಂ ಪಾಂಡೆ ನನಗೆ ಇಷ್ಟ ಆಗದವರನ್ನು ನಾನು ಬ್ಲಾಕ್ ಮಾಡಿದ್ದೇನೆ ಎಂದು ಹೇಳಿದ್ದಾರೆ. ಹೆಸರು, ಕುಲ, ಗೋತ್ರ ಕೇಳಬೇಡಿ ನಾನು ಹೇಳುವುದಿಲ್ಲ ಎಂದಿದ್ದಾರೆ.
ಪೂನಂ ಪಾಂಡೆ ಅವರ ಈ ಹೇಳಿಕೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೀಡಾಗಿದೆ. ಪೂನಂ ಪಾಂಡೆ ಅಂತಹ ಬೋಲ್ಡ್ ಚೆಲುವೆ ಕ್ರಿಕೆಟರ್ ನ ಬ್ಲಾಕ್ ಮಾಡಿದ್ದಾರೆ ಅಂದರೆ ಆ ಕ್ರಿಕೆಟರ್ ಕಳುಹಿಸಿದ ಮೆಸೇಜ್‌ಗಳು ಹೇಗಿರಬೇಡ ಎಂದು ಹಲವರು ಚರ್ಚೆ ಮಾಡುತ್ತಿದ್ದಾರೆ. ಕಲ್ಪನೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಇದೆಲ್ಲವೂ ಪ್ರಚಾರದ ಗಿಮಿಕ್ ಅಷ್ಟೇ ಎಂದು ಪೂನಂ ಪಾಂಡೆಗೆ ತಪರಾಕಿ ಹಾಕುತ್ತಿದ್ದಾರೆ. ಮತ್ತೂ ಕೆಲವರು ಪೂನಂ ಪಾಂಡೆ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿರುವ ಕ್ರಿಕೆಟರ್ ಗಳು ಯಾರು ಎಂದು ಪತ್ತೆ ಹಚ್ಚಲು ಮುಂದಾಗಿದ್ದಾರೆ.


Click it and Unblock the Notifications











