ಯಾರೀ ನೀಲಿ ಸೀರೆ ಸುಂದರಿ.. ಇದ್ದಕ್ಕಿದಂತೆ ವೈರಲ್ ಆಗ್ತಿರೋದ್ಯಾಕೆ?

By ಫಿಲ್ಮಿಬೀಟ್ ಡೆಸ್ಕ್

ಇದು ವೈರಲ್ ಜಮಾನ ಕಣ್ರೀ. ಯಾರು, ಯಾವಾಗ, ಯಾಕೆ ವೈರಲ್ ಆಗ್ತಾರೆ ಅಂತ ಹೇಳೋದೇ ಕಷ್ಟ. ಇನ್ನು ಸೆಲೆಬ್ರೆಟಿಗಳ ವಾರೆನೋಟ, ಸಣ್ಣ ನಗು, ನಿಲ್ಲೋದು, ಕೂರೋದು ಹೀಗೆ ಯಾವುದೇ ವಿಚಾರ ವಿಚಿತ್ರ, ವಿಶೇಷ ಅನ್ನಿಸಿಬಿಟ್ರೆ ಸಾಕು ನೆಟ್ಟಿಗರ ಟ್ರೋಲಿಂಗ್‌ಗೆ ಆಹಾರವಾಗಿಡುತ್ತದೆ. ಕೆಲವೊಮ್ಮೆ ಒಳ್ಳೆ ರೀತಿಯಲ್ಲಿ ಟ್ರೋಲ್ ಆದ್ರೆ ಬಹುತೇಹ ಸಮಯದಲ್ಲಿ ನೆಗೆಟಿವ್ ಟ್ರೋಲ್ ಆಗುತ್ತದೆ.

ಮರಾಠಿ ನಟಿ ಗಿರಿಜಾ ಓಕ್ ದಿಢೀರನೆ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಆಕೆ ನೀಡಿದ ಒಂದು ಸಂದರ್ಶನ ಅದರಲ್ಲಿ ಆಕೆ ಆಡಿರುವ ಕೆಲ ಮಾತುಗಳು ನೋಡುಗರ ಗಮನ ಸೆಳೆದಿದೆ. ಇನ್ನು ಆಕೆಯ ಚೆಲುವೆಗೆ ಕೆಲವರು ಮಾರು ಹೋಗಿದ್ದಾರೆ. ಅದೇ ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಟ್ವಿಟರ್‌ನಲ್ಲಿ ಕಳೆದ ನಾಲ್ಕೈದು ದಿನಗಳಿಂದ ನೀಲಿ ಸೀರೆ ಸುಂದರಿ ಹವಾ ಜೋರಾಗಿದೆ. ಈ ಅನಿರೀಕ್ಷಿತ ಪ್ರಚಾರದಿಂದ ಗಿರಿಜಾ ವೃತ್ತಿಜೀವನಕ್ಕೆ ಹೊಸ ತಿರುವು ಸಿಕ್ಕಿದೆ.

Blue Saree Beauty Girija Oak Goes Viral Netizens Compare Her to Sydney Sweeney and amp amp Monica Bellucci

ಅಮೇರಿಕನ್ ನಟಿ ಸಿಡ್ನಿ ಸ್ವೀನಿ ಹಾಗೂ ಇಟಾಲಿಯನ್ ಮಾಡೆಲ್ ಮೋನಿಕಾ ಬೆಲ್ಲುಸಿ ಜೊತೆ ಗಿರಿಜಾ ಓಕ್ ಅವರನ್ನು ಹೋಲಿಸಿ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಗಿರಿಜಾ ಮುಂದೆ ಅವರಿಬ್ಬರು ಏನೇನು ಅಲ್ಲ ಎಂದು ಪೋಸ್ಟ್ ಮಾಡುತ್ತಿದ್ದಾರೆ. ಇದು ಖುದ್ದು ಗಿರಿಜಾ ಓಕ್ ಅವರಿಗೂ ತಲುಪಿದೆ. ಇದು ಸಹಜವಾಗಿಯೇ ಆಕೆಯ ಸಂತಸಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ, ಈ ಫೋಟೊಗಳು ವೈರಲ್ ಆಗಿ ಆಕೆಯ ಹಿನ್ನೆಲೆ ಏನು, ನಟಿಸಿರುವ ಸಿನಿಮಾಗಳು ಯಾವುವು ಎಂದು ಕೆಲವರು ಹುಡುಕಾಡುತ್ತಿದ್ದಾರೆ.

