For Quick Alerts
  ALLOW NOTIFICATIONS  
  For Daily Alerts

  ಕನಸಿನ 'ಮಹಾಭಾರತ' ಚಿತ್ರದಿಂದ ಹಿಂದೆ ಸರಿದ ಆಮೀರ್: ವರ್ಷಗಳಿಂದ ಸಂಶೋಧನೆ ನಡೆಸಿ ಸಿನಿಮಾ ಕೈಬಿಟ್ಟಿದ್ದೇಕೆ?

  |

  ರಾಮಾಯಣ ಮತ್ತು ಮಹಾಭಾರತ ಮೇಲೆ ಎಷ್ಟು ಬಾರಿ ಸಿನಿಮಾ, ಧಾರಾವಾಹಿಗಳನ್ನು ಮಾಡಿದ್ರು ಪ್ರೇಕ್ಷಕರು ಮುಗಿಬಿದ್ದು ನೋಡುತ್ತಾರೆ. ಈಗಾಗಲೇ ರಾಮಾಯಣ ಮತ್ತು ಮಹಾಭಾರತದ ಮೇಲೆ ಸಾಕಷ್ಟು ಸಿನಿಮಾಗಳು ಬಂದಿವೆ.

  ಸದ್ಯ ಬಾಲಿವುಡ್ ನಲ್ಲಿ ರಾಮಾಯಣ ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ ಇದಕ್ಕೂ ಮೊದಲು ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ 'ಮಹಾಭಾರತ' ಸಿನಿಮಾ ಮಾಡಲು ಸಿದ್ಧತೆ ನಡೆಸುತ್ತಿದ್ದರು. ಮಹಾಭಾರತ ಆಮೀರ್ ಖಾನ್ ಅವರ ಕನಸಿನ ಪ್ರೊಡೆಕ್ಟ್ ಆಗಿದ್ದು, 2 ವರ್ಷಗಳಿಂದ ಸೈಲೆಂಟ್ ಆಗಿ ಇದರ ಮೇಲೆ ಕೆಲಸ ಮಾಡುತ್ತಿದ್ದರು. ಆದರೀಗ ತಮ್ಮ ಕನಸಿನ ದೊಡ್ಡ ಯೋಜನೆಯನ್ನು ಕೈಬಿಡುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಮುಂದೆ ಓದಿ..

  ಕಾರ್ಗಿಲ್‌ಗೆ ತೆರಳುತ್ತಿದ್ದಾರೆ ನಟ ಅಮೀರ್ ಖಾನ್ಕಾರ್ಗಿಲ್‌ಗೆ ತೆರಳುತ್ತಿದ್ದಾರೆ ನಟ ಅಮೀರ್ ಖಾನ್

  2ವರ್ಷದಿಂದ ತಯಾರಿ ನಡೆಸಿ ಹಿಂದೆ ಸರಿದ ಆಮೀರ್

  2ವರ್ಷದಿಂದ ತಯಾರಿ ನಡೆಸಿ ಹಿಂದೆ ಸರಿದ ಆಮೀರ್

  ಮಹಾಭಾರತ ಯೋಜನೆಗಾಗಿ ಆಮೀರ್ ಖಾನ್ ಸುಮಾರು 2 ವರ್ಷಗಳಿಂದ ತಯಾರಿ ನಡೆಸಿದ್ದರು. ಸಂಶೋಧನೆ ಮಾಡಿದ್ದರು. ಆದರೀಗ ಆಮೀರ್ ಖಾನ್ ಈ ಮಹತ್ವಾಕಾಂಕ್ಷೆಯ ಸಿನಿಮಾವನ್ನು ಕೈಬಿಟ್ಟಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಮೊದಲು ಮಹಾಭಾರತ ಸಿನಿಮಾ ಮಾಡುವುದಾಗಿ ಹೊರಟಿದ್ದ ಆಮೀರ್ ಖಾನ್, ಬಳಿಕ ವೆಬ್ ಸರಣಿ ಮಾಡಲು ನಿರ್ಧರಿಸಿದ್ದರು.

  ಸಿನಿಮಾದಿಂದ ಹಿಂದೆ ಸರಿಯಲು ಕಾರಣವೇನು?

  ಸಿನಿಮಾದಿಂದ ಹಿಂದೆ ಸರಿಯಲು ಕಾರಣವೇನು?

