ಆಮೀರ್ ಖಾನ್ ಮನವಿಗೆ ಸ್ಪಂದಿಸಿದ ಅಕ್ಷಯ್: ನಾವೆಲ್ಲರು ಇಲ್ಲಿ ಸ್ನೇಹಿತರು ಎಂದ ಕಿಲಾಡಿ

ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಮತ್ತು ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ನಡುವೆ ಈ ವರ್ಷ ಬಾಕ್ಸ್ ಆಫೀಸ್ ನಲ್ಲಿ ಬಿಗ್ ಫೈಟ್ ನಡೆಯಲಿದೆ ಎಂದು ಹೇಳಲಾಗಿತ್ತು. ಅಕ್ಷಯ್ ಮತ್ತು ಆಮೀರ್ ಸಿನಿಮಾಗಳು ಒಂದೆ ತೆರೆಗೆ ಬರಲು ಸಿದ್ಧಾವಾಗಿದ್ದವು. ಆದರೀಗ ಅಕ್ಷಯ್ ಕುಮಾರ್, ಆಮೀರ್ ಖಾನ್ ಗಾಗಿ ತನ್ನ ಸಿನಿಮಾ ರಿಲೀಸ್ ಡೇಟ್ ಅನ್ನು ಮುಂದಕ್ಕೆ ಹಾಕಿದ್ದಾರೆ.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಅಕ್ಷಯ್ ಕುಮಾರ್ ಸಿನಿಮಾ ಬರುತ್ತೆ ಅಂದರೆ ಬೇರೆ ನಟರು ಸಿನಿಮಾ ರಿಲೀಸ್ ಮಾಡಲು ಒಮ್ಮೆ ಯೋಚಿಸಬೇಕಾಗಿದೆ. ಈಗ ಇಂತಹದೆ ಸಂದರ್ಭವೊಂದು ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಗೆ ಎದುರಾಗಿತ್ತು. ಆಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಸಿನಿಮಾ ಈ ವರ್ಷದ ಕೊನೆಯಲ್ಲಿ ಅಂದರೆ ಕ್ರಿಸ್ ಮಸೆ ಗೆ ತೆರೆಗೆ ಬರಲು ಸಿದ್ಧವಾಗಿದೆ. ಇದೆ ದಿನ ಅಕ್ಷಯ್ ಕುಮಾರ್ ಅಭಿನಯದ ಬಚ್ಚನ್ ಪಾಂಡೆ ಸಿನಿಮಾ ಕೂಡ ಅನೌನ್ಸ್ ಆಗಿತ್ತು.

ಇದರಿಂದ ಬಾಕ್ಸ್ ಆಫೀಸ್ ನಲ್ಲಿ ಇಬ್ಬರು ಸ್ಟಾರ್ ನಟರ ನಡುವೆ ಬಿಗ್ ವಾರ್ ನಡೆಯಲಿದೆ ಎಂದು ಹೇಳಲಾಗಿತ್ತು. ಹಾಗಾಗಿ ಆಮೀರ್ ಖಾನ್, ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹಾಕುವಂತೆ ನಟ ಅಕ್ಷಯ್ ಕುಮಾರ್ ಮತ್ತು ಸಾಜಿದ್ ನಾದಿಯಾವಾಲ ಬಳಿ ಮನವಿ ಮಾಡಿಕೊಂಡಿದ್ದರಂತೆ. ಆಮೀರ್ ಖಾನ್ ಮನವಿಗೆ ಸ್ಪಂದಿಸಿದ ಅಕ್ಷಯ್ ಸಿನಿಮಾ ರಿಲೀಸ್ ಡೇಟ್ ಅನ್ನು ಕ್ರಿಸ್ ಮಸ್ ಯಿಂದ ಮುಂದಿನ ವರ್ಷ ಜನವರಿಗೆ ಪೋಸ್ಟ್ ಪೋನ್ ಮಾಡಿಕೊಂಡಿದ್ದಾರೆ. ಬಚ್ಚನ್ ಪಾಂಡೆ ಮುಂದಿನ ವರ್ಷ ಜನವರಿ 22ಕ್ಕೆ ರಿಲೀಸ್ ಆಗುತ್ತಿದೆ.

Bollywood Aamir Khan Thanks To Actor Akshay Kumar

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಟ ಅಕ್ಷಯ್ "ಯಾವಾಗಲು ಆಮೀರ್, ನಾವೆಲ್ಲ ಇಲ್ಲಿ ಸ್ನೇಹಿತರು" ಎಂದು ಹೇಳಿ ಫಸ್ಟ್ ಲುಕ್ ರಿವೀಲ್ ಮಾಡಿದ್ದಾರೆ. ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹಾಕಿರುವ ಬಗ್ಗೆ ಆಮೀರ್ ಖಾನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

"ನನ್ನ ಮನವಿಯ ಮೇರೆಗೆ ಬಚ್ಚನ್ ಪಾಂಡೆ ರಿಲೀಸ್ ಡೇಟ್ ಅನ್ನು ಮುಂದಕ್ಕೆ ಹಾಕಿದ ಸ್ನೇಹಿತರಾದ ಅಕ್ಷಯ್ ಕುಮಾರ್ ಮತ್ತು ಸಾಜಿದ್ ನಾದಿಯವಾಲ ಅವರಿಗೆ ಧನ್ಯವಾದಗಳು. ಅವರ ಸಿನಿಮಾಗೆ ಒಳ್ಳೆಯದಾಗಲಿ" ಎಂದು ಹೇಳಿದ್ದಾರೆ.

ಅಕ್ಷಯ್ ಕುಮಾರ್ ಅಭಿನಯದ ಬಚ್ಚನ್ ಪಾಂಡೆ ಸಿನಿಮಾಗೆ ಫರ್ಹಾದ್ ಸಂಜಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ರಿಲೀಸ್ ಆಗಿರುವ ಅಕ್ಷಯ್ ಲುಕ್ ಕೂಡ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಆಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡ ಸಿನಿಮಾ ಲುಕ್ ಕೂಡ ಅದ್ಭುತವಾಗಿದ್ದು ಭಾರಿ ನಿರೀಕ್ಷೆ ಹುಟ್ಟುಹಾಕಿದೆ.

More from Filmibeat

English summary
Bollywood Actor Aamir Khan thanks to Actor Akshay Kumar for postponed Bachchan pandey release date.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X