For Quick Alerts
  ALLOW NOTIFICATIONS  
  For Daily Alerts

  ಕಂಗನಾ ಕಚೇರಿ ನೆಲಸಮ ಕಾರ್ಯಕ್ಕೆ ಚಾಲನೆ: 'ಇದು ಪ್ರಜಾಪ್ರಭುತ್ವದ ಸಾವು' ಎಂದ ನಟಿ

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಕಚೇರಿಯನ್ನು ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ನೆಲಸಮ ಮಾಡುತ್ತಿದ್ದಾರೆ. ಕಂಗನಾ ರಣಾವತ್ ಅಕ್ರಮವಾಗಿ ಕಚೇರಿ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಮುಂಬೈ ಪಾಲಿಕೆ ಇಂದು ಕಟ್ಟಡ ನೆಲಸಮ ಮಾಡುತ್ತಿದೆ.

  Kangana Ranaut vs Shiv Sena,ಮಹಾರಾಷ್ಟ್ರ ಸರ್ಕಾರಕ್ಕೆ ಕಂಗನಾ ಅವಾಜ್ | Oneindia Kannada

  ಹಿಮಾಚಲ ಪ್ರದೇಶದಿಂದ ಮುಂಬೈಗೆ ಆಗಮಿಸುತ್ತಿರುವ ನಟಿ ಕಂಗನಾ ಟ್ವಿಟ್ಟರ್ ಮೂಲಕ ಮುಂಬೈ ಪಾಲಿಕೆಯ ನಡೆಯನ್ನು ಖಂಡಿಸಿದ್ದಾರೆ. ತನ್ನ ಕಚೇರಿಯನ್ನು ನೆಲಸಮ ಮಾಡುತ್ತಿರುವ ಫೋಟೋ ಹಂಚಿಕೊಂಡಿರುವ ನಟಿ 'ಇದು ಪ್ರಜಾಪ್ರಭುತ್ವ ಸಾವು' ಎಂದು ಟೀಕಿಸಿದ್ದಾರೆ. 'ಇದು ಮುಂಬೈ ಅಲ್ಲ, ಪಾಕಿಸ್ತಾನ ಹಾಗೂ ಬಾಬರ್ ಸಾಮ್ರಾಜ್ಯ' ಎಂದು ಆಕ್ರೋಶ ಹೊರಹಾಕಿದ್ದಾರೆ. ಮುಂದೆ ಓದಿ...

  'ಮುಂಬೈ ಪಾಕಿಸ್ತಾನ' ಎಂದು ಸಾಬೀತು

  'ಮುಂಬೈ ಪಾಕಿಸ್ತಾನ' ಎಂದು ಸಾಬೀತು

  ಸುಶಾಂತ್ ಸಿಂಗ್ ಪ್ರಕರಣ, ಡ್ರಗ್ಸ್ ಪ್ರಕರಣ ಹಾಗೂ ಇನ್ನಿತರ ಪ್ರಕರಣದಲ್ಲಿ ಮಹರಾಷ್ಟ್ರ ಸರ್ಕಾರ ಮತ್ತು ಮುಂಬೈ ಪೊಲೀಸರ ಕ್ರಮವನ್ನು ಖಂಡಿಸಿದ್ದ ನಟಿ ಕಂಗನಾ 'ಮುಂಬೈ ಪಾಕ್ ಆಕ್ರಮಿತ ನಗರದಂತಿದೆ'' ಎಂದಿದ್ದರು. ಇದೀಗ, ತಮ್ಮ ಕಟ್ಟ ನೆಲಸಮ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ನಟಿ ''ನಾನು ಯಾವತ್ತು ತಪ್ಪಾಗಲ್ಲ, ನನ್ನ ಶತ್ರುಗಳು ಇದು ಪಾಕ್ ಆಕ್ರಮಿತ ಮುಂಬೈ ಎಂದು ಸಾಬೀತು ಪಡಿಸುತ್ತಿದ್ದಾರೆ' 'ಎಂದು ಕಿಡಿಕಾರಿದ್ದಾರೆ.

