15 ವರ್ಷದ ದಾಂಪತ್ಯ ಅಂತ್ಯಗೊಳಿಸಿದ ನಟ ಅಮೀರ್ ಖಾನ್: ವಿಚ್ಛೇಧನ ಘೋಷಣೆ

ನಟ ಅಮೀರ್ ಖಾನ್ ಹಾಗೂ ಕಿರಣ್ ರಾವ್ ತಮ್ಮ 15 ವರ್ಷಗಳ ದಾಂಪತ್ಯವನ್ನು ಅಂತ್ಯಗೊಳಿಸಿದ್ದಾರೆ. ಮಗ ಅಜಾದ್ ರಾವ್ ಖಾನ್ ಅನ್ನು ಒಟ್ಟಿಗೇ ಪೋಷಣೆ ಮಾಡಲು ನಿಶ್ಚಯಿಸಿದ್ದಾರೆ.

ಅಮೀರ್ ಖಾನ್ ಹಾಗೂ ಕಿರಣ್ ರಾವ್ ಜಂಟಿಯಾಗಿ ಹೇಳಿಕೆ ಬಿಡುಗಡೆ ಮಾಡಿದ್ದು, ''ಈ ಹದಿನೈದು ವರ್ಷದಲ್ಲಿ ಈ ಜೀವಮಾನಕ್ಕಾಗುಷ್ಟು ಸುಂದರ ಅನುಭೂತಿಗಳನ್ನು ನಾವು ಪಡೆದುಕೊಂಡಿದ್ದೇವೆ. ಇಷ್ಟು ವರ್ಷಗಳು ನಾವು ಒಟ್ಟಿಗೆ ನಕ್ಕಿದ್ದೇವೆ, ಸಂಭ್ರಮಿಸಿದ್ದೇವೆ. ನಮ್ಮ ಸುಂದರ ಸಂಬಂಧವು ಕೇವಲ ಗೌರವ ಹಾಗೂ ನಂಬಿಕೆಗಳ ಆಧಾರದಲ್ಲಿ ನಿಂತಿತ್ತು. ನಾವು ಈಗ ನಮ್ಮ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಲು ಹೊರಟಿದ್ದೇವೆ. ನಾವು ಇನ್ನು ಮುಂದೆ ಪತಿ, ಪತ್ನಿ ಅಲ್ಲ ಆದರೆ ಮಗ ಅಜಾದ್‌ ರಾವ್ ಖಾನ್‌ಗೆ ಪೋಷಕರಾಗಿಯೇ ಇರಲಿದ್ದೇವೆ'' ಎಂದು ಹೇಳಿದ್ದಾರೆ ಅಮೀರ್ ಖಾನ್ ಹಾಗೂ ಕಿರಣ್ ರಾವ್.

''ನಾವಿಬ್ಬರೂ ಬೇರಾಗುವ ಬಗ್ಗೆ ಕೆಲವು ಸಮಯ ಮುಂಚೆಯಿಂದಲೂ ಯೋಜಿಸಿದ್ದೆವು. ಈಗ ಸೂಕ್ತ ಸಮಯ ಎನಿಸುತ್ತಿದೆ ಮತ್ತು ನಮ್ಮ ಬೇರಾಗುವಿಕೆಯನ್ನು ದಾಖಲೆಗಳಲ್ಲಿ ತರಲು ನಾವು ನಿಶ್ಚಯಿಸಿದ್ದೇವೆ. ನಾವಿಬ್ಬರೂ ಬೇರೆಯಾಗಿ ಬದುಕಿದರೂ ನಮ್ಮ ಜೀವನಗಳನ್ನು ಹಂಚಿಕೊಳ್ಳಲಿದ್ದೇವೆ. ನಮ್ಮ ಮಗ ಅಜಾದ್‌ಗೆ ನಾವು ನಿಷ್ಠೆಯ ಪೋಷಕರಾಗಿ ಮುಂದುವರೆಯಲಿದ್ದೇವೆ. ಅವನನ್ನು ನಾವು ಒಂದಾಗಿ ಬೆಳೆಸಲಿದ್ದೇವೆ. ಅಲ್ಲದೆ, ನಾವು ಸಿನಿಮಾಗಳ ಕೆಲಸ, ಪಾನಿ ಫೌಂಡೇಶನ್ ಮತ್ತು ಇತರೆ ಕಾರ್ಯಗಳನ್ನು ಜಂಟಿಯಾಗಿಯೇ ಮುಂದುವರೆಸಲಿದ್ದೇವೆ'' ಎಂದಿದೆ ಈ ಜೋಡಿ.

