ಸಾಮಾಜಿಕ ಜಾಲತಾಣಕ್ಕೆ ಗುಡ್ ಬೈ ಹೇಳಿದ್ದೇಕೆ ಆಮೀರ್ ಖಾನ್? ಇಲ್ಲಿದೆ ಕಾರಣ

ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತಿಗಳಿಸಿರುವ ನಟ ಆಮೀರ್ ಖಾನ್ ತನ್ನ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ದೊಡ್ಡ ಶಾಕಿಂಗ್ ಸುದ್ದಿ ನೀಡಿದ್ದರು. ಒಂದೆಡೆ ಅಭಿಮಾನಿಗಳು ನೆಚ್ಚಿನ ನಟ ಆಮೀರ್ ಖಾನ್‌ಗೆ ಶುಭಾಶಯ ತಿಳಿಸುತ್ತಿದ್ದರೆ, ಇತ್ತ ಆಮೀರ್ ಸಾಮಾಜಿಕ ಜಾಲತಾಣದಿಂದನೇ ದೂರ ಸರಿಯುವುದಾಗಿ ಸಂದೇಶ ರವಾನಿಸಿ ಆಘಾತ ನೀಡಿದ್ದರು.

ಆಮೀರ್ ಸೋಶಿಯಲ್ ಮೀಡಿಯಾಗೆ ದಿಢೀರ್ ಗುಡ್ ಬೈ ಹೇಳಿರುವ ಹಿಂದಿನ ಕಾರಣ ಬಹಿರಂಗ ವಾಗಿರಲಿಲ್ಲ. ಆದರೆ ಇಂದು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮುಂಬೈನಲ್ಲಿ ಸಿನಿಮಾ ಸ್ಕ್ರೀನಿಂಗ್‌ನಲ್ಲಿ ಭಾಗಿಯಾಗಿದ್ದ ಆಮೀರ್ ಖಾನ್ ಅವರನ್ನು ಮಾಧ್ಯಮದವರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಉತ್ತರ ನೀಡಿದ ಆಮೀರ್ ಖಾನ್, 'ನಿಮ್ಮ ಸಿದ್ಧಾಂತಗಳನ್ನು ನೀವು ಇದರ ಮೇಲೆ ಹೇರಬೇಡಿ. ನಾನು ನನ್ನ ಪ್ರಪಂಚದಲ್ಲಿ ಬದುಕುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ನಾನು ಅಷ್ಟು ಸಕ್ರೀಯನಾಗಿಲ್ಲ. ನಾನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪೋಸ್ಟ್ ಗಳನ್ನು ಮಾಡುವುದಿಲ್ಲ' ಎಂದು ಹೇಳಿದ್ದಾರೆ.

Bollywood Actor Aamir Khan reveals why he quit socila media.

ಇನ್ಮುಂದೆ ಅಭಿಮಾನಿಗಳ ಜೊತೆ ಸಂವಹನ ನಡೆಸಲು ಹಿಂದಿನಂತೆ ಮಾಧ್ಯಮವಿದೆ ಎಂದು ಹೇಳಿದ್ದಾರೆ. ಇದರಿಂದ ತುಂಬಾ ಸಂತೋಷವಾಗಿ ಇರಬೇಕೆಂದುಕೊಂಡಿದ್ದೀನಿ ಎಂದು ಹೇಳಿದ್ದಾರೆ.

ಆಮೀರ್ ಖಾನ್ ಕೊನೆಯ ಪೋಸ್ಟ್

ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ಅಮೀರ್ ಖಾನ್, 'ನನ್ನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ನಿಮಗೆಲ್ಲರಿಗೂ ಬಹಳ ಧನ್ಯವಾದಗಳು. ನಿಮ್ಮ ಶುಭ ಹಾರೈಕೆಯಿಂದ ನನ್ನ ಹೃದಯ ತುಂಬಿದೆ' ಎಂದಿದ್ದರು.

Recommended Video

ಜನರ ತಲೆಗೆ ಹುಳಬಿಟ್ಟ ನವರಸನಾಯಕ ಜಗ್ಗೇಶ್ | Filmibeat Kannada

ಇನ್ನು ಮುಂದುವರೆದು, 'ಇನ್ನೊಂದು ಮುಖ್ಯ ಸುದ್ದಿಯೆಂದರೆ, ನಾನು ಸಾಮಾಜಿಕ ಜಾಲತಾಣ ದೂರ ಸರಿಯುತ್ತಿದ್ದೇನೆ. ಇದೇ ನನ್ನ ಕೊನೆಯ ಪೋಸ್ಟ್ ಆಗಿರಲಿದೆ. ನಾನು ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯನಾಗಿದ್ದೆ (ವ್ಯಂಗ್ಯಾರ್ಥದಲ್ಲಿ) ಆದರೆ ಇನ್ನು ಮುಂದೆ ಈ ತೋರಿಕೆಯನ್ನು ನಾನು ನಿಲ್ಲಿಸಲಿದ್ದೇನೆ' ಎಂದು ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದರು.

More from Filmibeat

English summary
Bollywood Actor Aamir Khan reveals why he quit social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X