ನೀನು ಇನ್ನು ವರ್ಜಿನ್ನಾ? ಮಗನಿಗೆ ತಾಯಿ ಮಲೈಕಾ ಅರೋರಾ ವಿಚಿತ್ರ ಪ್ರಶ್ನೆ
ಬಾಲಿವುಡ್ ನಟಿ ಮಲೈಕಾ ಅರೋರಾ ಸಿನಿಮಾಗಳಲ್ಲಿ ನಟಿಸದೇ ಇದ್ದರೂ ಸದಾ ಸುದ್ದಿಯಲ್ಲಿರುತ್ತಾರೆ. ಅರ್ಜುನ್ ಕಪೂರ್ ಜೊತೆ ಡೇಟಿಂಗ್ ವಿಚಾರಕ್ಕೆ ಪದೇ ಪದೆ ಚರ್ಚೆಗೆ ಗ್ರಾಸವಾಗುತ್ತಾರೆ. ಇನ್ನು ಮಾದಕ ಮೈಮಾಟ, ಯೋಗ ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಮಲೈಕಾ ಕ್ರೇಜ್ ಜೋರಾಗಿದೆ.
ಮಲೈಕಾ ಅರೋರಾ ಪುತ್ರ ಅರ್ಹಾನ್ ಜೊತೆ ಪಾಡ್‌ಕಾಸ್ಟ್‌ನಲ್ಲಿ ಭಾಗಿ ಆಗುತ್ತಿದ್ದಾರೆ. 'ಧಮ್ಬ್ ಬಿರ್ಯಾನಿ' ಹೆಸರಿನ ಈ ವಿಶೇಷ ಪಾಡ್‌ಕಾಸ್ಟ್‌ನಲ್ಲಿ ತಾಯಿ, ಮಗ ಚಿತ್ರ ವಿಚಿತ್ರ ಪ್ರಶ್ನೆಗಳನ್ನು ಪರಸ್ಪರ ಕೇಳಿಕೊಂಡಿದ್ದಾರೆ. ಆ ಪ್ರೋಮೊ ಈಗ ವೈರಲ್ ಆಗುತ್ತಿದೆ. ಸೆ*, ಮದುವೆ ಹಾಗೂ ಸೋಶಿಯಲ್ ಮೀಡಿಯಾ ಸೇರಿದಂತೆ ಇಂಟ್ರೆಸ್ಟಿಂಗ್ ವಿಚಾರಗಳ ಬಗ್ಗೆ ಇಬ್ಬರೂ ಚರ್ಚಿಸಿದ್ದಾರೆ. ಅರ್ಬಾಜ್ ಮತ್ತು ಸೊಹೈಲ್ ಖಾನ್ ಬಳಿಕ ಮಲೈಕಾ ತಮ್ಮ ಮಗನ ಪಾಡ್‌ಕಾಸ್ಟ್‌ನಲ್ಲಿ ಅತಿಥಿಯಾಗಿ ಭಾಗಿ ಆಗಿದ್ದಾರೆ.

ಮಾತುಕತೆ ವೇಳೆ "ನೀನು ಯಾವಾಗ ನಿನ್ನ ವರ್ಜಿನಿಟಿ ಕಳೆದುಕೊಂಡೆ? ಎಂದು ಮಗನನ್ನು ಮಲೈಕಾ ಕೇಳಿದ್ದಾರೆ. ಸದ್ಯ ಈ ಪ್ರೋಮೊ ವೈರಲ್ ಆಗಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇಷ್ಟು ಬೋಲ್ಡ್ ಆಗಿ ಮಗನೊಟ್ಟಿಗೆ ಮಾತನಾಡೋದಾ? ಎಂತೆಲ್ಲಾ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಈ ಪಾಡ್‌ಕಾಸ್ಟ್ ಸಂಪೂರ್ಣ ವೀಡಿಯೋ ಬಿಡುಗಡೆ ಆಗಲಿದೆ.
ಅರ್ಹಾನ್ ಖಾನ್ ತಮ್ಮ ತಾಯಿಯನ್ನು ನೀವು ಸೋಷಿಯಲ್ ಕ್ಲೈಂಬರ್?(ಸಾಮಾಜಿಕವಾಗಿ ಉತ್ತಮ ಸ್ಥಾನಕ್ಕೇರಲು ಹವಣಿಸುವವರು ) ಎಂದು ಕೇಳಿದ್ದಾನೆ. ಸಾಮಾಜಿಕ ಆರೋಹಿಯೇ ಎಂದು ಕೇಳುತ್ತಾನೆ. ಆದರೆ ಆಕೆ ಅದನ್ನು ನಿರಾಕರಿಸಿದ್ದಾರೆ. ಮಾತು ಮುಂದುವರೆಸಿ 'ನೀನು ಯಾವಾಗ ಮದುವೆಯಾಗುತ್ತೀಯ? ಎನ್ನುವುದು ನನ್ನ ಮುಂದಿನ ಪ್ರಶ್ನೆ' ಎಂದು ಕೇಳುತ್ತಾನೆ. ಅದಕ್ಕೆ ಉತ್ತರ ಏನು ಎನ್ನುವುದು ಇನ್ನಷ್ಟೆ ತಿಳಿಯಬೇಕಿದೆ.