  ಈ ಪೊಜೆಕ್ಟ್ ಮೇಲೆ ಪ್ರಾಣನೆ ಇಟ್ಟುಕೊಂಡಿದ್ದ ಆಮೀರ್ ಖಾನ್ ದಿಢೀರ್ ಅಂತ ದೂರ ಸರಿಯಲು ನಿಖರ ಕಾರಣ ಬಹಿರಂಗವಾಗಿಲ್ಲ. ಆದರೆ ಮೂಲಗಳ ಪ್ರಕಾರ ಒಂದು ವೆಬ್ ಸರಣಿಗಾಗಿ ಸುಮಾರು 4 ವರ್ಷಗಳು ಬೇಕಾಗುತ್ತೆ. ಹಾಗಾಗಿ ಒಂದು ವೆಬ್ ಸೀರಿಸ್ ಗಾಗಿ ಅತ್ಯಮೂಲ್ಯವಾದ ವರ್ಷಗಳನ್ನು ಮೀಸಲಿಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಅವಧಿಯಲ್ಲಿ 3 ಸಿನಿಮಾ ಮಾಡಬಹುದು ಎನ್ನುವುದು ಅವರ ಲೆಕ್ಕಾಚಾರ ಎನ್ನಲಾಗುತ್ತಿದೆ.

  ಧನುಷ್ ಮಾಡಬೇಕಿದ್ದ ಖ್ಯಾತ ಕ್ರೀಡಾಪಟುವಿನ ಪಾತ್ರದಲ್ಲಿ ಅಮೀರ್ ಖಾನ್ಧನುಷ್ ಮಾಡಬೇಕಿದ್ದ ಖ್ಯಾತ ಕ್ರೀಡಾಪಟುವಿನ ಪಾತ್ರದಲ್ಲಿ ಅಮೀರ್ ಖಾನ್

  'ಮಹಾಭಾರತ' ಮಾಡಲು ಸರಿಯಾದ ಸಮಯ ಇದಲ್ಲ

  'ಮಹಾಭಾರತ' ಮಾಡಲು ಸರಿಯಾದ ಸಮಯ ಇದಲ್ಲ

  ಇನ್ನು ಕೆಲವು ವಿವಾದಗಳಿಂದ ಈ ಯೋಜನೆ ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಮಹಾಭಾರತ ಮಾಡಲು ಸರಿಯಾದ ಸಮಯ ಇದಲ್ಲ ಎಂದು ಯೋಚಿಸಿ ಈ ವೆಬ್ ಸೀರಿಸ್ ನಿಂದ ದೂರ ಇರುವುದೇ ಉತ್ತಮ ಎಂದು ಆಮೀರ್ ಖಾನ್ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

  ತೆಲುಗು ನೆಲದಲ್ಲಿ ಭರ್ಜರಿಯಾಗಿ ಅಬ್ಬರಿಸಲಿದ್ದಾರೆ ರಾಕಿ ಭಾಯ್ | KGF 2 | PrashanthNeel | Yash
  ಕೃಷ್ಣನ ಪಾತ್ರ ಮಾಡಲು ಮುಂದಾಗಿದ್ದರು ಆಮೀರ್ ಖಾನ್

  ಕೃಷ್ಣನ ಪಾತ್ರ ಮಾಡಲು ಮುಂದಾಗಿದ್ದರು ಆಮೀರ್ ಖಾನ್

  ಮಹಾಭಾರತಕ್ಕಾಗಿ ಆಮೀರ್ ಕೆಲವು ಸಿನಿಮಾಗಳನ್ನು ಕೈಬಿಟ್ಟಿದ್ದಾರೆ. ಈ ಯೋಜನೆಯಲ್ಲಿ ಆಮೀರ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಕೃಷ್ಣ ಎಂದರೆ ಆಮೀರ್ ಖಾನ್ ಗೆ ತುಂಬಾ ಇಷ್ಟವಂತೆ. ಹಾಗಾಗಿ ಕೃಷ್ಣ ಪಾತ್ರ ಮಾಡ್ತಾರೆ ಎನ್ನಲಾಗಿತ್ತು. ಪ್ರಭಾಸ್ ಹೆಸರು ಸಹ ಕೇಳಿಬಂದಿತ್ತು. ಆದರೆ ಇದೀಗ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಮುಂದೊಂದು ದಿನ ಆಮೀರ್ ಖಾನ್ ಮಹಾಭಾರತ ಸಿನಿಮಾ ಮಾಡಿ, ತನ್ನ ಕನಸನ್ನು ಈಡೇರಿಸಿಕೊಳ್ಳುತ್ತಾರಾ ಎನ್ನುವುದನ್ನು ಕಾದುನೋಡಬೇಕು.

  English summary
  Bollywood Actor Aamir Khan shelves Mahabharat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X