Don't Miss!
- News Lok Sabha Election 2024: ಈ 6 ಜಿಲ್ಲೆಗಳಲ್ಲಿ 0% ಮತದಾನ-ಎಲ್ಲಿ ಹಾಗೂ ಕಾರಣ ಏನು?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟನಿಂದ ಹಿಂಸೆ, ಆತ್ಮಹತ್ಯೆಗೆ ಯತ್ನಿಸಿದ 'ಮಿಸ್ಟರ್ ಇಂಡಿಯಾ'
ಬಾಡಿ ಬಿಲ್ಡರ್ ಹಾಗೂ ಮಾಜಿ ಮಿಸ್ಟರ್ ಇಂಡಿಯಾ ವಿಜೇತ ಮನೋಜ್ ಪಾಟೀಲ್ ಮುಂಬೈನ ಓಶಿವಾರದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ.
ಈ ಕುರಿತು ಮುಂಬೈ ಪೊಲೀಸರುವ ಪಿಟಿಐಗೆ ಪ್ರತಿಕ್ರಿಯಿಸಿದ್ದು, ''ಮನೋಜ್ ಪಾಟೀಲ್ ಓಶಿವಾರದಲ್ಲಿರುವ ತಮ್ಮ ಮನೆಯಲ್ಲಿ ಗುರುವಾರ ಮಲಗುವ ಮುನ್ನ ನಿದ್ರೆ ಮಾತ್ರೆಗಳನ್ನು ಸೇವಿಸಿದ್ದರು'' ಎಂದು ಮಾಹಿತಿ ನೀಡಿದ್ದಾರೆ.
ಸಿನಿಮಾ ಇಲ್ಲ, ಕೆಲಸನೂ ಇಲ್ಲ...ಫೇಸ್ಬುಕ್ ಲೈವ್ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ನಟ
ಮನೋಜ್ ಪಾಟೀಲ್ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ, ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದ ಮೇಲೆ ಕುಟುಂಬಸ್ಥರು ಮುಂಬೈನ ಕೂಪರ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದರು ಎಂದು ಮನೋಜ್ ಮ್ಯಾನೇಜರ್ ಪಾರಿ ನಾಜ್ ತಿಳಿಸಿದ್ದಾರೆ. ಇತ್ತೀಚಿನ ಅಪ್ಡೇಟ್ ಪ್ರಕಾರ, ಬಾಡಿ ಬಿಲ್ಡರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಮನೋಜ್ ಪಾಟೀಲ್ ಆತ್ಮಹತ್ಯೆಗೆ ಯತ್ನಿಸಲು ಕಾರಣ ಏನು ಎಂದು ಹುಡುಕಿ ಹೊರಟಾಗ, ಬಾಲಿವುಡ್ ನಟ ಶಾಹೀಲ್ ಖಾನ್ ಹೆಸರು ಕೇಳಿ ಬಂದಿದೆ. ತನ್ನ ಆತ್ಮಹತ್ಯೆಗೆ ನಟ ಶಾಹೀಲ್ ಖಾನ್ ಕಾರಣ ಎಂದು ಡೆತ್ನೋಟ್ ಬರೆದಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದ್ದು, ಆ ಪತ್ರ ಪೊಲೀಸರ ಕೈ ಸೇರಿದೆಯಂತೆ. ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುವಂತೆ 'ಶಾಹೀಲ್ ಖಾನ್ ಮಾನಸಿಕವಾಗಿ ಹಿಂಸಿಸುತ್ತಿದ್ದರು. ಹಾಗಾಗಿ, ಮನನೊಂದು ಸಾಯಲು ನಿರ್ಧರಿಸುವೆ' ಎಂದು ಮನೋಜ್ ಪಾಟೀಲ್ ಬರೆದಿದ್ದಾರೆ ಎಂದು ಮ್ಯಾನೇಜರ್ ಪಾರಿ ನಾಜ್ ಹೇಳಿದ್ದಾರೆ.
ನಟ ಶಾಹೀಲ್ ಖಾನ್, ಬಾಡಿ ಬಿಲ್ಡರ್ ಮನೋಜ್ ಪಾಟೀಲ್ ಅವರ ವೈಯಕ್ತಿಕ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಸೃಷ್ಟಿಸಿದ್ದು, ಸಾಮಾಜಿಕ ಜಾಲತಾಣದಲ್ಲಿಯೂ ತೇಜೋವಧೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸುಶಾಂತ್ ಸಿಂಗ್ ಕೊಲೆ, ದಿಶಾ ಮೇಲೆ ಅತ್ಯಾಚಾರ: ಕೇಂದ್ರ ಸಚಿವ ಸ್ಫೋಟಕ ಹೇಳಿಕೆ
ಮನೋಜ್ ಪಾಟೀಲ್ ವೃತ್ತಿಜೀವನವನ್ನು ಅಂತ್ಯಗೊಳಿಸುವುದಾಗಿ ನಟ ಶಾಹೀಲ್ ಖಾನ್ ಬೆದರಿಕೆ ಹಾಕಿದ್ದರಂತೆ. ಹಾಗೂ ಮನೋಜ್ ಅವರ ಪ್ರೋಟಿನ್ ಶಾಪ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿ ಮಾನಹಾನಿ ಸಹ ಮಾಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಇ-ಟೈಮ್ಸ್ಗೆ ಶಾಹೀಲ್ ಖಾನ್ ಪ್ರತಿಕ್ರಿಯಿಸಿದ್ದು, ''ಇದೆಲ್ಲ ಕೇವಲ ಪ್ರಚಾರಕ್ಕಷ್ಟೆ. ಮನೋಜ್ ಜೊತೆ ನನಗೆ ಯಾವುದೇ ಸಂಬಂಧವಿಲ್ಲ'' ಎಂದು ತಿಳಿಸಿದ್ದಾರೆ.
ಮನೋಜ್ ಪಾಟೀಲ್ ಫಿಟ್ನೆಸ್ ಮಾಡೆಲ್ ಆಗಿದ್ದು, 2016 ರಲ್ಲಿ ಮಿಸ್ಟರ್ ಇಂಡಿಯಾ ಚಾಂಪಿಯನ್ಶಿಪ್ ಗೆದ್ದಿದ್ದರು.