India
  For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್ 3' ಮೇಲೆ ಕಣ್ಣಿಟ್ಟ ಬಾಲಿವುಡ್‌ ಸ್ಟಾರ್‌ ನಟಿಯರು: ಯಾರಿಗೆ ಒಲಿಯುತ್ತೆ ಅದೃಷ್ಟ?

  |

  ಅದ್ಯಾರೇ ತೆಗಳಿದರೂ, ಅದ್ಯಾರೇ ತಿರಸ್ಕರಿಸಿದರೂ 'ಕೆಜಿಎಫ್ 2' ಬರೆದಿರೋ ಇತಿಹಾಸವನ್ನಂತೂ ಬದಲಾಯಿಸೋಕೆ ಸಾಧ್ಯವಿಲ್ಲ. ಭಾರತೀಯ ಚಿತ್ರರಂಗದ ಚರಿತ್ರೆಯಲ್ಲಿ 'ಕೆಜಿಎಫ್ 2' ಸೃಷ್ಟಿಸಿದ ದಾಖಲೆ ಅಚ್ಚಳಿಯದೆ ಉಳಿಯಲಿದೆ. ಇನ್ನು ದಿಗ್ಗಜರೇ ದಂಗಾಗುವಂತೆ ಮಾಡಿದ 'ಕೆಜಿಎಫ್ 2' ಈಗ ಮುಗಿದ ಅಧ್ಯಾಯ. ಅದಕ್ಕೆ ಸಿನಿಪ್ರೇಮಿಗಳು 'ಕೆಜಿಎಫ್ 3' ಸಿನಿಮಾ ಮೇಲೆ ಕಣ್ಣಿಟ್ಟಿದ್ದಾರೆ.

  'ಕೆಜಿಎಫ್ 2' ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರು ಈಗಾಗಲೇ 'ಕೆಜಿಎಫ್ 3' ಪ್ರಾಜೆಕ್ಟ್ ಬಗ್ಗೆ ಅನೌನ್ಸ್ ಮಾಡಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ 'ಕೆಜಿಎಫ್ 3' ಸಿನಿಮಾ ಸೆಟ್ಟೇರುವ ಬಗ್ಗೆ ಸುಳಿವು ನೀಡಿದ್ದಾರೆ. ಹೀಗಾಗಿ 'ಕೆಜಿಎಫ್ 3' ನಿರ್ಮಾಣ ಆಗುವುದಂತೂ ಪಕ್ಕಾ. ಆದರೆ, ಸಿನಿಮಾ ಯಾವಾಗ ಆರಂಭ ಆಗುತ್ತೆ ಅನ್ನುವುದು ಮಾತ್ರ ಇನ್ನೂ ರಹಸ್ಯವಾಗಿಯೇ ಇದೆ.

  ದಾಖಲೆ ಬರೆದ 'ಕೆಜಿಎಫ್ 2' ಸಿನಿಮಾ ಫೈನಲ್ ಬಾಕ್ಸಾಫೀಸ್‌ ಕಲೆಕ್ಷನ್ ರಿಪೋರ್ಟ್ ಎಷ್ಟು?ದಾಖಲೆ ಬರೆದ 'ಕೆಜಿಎಫ್ 2' ಸಿನಿಮಾ ಫೈನಲ್ ಬಾಕ್ಸಾಫೀಸ್‌ ಕಲೆಕ್ಷನ್ ರಿಪೋರ್ಟ್ ಎಷ್ಟು?

  Karan Johar | KGF 2 | ಹಣ ಕೊಟ್ಟು ಜನಪ್ರಿಯತೆ ಖರೀದಿಸುತ್ತಿದ್ದಾರೆ ಎಂದ ಕರಣ್ | *Bollywood

  'ಕೆಜಿಎಫ್ 3' ಸದ್ಯಕ್ಕಂತೂ ಶುರುವಾಗುವುದಿಲ್ಲ ಅನ್ನುವುದನ್ನು ಚಿತ್ರತಂಡವೇ ಸ್ಪಷ್ಟಪಡಿಸಿದೆ. ಆದರೂ, 'ಕೆಜಿಎಫ್ 3' ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಅದರಲ್ಲೂ ಬಾಲಿವುಡ್‌ ಮಂದಿ ಇನ್ನೂ 'ಕೆಜಿಎಫ್' ಶಾಕ್‌ನಿಂದ ಹೊರಬಂದಿಲ್ಲ. ಅಷ್ಟರಲ್ಲೇ ಹೊಸ ಸುದ್ದಿಯೊಂದು ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. ಹೊಸ ಸುದ್ದಿ ಏನಪ್ಪಾ ಅಂದರೆ, ಬಾಲಿವುಡ್‌ನ ಸ್ಟಾರ್ ನಟಿಯರು 'ಕೆಜಿಎಫ್ 3' ಸಿನಿಮಾ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಬಾಲಿವುಡ್‌ನಲ್ಲಿ ಹರಿದಾಡುತ್ತಿರುವುದೇನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

