ದುಬಾರಿ ಮನೆ ಖರೀದಿಸಲು ಇಷ್ಟೊಂದು ಸಾಲ ಮಾಡಿದ್ದಾರಾ ನಟ ಅಜಯ್ ದೇವಗನ್
ಬಾಲಿವುಡ್ ಸ್ಟಾರ್ ಸೆಲೆಬ್ರಿಟಿಗಳು ಮನೆ ಖರೀದಿ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ. ಕೊರೊನಾ ಲಾಕ್ ಡೌನ್ ನಡುವೆಯೂ ಸ್ಟಾರ್ ಕಲಾವಿದರು ಮುಂಬೈನಲ್ಲಿ ದುಬಾರಿ ಮನೆ ಖರೀದಿ ಮಾಡಿದ್ದಾರೆ. ಅಲಿಯಾ ಭಟ್, ಜಾಹ್ನವಿ ಕಪೂರ್, ಅಮಿತಾಬ್ ಬಚ್ಚನ್, ಅರ್ಜುನ್ ಕುಮಾರ್ ಸೇರಿದಂತೆ ಅನೇಕರು ಬಂಗ್ಲೆ ಖರೀದಿ ಮಾಡಿದ್ದಾರೆ.
ನಟ ಮತ್ತು ನಿರ್ಮಾಪಕ ಅಜಯ್ ದೇವಗನ್ ಕೂಡ ಮುಂಬೈನ ಜುಹು ಪ್ರದೇಶದಲ್ಲಿ ಐಷಾರಾಮಿ ಬಂಗ್ಲೆ ಕೊಂಡುಕೊಂಡಿದ್ದಾರೆ. ಅಜಯ್ ದೇವಗನ್ ಹೊಸ ಮನೆ ಬರೋಬ್ಬರಿ 47.5 ಕೋಟಿ ರೂ. ಬೆಲೆಬಾಳುವ ಮನೆಯಾಗಿದೆ. ತುಂಬಾ ವಿಸ್ತೀರ್ಣವಾಗಿದ ಮನೆಯಾಗಿದೆ ಎಂದು ವರದಿಯಾಗಿದೆ.
ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಅಜಯ್ ದೇವನ್ ಸಾಲ ಮಾಡಿ ಹೊಸ ಮನೆ ಖರೀದಿಸಿದ್ದಾರೆ ಎನ್ನುವ ಮಾಹಿತಿ ಕೇಳಿಬರುತ್ತಿದೆ. ತನ್ನ ಬಂಗಲೆಗಾಗಿ ಅಜಯ್ 18.57 ಕೋಟಿ ರೂ ಲೋನ್ ಪಡೆದಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಮನೆ ಖರೀದಿ ಮಾಡಿರುವ ಅಜಯ್ ದೇವಗನ್ ಏಪ್ರಿಲ್ 27ಕ್ಕೆ ಸಾಲ ತೆಗೆದು ಕೊಂಡಿದ್ದಾರಂತೆ.

ಅಜಯ್ ದೇವಗನ್ ಖರೀದಿ ಮಾಡಿದ ಮನೆ ಸದ್ಯ ವಾಸವಿದ್ದ ಮನೆಯ ಸಮೀಪವೇ ಇದೆಯಂತೆ. ಹೊಸ ಮನೆಯನ್ನು ಮೇ ತಿಂಗಳಲ್ಲಿ ಅಜಯ್ ದೇವಗನ್ ತನ್ನ ತಾಯಿ ವೀಣಾ ಅವರ ಹೆಸರಿಗೆ ವರ್ಗಾಯಿಸಿದ್ದಾರಂತೆ. ಮನೆ ಖರೀದಿಗೆ ಅಜಯ್ ದೇವಗನ್ 2.73 ಕೋಟಿ ರೂ. ಸ್ಟ್ಯಾಂಪ್ ಡ್ಯೂಟಿ ಪಾವತಿಸಿದ್ದಾರೆ ಎನ್ನುವ ಸುದ್ದಿ ಸಹ ಕೇಳಿಬರುತ್ತಿದೆ.
ಹೊಸ ಬಂಗಲೆಗಾಗಿ ಕಳೆದ ಒಂದು ವರ್ಷದಿಂದ ಹೊಸ ಮನೆ ಖರೀದಿ ಮಾಡಲು ಅಜಯ್ ಮತ್ತು ಕಾಜಲ್ ಓಡಾಡುತ್ತಿದ್ದರು. ಇದೀಗ ಅವರ ಕನಸಿನ ಹಾಗೆ ವಿಸ್ತಾರವಾದ ಜಾಗ ಇರುವ ಐಷಾರಾಮಿ ಬಂಗಲೆ ಖರೀದಿ ಮಾಡುವ ಮೂಲಕ ಸಂತಸ ಪಟ್ಟಿದ್ದಾರೆ.


Click it and Unblock the Notifications











