ನಟಿಯರಿಗಿಂತ ನಟರಿಗೆ ಜಾಸ್ತಿ ಸಂಭಾವನೆ ಯಾಕೆ? ಆಮೀರ್ ಖಾನ್ ಉತ್ತರಕ್ಕೆ ಬಾಯಿ ಮುಚ್ಚಿಕೊಂಡ ಕರೀನಾ, ರಾಣಿ

ಸಂಭಾವನೆ ತಾರತಮ್ಯದ ಬಗ್ಗೆ ಪದೇ ಪದೆ ಚರ್ಚೆ ನಡೆಯುತ್ತದೆ. ಚಿತ್ರರಂಗದಲ್ಲಿ ನಟರಿಗೆ ಕೊಡುವಷ್ಟು ಸಂಭಾವನೆ ನಟಿಯರಿಗೆ ಯಾಕೆ ಕೊಡಲ್ಲ ಎನ್ನುವ ವಾದ ಕೇಳಿಬರುತ್ತಲೇ ಇರುತ್ತದೆ. ಸ್ಯಾಂಡಲ್‌ವುಡ್‌ನಿಂದ ಹಾಲಿವುಡ್‌ವರೆಗೆ ಕೆಲ ನಟಿಯರು ಈ ಬಗ್ಗೆ ದನಿ ಎತ್ತಿದ್ದಾರೆ. ಸಂಭಾವನೆ ವಿಚಾರದಲ್ಲಿ ಲಿಂಗ ತಾರತಮ್ಯ ಯಾಕೆ ಎಂದು ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ತಾಪ್ಸಿ ಪನ್ನು ಸೇರಿ ಹಲವರು ಬಹಿರಂಗವಾಗಿ ಮಾತನಾಡಿದ್ದಾರೆ.

ಕಾಸಿಗೆ ತಕ್ಕ ಕಜ್ಜಾಯ ಎನ್ನುವ ಮಾತನ್ನು ಕೆಲವರು ಆಡುತ್ತಾರೆ. ನಾಯಕ ನಟರು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಹೆಚ್ಚು ಸೆಳೆಯುತ್ತಾರೆ. ಹಾಗಾಗಿ ನಟರಿಗೆ ಸಂಭಾವನೆ ಜಾಸ್ತಿ. ಕೆಲವೊಮ್ಮೆ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಾಯಕಿಯರಿಗೆ ಹೆಚ್ಚು ಸಂಭಾವನೆ ಸಿಗುತ್ತದೆ ಅಲ್ಲವೇ? ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಅವಕಾಶ, ಸಂಭಾವನೆ ಪಡೆಯುಡ್ತಾರೆ ಎಂದು ಕೆಲವರು ವಾದಿಸುತ್ತಾರೆ. ಸಂಭಾವನೆ ತಾರತಮ್ಯದ ಬಗ್ಗೆ ಆಮೀರ್ ಖಾನ್ ಮಾತನಾಡಿರುವ ವಿಡಿಯೋ ವೈರಲ್ ಆಗ್ತಿದೆ.

Bollywood Actor Aamir Khan s Old Video on Pay Gap in Film Industry Goes Viral Again

ಕೆಲ ವರ್ಷಗಳ ಹಿಂದೆ ND TV ಸಂದರ್ಶನದಲ್ಲಿ ಆಮೀರ್ ಖಾನ್, ನಟಿಯರಾದ ರಾಣಿ ಮುಖರ್ಜಿ ಹಾಗೂ ಕರೀನಾ ಕಪೂರ್ ಭಾಗಿ ಆಗಿದ್ದರು. ನಿರೂಪಕಿಯೊಬ್ಬರು ಬಾಲಿವುಡ್ ನಟ-ನಟಿಯರ ನಡುವಿನ ಸಂಭಾವನೆ ತಾರತಮ್ಯದ ಬಗ್ಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ನಟಿಯರಿಬ್ಬರೂ ದನಿಗೂಡಿಸಿದ್ದರು. ಆದರೆ ಆಮೀರ್ ಖಾನ್ ವಾಸ್ತವದ ಬಗ್ಗೆ ಮಾತನಾಡಿದ್ದರು. ಅದನ್ನು ಕೇಳಿ ಮೂವರು ಸೈಲೆಂಟ್ ಆಗಿದ್ದರು. ಇಲ್ಲಿ ಲಿಂಗ ತಾರತಮ್ಯದ ವಿಚಾರ ಬರುವುದೇ ಇಲ್ಲ. ಕೆಲಸಕ್ಕೆ ತಕ್ಕ ಸಂಭಾವನೆ ಎಂದು ಆಮೀರ್ ಹೇಳಿದ್ದರು.