  'ಕೆಜಿಎಫ್ 3' ಮೇಲೆ ಕಣ್ಣು

  'ಕೆಜಿಎಫ್ 3' ಮೇಲೆ ಕಣ್ಣು

  ಯಶ್ ಹಾಗೂ ಪ್ರಶಾಂತ್ ನೀಲ್ ಸೃಷ್ಟಿಸಿದ ನರಾಚಿ ಕೋಟೆಯ ಚರಿತ್ರೆ ಕೇವಲ ಕರ್ನಾಟಕಕ್ಕಷ್ಟೇ ಅಲ್ಲ. ಇಡೀ ವಿಶ್ವವೇ ಇಷ್ಟಪಟ್ಟಿತ್ತು. ದೇಶದ ಮೂಲೆ ಮೂಲೆಯಲ್ಲೂ 'ಕೆಜಿಎಫ್ 2' ನೋಡಿ ಮೆಚ್ಚಿಕೊಂಡಿದ್ದರು. ಈ ಕಾರಣಕ್ಕೆ ಅತಿ ಹೆಚ್ಚು ಗಳಿಕೆ ಕಂಡ ಭಾರತದ ಮೂರನೇ ಸಿನಿಮಾ ಎಂಬ ಹೆಗ್ಗಳಿಕೆ ಗಳಿಸಿದೆ. 'ಕೆಜಿಎಫ್ 2' ಆರ್ಭಟ ನೋಡಿ ಶಾಕ್ ಆಗಿರುವ ಬಾಲಿವುಡ್‌ ಮಂದಿ ಸಿನಿಮಾವನ್ನು ಹಾಡಿ ಹೊಗಳುತ್ತಿದೆ. ಈ ಕಾರಣಕ್ಕೆ ಎಲ್ಲರ ಕಣ್ಣು 'ಕೆಜಿಎಫ್ 3' ಸಿನಿಮಾ ಮೇಲಿದೆ. ಅದರಲ್ಲೂ ಬಾಲಿವುಡ್ ಸ್ಟಾರ್ ನಟಿಯರು 'ಕೆಜಿಎಫ್ 3' ಸಿನಿಮಾ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

  ಬಾಲಿವುಡ್‌ನವರು 'ಕೆಜಿಎಫ್' ಮಾಡಿದ್ದರೆ ಏನಾಗಿರುತ್ತಿತ್ತು? ಕರಣ್ ಜೋಹರ್ ಕೊಟ್ಟಿದ್ದಾರೆ ಉತ್ತರಬಾಲಿವುಡ್‌ನವರು 'ಕೆಜಿಎಫ್' ಮಾಡಿದ್ದರೆ ಏನಾಗಿರುತ್ತಿತ್ತು? ಕರಣ್ ಜೋಹರ್ ಕೊಟ್ಟಿದ್ದಾರೆ ಉತ್ತರ

  ಯಶ್ ಮೇಲೆ ಬಾಲಿವುಡ್ ನಟಿಯರ ಕಣ್ಣು

  ಯಶ್ ಮೇಲೆ ಬಾಲಿವುಡ್ ನಟಿಯರ ಕಣ್ಣು

  "RRR' ಹಾಗೂ 'ಕೆಜಿಎಫ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿತ್ತು. ಈ ಬಿರುಗಾಳಿಯನ್ನು ನೋಡಿದ ಬಳಿಕ ಬಾಲಿವುಡ್‌ ನಟಿಯರು 'ಕೆಜಿಎಫ್ 3' ಸಿನಿಮಾದಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಇವರೆಲ್ಲರೂ ಬಾಲಿವುಡ್ ಚಿತ್ರರಂಗದ ಟಾಪ್ ನಟಿಯರು ಅನ್ನುವುದು ವಿಶೇಷ. ಈಗಾಗಲೇ 'ಕೆಜಿಎಫ್ 3' ನಿರ್ಮಾಪಕರ ಜೊತೆ ಬಾಲಿವುಡ್‌ ನಟಿಯರು ಸಿನಿಮಾದಲ್ಲಿ ನಟಿಸುವ ಆಸೆ ವ್ಯಕ್ತಪಡಿಸುತ್ತಿದ್ದಾರೆ" ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಆದರೆ, 'ಕೆಜಿಎಫ್ 3' ಮೇಲೆ ಕಣ್ಣಿಟ್ಟ ಸ್ಟಾರ್ ನಟಿಯರು ಯಾರು ಅನ್ನುವುದನ್ನು ಮಾತ್ರ ಹೇಳಿಲ್ಲ.