ಅಂದಹಾಗೆ ಮಲೈಕಾ ಅರೋರ 8 ವರ್ಷಗಳಿಂದ ನಟ ಅರ್ಜುನ್ ಕಪೂರ್ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಾರೆ. 2017ರಲ್ಲಿ ಪತಿಗೆ ಅರ್ಬಾಜ್ ಖಾನ್‌ಗೆ ಡಿವೋರ್ಸ್ ನೀಡಿದ್ದರು. ಬಿಂದಾಸ್ ಬೆಡಗಿ ಮಲೈಕಾ ಸಿನಿಮಾಗಳಲ್ಲಿ ನಟಿಸಿದ್ದಕ್ಕಿಂತ ಐಟಂ ಸಾಂಗ್‌ಗಳಲ್ಲಿ ಕುಣಿದಿದ್ದೇ ಹೆಚ್ಚು. 'ದಿಲ್‌ಸೇ' ಚಿತ್ರದ ''ಚಯ್ಯಾ ಚಯ್ಯಾ' ಸಾಂಗ್‌ನಿಂದ ಶುರುವಾದ ಮಲೈಕಾ ಸ್ಪೆಷಲ್ ಸಾಂಗ್ಸ್ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ಮುಂದುವರೆಯಿತು.
'ದಬಾಂಗ್' ಚಿತ್ರದ 'ಮುನ್ನಿ ಬದ್ನಾಮ್' ಸಾಂಗ್ ಮಲೈಕಾಗೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಕ್ರೇಜ್ ತಂದುಕೊಟ್ಟಿತ್ತು. ಬಳಿಕ ತೆಲುಗಿನಲ್ಲಿ 'ಕೆವ್ವು ಕೇಕ' ಎಂದು ಕುಣಿದು ಆಕೆ ರಂಗೇರಿಸಿದರು. ಅರ್ಬಾಜ್ ಖಾನ್ ಜೊತೆ ಸೇರಿ 3 ಸಿನಿಮಾಗಳನ್ನೂ ನಿರ್ಮಿಸಿದ್ದರು. ಕಿರುತೆರೆಯಲ್ಲಿ ಕೂಡ ಮಲೈಕಾ ಸಖತ್ ಬ್ಯುಸಿಯಾಗಿದ್ದಾರೆ. ರಿಯಾಲಿಟಿ ಶೋಗ ಜಡ್ಜ್ ಆಗಿ ಗಮನ ಸೆಳೆಯುತ್ತಾ ಬರುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಕೂಡ ಮಲೈಕಾ ಸಖತ್ ಆಕ್ಟೀವ್ ಆಗಿರುತ್ತಾರೆ. ಹಾಟ್ ಹಾಟ್ ಫೋಟೊಶೂಟ್‌ಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 18 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಇದ್ದಾರೆ. ಹಾಟ್ ಜಿಮ್ ವರ್ಕ್‌ಔಟ್, ಯೋಗ ವೀಡಿಯೋಗಳನ್ನು ಶೇರ್ ಮಾಡುತ್ತಾರೆ. ತಮ್ಮ ಪೋಸ್ಟ್‌ಗಳಿಂದಲೂ ಮಲೈಕಾ ಸಾಕಷ್ಟು ಹಣ ಗಳಿಸುತ್ತಿದ್ದಾರೆ.
1998ರಲ್ಲಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಜೊತೆ ಮಲೈಕಾ ಮದುವೆ ನಡೆದಿತ್ತು. ದಂಪತಿಗೆ ಒಬ್ಬ ಮಗನೂ ಹುಟ್ಟಿದ. ಅರ್ಜುನ್ ಕಪೂರ್ ಜೊತೆಗಿನ ರಿಲೇಷನ್‌ಶಿಪ್ ಕಾರಣಕ್ಕೆ ದಂಪತಿ ದೂರಾದರು ಎಂದು ಬಾಲಿವುಡ್‌ನಲ್ಲಿ ಗುಲ್ಲಾಗಿತ್ತು. ಆದರೆ ಇಬ್ಬರೂ ಈ ಬಗ್ಗೆ ಮಾತನಾಡುವ ಗೋಜಿಗೆ ಹೋಗಲಿಲ್ಲ.


Click it and Unblock the Notifications