ಈ ದಿಢೀರ್ ಕ್ರೇಜ್ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ನಟಿ ಗಿರಿಜಾ ಓಕ್ ಪ್ರತಿಕ್ರಿಯಿಸಿದ್ದಾರೆ. ಈ ರೀತಿ ವೈರಲ್ ಆಗುತ್ತಿರುವುದು ಖುಷಿ ತಂದಿದೆ ಎಂದಿದ್ದಾರೆ. ನಾನು ಯಾವುದೋ ನಾಟಕದ ರಿಹರ್ಸಲ್‌ನಲ್ಲಿದ್ದೆ. ಹೀಗೆ ವೈರಲ್ ಆಗುತ್ತಿರುವ ಬಗ್ಗೆ ಆಪ್ತರು ಮೆಸೇಜ್ ಮಾಡಿ ತಿಳಿಸಿದರು. ಇದು ನಟಿ ಪ್ರಿಯಾ ಬಾಪತ್ ಅಥವಾ ನಾನಾ ಎಂದು ಕೆಲವರು ಚರ್ಚಿಸುತ್ತಿದ್ದಾರೆ. ಇದು ಒಂದು ಟ್ರೆಂಡ್. ಇದು ಬಂದು ಹೋಗುತ್ತದೆ. ನನ್ನ ಕೆಲಸ ಮಾತ್ರ ಉಳಿಯುತ್ತದೆ. ಈಗ ನನ್ನ ಕೆಲಸದ ಬಗ್ಗೆ ತಿಳಿದುಕೊಳ್ಳುತ್ತಿರುವುದು ಖುಷಿ ತಂದಿದೆ ಎಂದಿದ್ದಾರೆ.

ಸಿಡ್ನಿ ಸ್ವೀನಿ (Sydney Sweeney) ಜೊತೆಗಿನ ಹೋಲಿಕೆಗಳ ಬಗ್ಗೆ ನಟಿ ಗಿರಿಜಾ ಓಕ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. "ಇದು ನನಗೆ ಅಚ್ಚರಿ ಹಾಗೂ ವಿನೋದ ಎನಿಸಿದೆ. ಈ ಹೋಲಿಕೆ ನಿಜಕ್ಕೂ ತಮಾಷೆಯಾಗಿದೆ. ಸಿಡ್ನಿ ಸ್ವೀನಿ (Sydney Sweeney) ಅವರು ಒಬ್ಬ ಪ್ರತಿಭಾವಂತ ನಟಿ. ನನ್ನನ್ನು ಅವರೊಂದಿಗೆ ಹೋಲಿಸಿದ್ದು ನನಗೆ ಖುಷಿಯ ವಿಷಯ ಮತ್ತು ನಾನು ಈ ಎಲ್ಲ ಪೋಸ್ಟ್ಗಳನ್ನು ಆನಂದಿಸುತ್ತಿದ್ದೇನೆ" ಎಂದು ಹೇಳಿದ್ದಾರೆ.

ಗಿರಿಜಾ ಓಕ್ ಹಿನ್ನೆಲೆ

ಮೂಲತಃ ಮರಾಠಿ ಸಿನಿಮಾ ರಂಗದ ಪ್ರಮುಖ ನಟಿ ಗಿರಿಜಾ ಓಕ್. ಮಹಾರಾಷ್ಟ್ರ ಮೂಲದ ಚೆಲುವೆ ಮರಾಠಿ ಹಾಗೂ ಹಿಂದಿ ಸಿನಿಮಾ, ವೆಬ್ ಸೀರಿಸ್‌ಗಳಲ್ಲಿ ಅಭಿನಯಿಸಿದ್ದಾರೆ. ಹಿಂದಿ ಚಿತ್ರವಾದ 'ಶೋರ್ ಇನ್ ದಿ ಸಿಟಿ'ಯಲ್ಲಿ ಅವರ ಪಾತ್ರ ಗಮನಾರ್ಹವಾಗಿತ್ತು. ಅವರು ರಂಗಭೂಮಿಯಲ್ಲೂ ಸಕ್ರಿಯರಾಗಿದ್ದು, ರಂಗಭೂಮಿಯಿಂದಲೇ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದಾರೆ. ಅವರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಈ ಟ್ರೆಂಡಿಂಗ್ ಅವರಿಗೆ ಒಂದು ದೊಡ್ಡ ವೇದಿಕೆಯನ್ನು ಒದಗಿಸಿದೆ.

ಮುಂದಿನ ಹೆಜ್ಜೆಗಳು...

ಈ ಜನಪ್ರಿಯತೆಯ ನಂತರ ಗಿರಿಜಾ ಓಕ್ (Girija Oak) ಅವರ ವೃತ್ತಿಜೀವನವು ಹೊಸ ದಿಕ್ಕಿನಲ್ಲಿ ಸಾಗುವ ಸಾಧ್ಯತೆ ಇದೆ. ಬಾಲಿವುಡ್‌ನಿಂದ ದೊಡ್ಡ ಪ್ರಾಜೆಕ್ಟ್‌ಗಳು ಸಿಗಬಹುದು. ದೊಡ್ಡ ನಿರ್ದೇಶಕರು ಅವರ ಜೊತೆ ಕೆಲಸ ಮಾಡಲು ಆಸಕ್ತಿ ತೋರಿಸುವ ನಿರೀಕ್ಷೆಯಿದೆ. ಗಿರಿಜಾ ಓಕ್ (Girija Oak) ಅವರಿಗೆ ಮತ್ತಷ್ಟು ಯಶಸ್ಸು ಸಿಗಲಿ. ನೀಲಿ ಸೀರೆಯ ಈ ಚೆಲುವೆ ಸಿನಿಮಾ ಲೋಕದಲ್ಲಿ ಇನ್ನಷ್ಟು ಎತ್ತರಕ್ಕೆ ಏರಲಿ.

More from Filmibeat

Read more about: hindi actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X