  ಬಾಲಿವುಡ್ ನಟಿಯರಿಗೆ ಅದೃಷ್ಟ

  ಬಾಲಿವುಡ್ ನಟಿಯರಿಗೆ ಅದೃಷ್ಟ

  ಈಗಾಗಲೇ 'ಕೆಜಿಎಫ್' ಫ್ರಾಂಚೈಸಿಯಲ್ಲಿ ನಟಿಸಿದ ಬಾಲಿವುಡ್‌ ನಟ-ನಟಿಯರ ವೃತ್ತಿ ಜೀವನ ಮತ್ತೆ ಟ್ರ್ಯಾಕ್‌ಗೆ ಮರಳಿದೆ. ರವೀನಾ ಟಂಡನ್, ಸಂಜಯ್ ದತ್ 'ಕೆಜಿಎಫ್ 2' ಸಿನಿಮಾದಲ್ಲಿ ನಟಿಸಿದ್ದರು. ಬಾಲಿವುಡ್‌ನಲ್ಲಿ ಇವರಿಬ್ಬರ ರೇಂಜ್ ಮತ್ತೆ ಬದಲಾಗಿದೆ. ಇನ್ನು 'ಕೆಜಿಎಫ್ ಚಾಪ್ಟರ್ 1'ನಲ್ಲಿ ಮೌನಿ ರಾಯ್ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಳಿಕ ಮೌನಿ ರಾಯ್ ನಸೀಬು ಕೂಡ ಬದಲಾಯಿತು. ಹೀಗಾಗಿ ಬಾಲಿವುಡ್ ಸ್ಟಾರ್ ನಟಿಯರ ಕಣ್ಣು 'ಕೆಜಿಎಫ್ 3' ಮೇಲೆ ನೆಟ್ಟಿದೆ.

  'ವಿಕ್ರಂ' ಮುಂದೆ 'ಕೆಜಿಎಫ್ 2' ಬಚ್ಚಾ: ಮತ್ತೆ ಖ್ಯಾತೆ ತೆಗೆದ ಕಮಾಲ್!'ವಿಕ್ರಂ' ಮುಂದೆ 'ಕೆಜಿಎಫ್ 2' ಬಚ್ಚಾ: ಮತ್ತೆ ಖ್ಯಾತೆ ತೆಗೆದ ಕಮಾಲ್!

  ಈ ಬೆಳವಣಿಗೆ ಬಗ್ಗೆ ಏನಂತಿದೆ ಬಾಲಿವುಡ್?

  ಈ ಬೆಳವಣಿಗೆ ಬಗ್ಗೆ ಏನಂತಿದೆ ಬಾಲಿವುಡ್?

  ಬಾಲಿವುಡ್‌ ಸ್ಟಾರ್ ನಟಿಯರು 'ಕೆಜಿಎಫ್ 3' ಸಿನಿಮಾ ಮೇಲೆ ಕಣ್ಣಿಟ್ಟಿದ್ದು, ದೇಶಾದ್ಯಂತ ಸುದ್ದಿಯಾಗಿದೆ. ಆದರೆ, ಆ ನಟಿಯರು ಯಾರು ಅನ್ನುವುದು ಮಾತ್ರ ಇನ್ನೂ ರಹಸ್ಯವಾಗಿಯೇ ಇದೆ. "ಬಾಲಿವುಡ್ ಸ್ಟಾರ್ ನಟಿಯರನ್ನು 'ಕೆಜಿಎಫ್ 3' ಸಿನಿಮಾದಲ್ಲಿ ಹಾಕಿಕೊಳ್ಳುವ ಬಗ್ಗೆ ನಿರ್ಮಾಪಕರು ಖಂಡಿತಾ ಆಲೋಚನೆ ಮಾಡುತ್ತಾರೆ. ಪ್ಯಾನ್ ಇಂಡಿಯಾ ಸಿನಿಮಾವನ್ನು ಮತ್ತೊಂದು ಮುಂದಕ್ಕೆ ತೆಗೆದುಕೊಂಡು ಹೋಗಲು ಈ ಆಲೋಚನೆ ಮಾಡುತ್ತಾರೆ." ಎಂದು ಮೂಲಗಳು ಇಂಡಿಯಾ ಟುಡೇಗೆ ಮಾಹಿತಿ ನೀಡಿವೆ.

  English summary
  Bollywood A List Actress Wants To Be Part Of Yash and Prashanth Neel Movie KGF 3, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X