ಹೊಸ ಅವತಾರದಲ್ಲಿ ಕಾಣಿಸಿಕೊಂಡ ಸ್ಟಾರ್ ನಟ: ಫೋಟೋ ವೈರಲ್
ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸ್ಟೈಲಿಶ್ ಹೇರ್ ಕಟ್ ಮಾಡಿಸಿರುವ ಅಜಯ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಸ್ಟಾರ್ ನಟನ ಸಾಲ್ಟ್ ಅಂಡ್ ಪೆಪ್ಪರ್ ಲುಕ್ ವೈರಲ್ ಆಗಿದೆ.
ಅಂದಹಾಗೆ ಇದು ಅಜಯ್ ದೇವಗನ್ ಅವರ ಹೊಸ ಸಿನಿಮಾದ ಲುಕ್. ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ ಅಜಯ್ ದೇವಗನ್‌ಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಅಂದಹಾಗೆ ಅಜಯ್ ದೇವಗನ್ ಈ ಸ್ಟೈಲಿಶ್ ಲುಕ್ ಹಿಂದೆ ಇದ್ದಾರೆ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಾಕಿಮ್.
ಬಾಲಿವುಡ್ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಸ್ಟಾರ್ ಕಲಾವಿದರಿಗೆ ಹೇರ್ ಸ್ಟೈಲ್ ಮಾಡಿರುವ ಆಲಿಮ್ ಹಾಕಿಮ್ ಇದೀಗ ಅಜಯ್ ದೇವಗನ್ ಅವರನ್ನು ಹೊಸ ಅವತಾರದ ಮೂಲಕ ಅಭಿಮಾನಿಗಳಿಗೆ ದರ್ಶನ ಮಾಡಿಸಿದ್ದಾರೆ. ಆಲಿಮ್ ಹಾಕಿಮ್ ಇತ್ತೀಚಿಗಷ್ಟೆ ತೆಲುಗು ಸ್ಟಾರ್ ರಾಮ್ ಚರಣ್ ಅವರಿಗೆ ಹೇರ್ ಸ್ಟೈಲ್ ಮಾಡುವ ಮೂಲಕ ಸುದ್ದಿಯಾಗಿದ್ದರು. ಆರ್ ಆರ್ ಆರ್ ಸಿನಿಮಾದ ಲುಕ್‌ಗೆ ಆಲಿಮ್ ಹಾಕಿಮ್ ರಾಮ್ ಚರಣ್‌ಗೆ ಹೇರ್ ಸ್ಟೈಲ್ ಮಾಡಿದ್ದರು.

ಅಂದಹಾಗೆ ಅಲಿಮ್ ಹಕೀಮ್ ಕನ್ನಡದ ಸ್ಟಾರ್ ನಟ ಯಶ್ ಅವರಿಗೂ ಹೇರ್ ಸ್ಟೈಲ್ ಮಾಡುವ ಮೂಲಕ ಗಮನ ಸೆಳೆದಿದ್ದರು. ಇನ್ನು ಕ್ರಿಕೆಟಿಗ ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಸ್ಟಾರ್‌ಗಳಿಗೆ ಆಲಿಮ್ ಹಕೀಮ್ ಅದ್ಭುತವಾದ ಹೇರ್ ಸ್ಟೈಲ್ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು.
ಇದೀಗ ಅಜಯ್ ದೇವಗನ್ ಅವರಿಗೆ ಸಾಲ್ಟ್ ಅಂಡ್ ಪೆಪ್ಪರ್ ಲುಕ್ ಸ್ಟೈಲ್ ಮಾಡಿ ಗಮನ ಸೆಳೆದಿದ್ದಾರೆ. ಅಜಯ್ ದೇವಗನ್ ಹೊಸ ಸ್ಟೈಲ್‌ಗೆ ಅಭಿಮಾನಿಗಳು ಮಾತ್ರವಲ್ಲದೆ, ಚಿತ್ರರಂಗದ ಗಣ್ಯರು ಸಹ ಫಿದಾ ಆಗಿದ್ದಾರೆ. ಕಾರ್ತಿಕ್ ಆರ್ಯನ್, ಅನಿಲ್ ಕಪೂರ್, ಅಭಿಷೇಕ್ ಬಚ್ಚನ್ ಸೇರಿದಂತೆ ಅನೇಕ ಅನೇಕರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗಷ್ಟೆ ಅಜಯ್ ದೇವಗನ್ ಹೊಸ ಸಿನಿಮಾ ಘೋಷಣೆ ಮಾಡಿದ್ದರು. ಸಿದ್ಧಾರ್ಥ್ ರಾಯ್ ಕಪೂರ್ ಜೊತೆ ಸೇರಿ ಜಂಟಿ ನಿರ್ಮಾಣಕ್ಕೆ ಕೈ ಹಾಕಿರುವ ಅಜಯ್ ದೇವಗನ್ ಹೊಸ ಚಿತ್ರಕ್ಕೆ 'ಗೋಬರ್' ಎಂದು ಹೆಸರಿಟ್ಟಿದ್ದರು. ಈ ಚಿತ್ರದಲ್ಲಿ ಅಜಯ್ ದೇವಗನ್ ನಿರ್ಮಾಪಕನಾಗಿ ತೊಡಗಿಕೊಂಡಿರುವುದು ಅಧಿಕೃತವಾಗಿದೆ. ಆದರೆ, ನಟನಾಗಿ ಕಾಣಿಸಿಕೊಳ್ಳುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.
ಇನ್ನು ಅಜಯ್ ದೇವಗನ್ ಸದ್ಯ, ಸೂರ್ಯವಂಶಿ, ಭುಜ್:ದಿ ಪ್ರೈಡ್ ಆಫ್ ಇಂಡಿಯಾ, ಮೈದಾನ್, ಗಂಗೂಬಾಯಿ ಕಾಠೀಯಾವಾಡಿ, ಆರ್ ಆರ್ ಆರ್ ಸೇರಿದಂತೆ ಅನೇಕ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ.


Click it and Unblock the Notifications











