For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ಖಳನಟನ ಬಂಧಿಸಿ ಎಳೆದೊಯ್ದ ಪೊಲೀಸರು

  |

  ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಖಳನಟ ಏಜಾಜ್ ಖಾನ್ ಅನ್ನು ಎನ್‌ಸಿಬಿ (ನಾರ್ಕೊಟಿಕ್ ಕಂಟ್ರೂಲ್ ಬ್ಯೂರೊ)ಯು ಮಂಗಳವಾರ ಬಂಧಿಸಿದೆ.

  ರಾಜಸ್ಥಾನದಲ್ಲಿದ್ದ ಏಜಾಜ್ ಖಾನ್‌ ಇಂದು ಮುಂಬೈಗೆ ಬಂದಿದ್ದು ಪೊಲೀಸರು ಕೂಡಲೇ ಆತನನ್ನು ಬಂಧಿಸಿದ್ದಾರೆ. ಬಂಧನದ ವೇಳೆ ಏಜಾಜ್ ಖಾನ್ ವಿರೋಧ ವ್ಯಕ್ತಪಡಿಸಿದ್ದು ಆತನನ್ನು ಬಲಪ್ರಯೋಗಿಸಿ ಎಳೆದೊಯ್ಯಲಾಯ್ತು ಎಂದು ವರದಿ ಆಗಿದೆ.

  ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆ ಬಂಧಿಸಲಾಗಿದ್ದ ಶದಾಬ್ ಬಟಾಟಾ ಜೊತೆಗೆ ಆಪ್ತ ಸಂಬಂಧ ಏಜಾಜ್ ಖಾನ್‌ಗೆ ಇತ್ತು ಹಾಗೂ ಅಜಾಜ್ ಖಾನ್ ಸಹ ಬಟಾಟಾ ಗ್ಯಾಂಗ್‌ನ ಸದಸ್ಯನಾಗಿದ್ದ ಎನ್ನಲಾಗಿದೆ.

  ಬಾಲಿವುಡ್‌ ಸೆಲೆಬ್ರಿಟಿಗಳಿಗೆ ಸೇರಿದಂತೆ ಮುಂಬೈನ ಹಲವು ಪ್ರಮುಖ ವ್ಯಕ್ತಿಗಳಿಗೆ ಡ್ರಗ್ಸ್ ಸರಬರಾಜು ಮಾಡುವಲ್ಲಿ ಬಟಾಟಾ ಗ್ಯಾಂಗ್‌ನದ್ದು ಪ್ರಮುಖ ಪಾತ್ರ. ಕೆಲವು ದಿನಗಳ ಹಿಂದಷ್ಟೆ ಈ ಗ್ಯಾಂಗ್‌ನ ಮುಖ್ಯಸ್ಥ ಶದಾಬ್ ಬಟಾಟಾ ಅನ್ನು ಎನ್‌ಸಿಬಿಯವರು ಬಂಧಿಸಿ ಎರಡು ಕೋಟಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದರು.

  ಅಜಾಜ್‌ ಖಾನ್‌ಗೆ ಬಂಧನ ಹೊಸದಲ್ಲ. ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಕೋಮುಗಳ ಮಧ್ಯೆ ದ್ವೇಷ ಹುಟ್ಟಿಸುವ ಹೇಳಿಕೆ ನೀಡಿದ ಪ್ರಕರಣದಲ್ಲಿ ಆತನನ್ನು ಕಳೆದ ಏಪ್ರಿಲ್‌ನಲ್ಲಿ ಬಂಧಿಸಲಾಗಿತ್ತು. 'ನಾನು ಸಂವಿಧಾನಕ್ಕಿಂತಲೂ ಖುರಾನ್‌ಗೆ ಹೆಚ್ಚಿನ ಗೌರವ, ಪ್ರಾಶಸ್ತ್ಯ ನೀಡುತ್ತೇನೆ' ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದರು ಏಜಾಜ್ ಖಾನ್.

  ಮದಕರಿ ಸಿನಿಮಾಗೂ ಮುಂಚೆ ಗೋಲ್ಡ್ ರಿಂಗ್ ಮೂಲಕ ತೆರೆಮೇಲೆ ಬರಲಿದ್ದಾರೆ ಡಿ ಬಾಸ್ | Filmibeat Kannada

  ಬಾಲಿವುಡ್‌ ಹಾಗೂ ತೆಲುಗಿನ ಹಲವು ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ ಏಜಾಜ್ ಖಾನ್. ಜೊತೆಗೆ ಹಲವು ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳಲ್ಲಿಯೂ ನಟಿಸಿದ್ದಾರೆ ಏಜಾಜ್.

  English summary
  Bollywood actor Ajaz Khan arrested by NCB in drugs case on Tuesday in Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X