Bollywood Actor Aamir Khan and Kiran Rao announce divorce after 15 years of their marriage

''ನಮ್ಮ ಸಂಬಂಧದ ಈ ಬೆಳವಣಿಗೆಯನ್ನು ಅರ್ಥ ಮಾಡಿಕೊಂಡು ನಮಗೆ ಬೆಂಬಲ ನೀಡಿದ ಕುಟುಂಬ ವರ್ಗದವರಿಗೆ, ಸ್ನೇಹಿತರಿಗೆ ಧನ್ಯವಾದಗಳು. ನಮ್ಮ ಹಿತೈಶಿಗಳು ನಮಗೆ ಆಶೀರ್ವಾದ ನೀಡಬೇಕು ಎಂದು ಕೇಳಿಕೊಳ್ಳುತ್ತೇವೆ. ಈ ವಿಚ್ಛೇಧನ ಅಂತ್ಯವಲ್ಲ ಬದಲಿಗೆ ಆರಂಭ ಎಂದು ನಾವು ಭಾವಿಸಿದ್ದೇವೆ'' ಎಂದಿದ್ದಾರೆ ಅಮೀರ್ ಖಾನ್.

ಅಮೀರ್ ಖಾನ್ ಹಾಗೂ ಕಿರಣ್ ರಾವ್ ಡಿಸೆಂಬರ್ 28, 2005ರಲ್ಲಿ ವಿವಾಹವಾದರು. ಕಿರಣ್ ರಾವ್ ಹಾಗೂ ಅಮೀರ್ ಖಾನ್ 2000ರಲ್ಲಿ 'ಲಗಾನ್' ಸಿನಿಮಾದ ಸೆಟ್‌ನಲ್ಲಿ ಪರಸ್ಪರ ಭೇಟಿಯಾದರು. ಇಬ್ಬರಿಗೂ ಅಜಾದ್ ರಾವ್ ಹೆಸರಿನ ಮಗನನ್ನು ದಂಪತಿಯು ಸರ್ರೋಗೆಸಿ ತಂತ್ರಜ್ಞಾನದ ಮೂಲಕ ಪಡೆದುಕೊಂಡಿದ್ದರು.

Recommended Video

KGF 2 ನ ಎಲ್ಲಾ ಭಾಷೆಯ ಆಡಿಯೋ ಹಕ್ಕು ಖರೀದಿಸಿದ ಲಹರಿ ಸಂಸ್ಥೆ | Filmibeat Kannada

ಕಿರಣ್ ಅನ್ನು ಮದುವೆಯಾಗುವ ಮುನ್ನ ಅಮೀರ್ ಖಾನ್ ರೀನಾ ದತ್ತ ಜೊತೆ ಮದುವೆಯಾಗಿ 16 ವರ್ಷ ದಾಂಪತ್ಯ ನಡೆಸಿದ್ದರು. ನಂತರ ಅವರಿಬ್ಬರೂ ವಿಚ್ಛೇಧನ ಪಡೆದುಕೊಂಡರು. ಈಗ ಕಿರಣ್ ರಾವ್ ಜೊತೆಗೆ ಹದಿನೈದು ವರ್ಷದ ದಾಂಪತ್ಯದ ಬಳಿಕ ವಿಚ್ಛೇಧನ ಪಡೆದುಕೊಂಡಿದ್ದಾರೆ.

More from Filmibeat

English summary
Bollywood Actor Aamir Khan and Kiran Rao announce divorce after 15 years of their marriage. Previously Aamir Khan married to Reena Dutta and divorced her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X