  ಪ್ರಜಾಪ್ರಭುತ್ವದ ಸಾವು

  ಪ್ರಜಾಪ್ರಭುತ್ವದ ಸಾವು

  ಕಂಗನಾ ರಣಾವತ್ ಅವರ ಕಚೇರಿ ಹೊಡೆದು ಹಾಕುತ್ತಿರುವ ಫೋಟೋ ಹಂಚಿಕೊಂಡಿರುವ ಕಂಗನಾ ಮತ್ತೊಂದು ಟ್ವೀಟ್‌ನಲ್ಲಿ ''ಇದು ಪಾಕಿಸ್ತಾನ.....ಪ್ರಜಾಪ್ರಭುತ್ವದ ಸಾವು'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ಸವಾಲೆಸೆದ ಬೆನ್ನಲ್ಲೆ ಕಂಗನಾ ರಣಾವತ್‌ಗೆ ಆಘಾತ ನೀಡಿದ ಮುಂಬೈ ಪಾಲಿಕೆ

  ಬಾಬರ್ ಸಾಮಾಜ್ಯ!

  ಬಾಬರ್ ಸಾಮಾಜ್ಯ!

  ಕಂಗನಾ ರಣಾವತ್ ಕಚೇರಿ ಮುಂದೆ ಮುಂಬೈ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಜಮಾಯಿಸಿರುವ ಫೋಟೋ ಹಂಚಿಕೊಂಡಿರುವ ಕಂಗನಾ ''ಬಾಬರ್ ಮತ್ತು ಸೇನೆ'' ಎಂದು ಟೀಕಿಸಿದ್ದಾರೆ.

  ಮಹಾರಾಷ್ಟ್ರಕ್ಕಾಗಿ ನಾನು ರಕ್ತ ಕೊಡುವೆ

  ಮಹಾರಾಷ್ಟ್ರಕ್ಕಾಗಿ ನಾನು ರಕ್ತ ಕೊಡುವೆ

  ಶಿವಸೇನೆ ಮುಖ್ಯಸ್ಥ ಸಂಜಯ್ ರಾವತ್ ''ಮುಂಬೈಗೆ ಬರಬೇಡ' ಎಂದು ಕಂಗನಾಗೆ ಹೇಳಿದ್ದರು. ''ನಾನು ಮುಂಬೈಗೆ ಬಂದೇ ಬರ್ತೀನಿ, ಯಾರಪ್ಪಾನಿಂದ ಆದ್ರೆ ತಡೆಯಿರಿ'' ಎಂದು ಸವಾಲ್ ಹಾಕಿದ್ದ ಕಂಗನಾ ಇಂದು ಮುಂಬೈಗೆ ಆಗಮಿಸುತ್ತಿದ್ದಾರೆ. ಆದರೆ, ಮತ್ತೊಂದೆಡೆ ಕಂಗನಾ ಅವರ ಕಚೇರಿ ನೆಲಸಮ ಆಗುತ್ತಿದೆ. ''ಮಹಾರಾಷ್ಟ್ರ ಹೆಮ್ಮೆಗೆ ರಕ್ತ ಕೊಡುವುದಾಗಿ ನಾನು ಭರವಸೆ ನೀಡಿದ್ದೇನೆ, ಇದರಿಂದ ನನ್ನ ಆತ್ಮವು ಉನ್ನತ ಮತ್ತು ಉನ್ನತ ಮಟ್ಟಕ್ಕೆ ಏರುತ್ತದೆ'' ಎಂದು ಟ್ವೀಟ್ ಮಾಡಿದ್ದಾರೆ.

  ಡ್ರಗ್ಸ್ ಆರೋಪ ಸಾಬೀತಾದ್ರೆ ಶಾಶ್ವತವಾಗಿ ಮುಂಬೈ ಬಿಡುತ್ತೇನೆ: ನಟಿ ಕಂಗನಾ ಸವಾಲ್

  English summary
  Brihanmumbai Municipal Corporation has confirmed that it will demolish Kangana Ranaut’s office in Bandra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X