"ಕಂಡಿತ ಚಿತ್ರರಂಗದಲ್ಲಿ ನಾಯಕಿಯರು ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಕ್ಯಾಮರಾಮನ್, ಲೈಟ್‌ಬಾಯ್ಸ್ ಹೀಗೆ ಎಲ್ಲರೂ ಕಷ್ಟಪಡುತ್ತಾರೆ. ಎಲ್ಲರಿಗೂ ಸಮಾನವಾಗಿ ಸಂಭಾವನೆ ಕೊಡಬೇಕು" ಎಂದಿದ್ದಾರೆ. ಕೂಡಲೇ ನಿರೂಪಕಿ "ನಾಯಕಿಯರನ್ನು ಲೈಟ್ಸ್ ಬಾಯ್ಸ್‌ ಜೊತೆ ಹೋಲಿಸ್ತಿದ್ದೀರಾ"? ಎಂದಿದ್ದಾರೆ. "ಇಲ್ಲ.. ಇಲ್ಲ.. ನಾಯಕಿಯರು, ಲೈಟ್ಸ್ ಬಾಯ್ ಅಂತ ಅಲ್ಲ. ಎಲ್ಲರೂ ಕಷ್ಟಬಿದ್ದು ಕೆಲಸ ಮಾಡುತ್ತಾರೆ. ನನ್ನ ರೀತಿಯಲ್ಲೇ ಲೈಟ್ಸ್ ಬಾಯ್ ಕೆಲಸ ಮಾಡ್ತಾನೆ. ಆದರೆ ಆತನಿಗೆ ನನಗಿಂತ ಬಹಳ ಕಮ್ಮಿ ಸಂಭಾವನೆ ಸಿಗುತ್ತದೆ. ಇಲ್ಲಿ ಮಹಿಳೆ, ಪುರುಷ ಎನ್ನುವ ಪ್ರಶ್ನೆ ಬರಲ್ಲ. ಅದೇ ಇಲ್ಲಿ ಗೊಂದಲಕ್ಕೆ ಕಾರಣವಾಗಿರುವುದು" ಎಂದು ಆಮೀರ್ ಖಾನ್ ಹೇಳಿದ್ದಾರೆ.

ಯಾರಿಂದ ಹೆಚ್ಚು ಆದಾಯ ವಾಪಸ್ ಬರುತ್ತದೆ ಎನ್ನುವುದನ್ನು ಆಧರಿಸಿ ಚಿತ್ರರಂಗದಲ್ಲಿ ಸಂಭಾವನೆ ನಿಗದಿಯಾಗುತ್ತದೆ ಎಂದು ಆಮೀರ್ ಹೇಳಿದ್ದಾರೆ. "ಸಿನಿಮಾ ಮಾರ್ಕೆಟ್ ಪ್ರಕಾರ ಇಲ್ಲಿ ಸಂಭಾವನೆ ಲೆಕ್ಕಾಚಾರ. ಯಾರು ಹೆಚ್ಚು ಆದಾಯ ತರ್ತಾನೆ ಎನ್ನುವುದು ಮುಖ್ಯ. ಒಂದು ವೇಳೆ ನನಗೆ 10 ರೂ. ಸಂಭಾವನೆ ಕೊಟ್ರೆ, ನಾನು 10 ರೂ. ಅಥವಾ ಅದಕ್ಕಿಂತ ಹೆಚ್ಚು ವಾಪಸ್ ತಂದುಕೊಡಬಲ್ಲೆ. 5 ರೂ. ಕೊಟ್ರೆ. 5 ರೂಪಾಯಿ ವಾಪಸ್ ಬರುತ್ತೆ. ನನಗಿಂತ ರಾಣಿ ಮುಖರ್ಜಿ ಚಿತ್ರಮಂದಿರಗಳಲ್ಲಿ ಹೆಚ್ಚು ಸೀಟುಗಳನ್ನು(ಪ್ರೇಕ್ಷಕರನ್ನು ಸೆಳೆದರೆ) ಭರ್ತಿ ಮಾಡಿದ್ರೆ, ಶೇ.101ರಷ್ಟು ನನಗಿಂತ ಆಕೆಗೆ ಹೆಚ್ಚು ಸಂಭಾವನೆ ಕೊಡಬೇಕು. ಮಾರ್ಕೆಟ್ ಲೆಕ್ಕಾಚಾರ ಇದು. ಇಲ್ಲಿ ಲಿಂಗ ತಾರತಮ್ಯದ ಪ್ರಶ್ನೆ ಬರುವುದೇ ಇಲ್ಲ. ಪ್ರೇಕ್ಷಕರನ್ನು ಸೆಳೆಯುವ ಸಾಮರ್ಥ್ಯ ಯಾರಿಗೆ ಹೆಚ್ಚು ಎನ್ನುವುದು ಮುಖ್ಯವಾಗುತ್ತದೆ" ಎಂದಿದ್ದಾರೆ.

ಸದ್ಯ ಆಮೀರ್ ಖಾನ್ ಹೇಳಿಕೆ ವೀಡಿಯೋ ಮತ್ತೆ ವೈರಲ್ ಆಗ್ತಿದೆ. ಸಾಕಷ್ಟು ಜನ ಈ ವಾದವನ್ನು ಬೆಂಬಲಿಸಿ ಕಾಮೆಂಟ್ ಮಾಡುತ್ತಿದ್ದಾರೆ. 'ಪದ್ಮಾವತ್', 'ಗಂಗೂಬಾಯಿ ಕತಿಯಾವಾಡಿ' ರೀತಿಯ ಸಿನಿಮಾಗಳಲ್ಲಿ ನಾಯಕಿಯರಿಗೆ ಹೆಚ್ಚು ಸಂಭಾವನೆ ಸಿಕ್ಕಿತ್ತು. ಆಗ ಯಾಕೆ ಯಾರು ಮಾತನಾಡಲಿಲ್ಲ ಎಂದು ಕೆಲವರು ಚರ್ಚಿಸುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X