ಬಾಲಿವುಡ್ ನಟನ ಕ್ಷಮೆ ಕೇಳಿದ ಮುಂಬೈ ಮಹಾನಗರ ಪಾಲಿಕೆ
ಕೊರೊನಾ ವೈರಸ್ ಮಾರಿ ಇಡೀಯ ವಿಶ್ವವನ್ನೇ ಕಾಡುತ್ತಿದೆ. ಸರ್ಕಾರಗಳು, ವೈದ್ಯಕೀಯ ಸಿಬ್ಬಂದಿ ಕೊರೊನಾ ವಿರುದ್ಧ ಸತತ ಹೋರಾಟ ಮಾಡುತ್ತಿದ್ದಾರೆ ಈ ಹೊತ್ತಿನಲ್ಲಿ ಸುಳ್ಳು ಸುದ್ದಿಗಳು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ.
ಹೌದು, ಕೊರೊನಾ ವೈರಸ್ ಬಗ್ಗೆ ಹುಟ್ಟಿಕೊಂಡಿರುವ ಸುಳ್ಳು ಸುದ್ದಿಗಳು ಭಾರಿ ನಷ್ಟವನ್ನು ಉಂಟು ಮಾಡುತ್ತಿವೆ. ಪ್ರಾಣಿಗಳ ಜೀವಕ್ಕೂ ಕುತ್ತನ್ನೇ ಸುಳ್ಳು ಸುದ್ದಿಗಳು ತಂದಿವೆ.
ಸಾಕು ಪ್ರಾಣಿಗಳಿಂದ ಕೊರೊನಾ ಬರುತ್ತದೆ ಎಂಬ ಸುಳ್ಳು ಸುದ್ದಿಯನ್ನು ಸ್ವತಃ ಬೃಹತ್ ಮುಂಬೈ ಮಹಾನಗರ ಪಾಲಿಕೆ ಹಂಚಿಕೊಂಡು ಬಿಟ್ಟಿತ್ತು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಆದರೆ ಇದರ ವಿರುದ್ಧ ಬಾಲಿವುಡ್ ನಟ ಜಾನ್ ಅಬ್ರಹಾಂ ಬಿಎಂಸಿ ಯನ್ನು ಎಚ್ಚರಿಸಿದರು.

ಬಿಎಂಸಿ ಹೊರಡಿಸಿದ್ದ ಜಾಹೀರಾತಿನಲ್ಲಿ ತಪ್ಪು
ಬಿಎಂಸಿ ಕೊರೊನಾ ವೈರಸ್ ಬಗ್ಗೆ ಹೊರಡಿಸಿದ್ದ ಜಾಹೀರಾತಿನಲ್ಲಿ ಸಾಕು ಪ್ರಾಣಿಗಳಿಂದ ಕೊರೊನಾ ವೈರಸ್ ಬರುತ್ತದೆ ಎಂದು ಹೇಳಲಾಗಿತ್ತು. ಇದನ್ನು ಜಾನ್ ಅಬ್ರಹಾಂ ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು.

ತಪ್ಪು ತಿದ್ದುಕೊಂಡ ಬಿಎಂಸಿ
ಕೂಡಲೇ ತಮ್ಮ ತಪ್ಪು ತಿದ್ದಿಕೊಂಡ ಬಿಎಂಸಿ ಜಾಹೀರಾತು ತೆರವುಗೊಳಿಸಿತು. ಅಷ್ಟೆ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿಯೇ ನಟ ಜಾನ್ ಅಬ್ರಾಹಂ ಅವರ ಕ್ಷಮೆಯನ್ನು ಸಹ ಕೇಳಿದೆ.'

ಪ್ರಾಣಿಗಳಿಂದ ಕೊರೊನಾ ಹರಡದು
ನಿಜವೆಂದರೆ ಪ್ರಾಣಿಗಳಿಂದ ಕೊರೊನಾ ವೈರಸ್ ಹರಡುವುದಿಲ್ಲ. ಕೊರೊನಾ ವೈರಸ್ ಪ್ರಾಣಿಗಳಿಗೆ ಹರಡುವ ಬಗ್ಗೆಯೂ ಯಾವುದೇ ನಿಖರತೆ ಇಲ್ಲ. ಪ್ರಾಣಿಗಳು ಕೊರೊನಾದಿಂದ ಮೃತಪಟ್ಟಿದ್ದು ಸಹ ಈ ವರೆಗೆ ವರದಿ ಆಗಿಲ್ಲ.

ಪ್ರಾಣಿ ಪ್ರೇಮಿ ಜಾನ್ ಅಬ್ರಹಾಂ
ನಟ ಜಾನ್ ಅಬ್ರಹಾಂ ಪ್ರಾಣಿ ಪ್ರೇಮಿ ಆಗಿದ್ದು, ಸ್ವತಃ ಹಲವು ಸಾಕು ಪ್ರಾಣಿಗಳನ್ನು ಹೊಂದಿದ್ದಾರೆ. ಪ್ರಾಣಿಗಳ ಪರವಾಗಿ ಆಗಾಗ್ಗೆ ಜಾನ್ ದನಿ ಎತ್ತುತ್ತಲೇ ಇರುತ್ತಾರೆ.


Click it and Unblock the Notifications