ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ಕೊಟ್ಟ ಅಜಯ್ ದೇವ್ಗನ್
ಬಾಲಿವುಡ್ ನಟ ಅಜಯ್ ದೇವ್ಗನ್ ಅಭಿನಯದ 'ತಾನಾಜಿ' ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆಯ್ತು. 'ಸೂರ್ಯವಂಶಿ', 'ಭುಜ್: ದಿ ಪ್ರೈಡ್ ಆಫ್ ಇಂಡಿಯಾ', 'ಮೈದಾನ್', 'ಆರ್.ಆರ್.ಆರ್' ಚಿತ್ರಗಳಲ್ಲಿ ಅಜಯ್ ದೇವ್ಗನ್ ಸದ್ಯ ಅಭಿನಯಿಸುತ್ತಿದ್ದಾರೆ.
ಬಿಜಿ ಶೂಟಿಂಗ್ ಶೆಡ್ಯೂಲ್ ನಡುವೆ ನಟ ಅಜಯ್ ದೇವ್ಗನ್ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ಕೊಟ್ಟಿದ್ದಾರೆ. ಪತ್ನಿ ಕಾಜೋಲ್ ಸಮೇತ ದೇವಸ್ಥಾನಕ್ಕೆ ಆಗಮಿಸಿದ ಅಜಯ್ ದೇವ್ಗನ್ ಆಶ್ಲೇಷ ಸೇವೆಯನ್ನು ನೆರವೇರಿಸಿದರು.

ಬಳಿಕ ಶ್ರೀ ಸುಬ್ರಹ್ಮಣ್ಯ ಸಂಪುಠ ನರಸಿಂಹ ಸ್ವಾಮಿ ಮಠಕ್ಕೆ ಭೇಟಿ ನೀಡಿ ವಿದ್ಯಾಪ್ರಸನ್ನ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು.
ಅಂದ್ಹಾಗೆ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಜಯ್ ದೇವ್ಗನ್ ಭೇಟಿ ಕೊಟ್ಟಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹಲವು ಬಾರಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬಂದು ಹೋಮ-ಹವನಗಳನ್ನು ಮಾಡಿಸಿ, ದೇವರಿಗೆ ಪೂಜೆ ಸಲ್ಲಿಸಿದ್ದಾರೆ.
English summary
Bollywood Actor Ajay Devgan performs pooja at Kukke Subramanya Temple.


Click it and Unblock the Notifications