ಪತ್ನಿ ಹಾಗೂ ಆಪ್ತರ ಜೊತೆಗೆ ಅಕ್ಷಯ್ ಕುಮಾರ್ ಬರ್ತ್ ಡೇ ಪಾರ್ಟಿ
ಬಾಲಿವುಡ್ ನಟ ಅಕ್ಷಯ್ ಕುಮಾರ್ ಇಂದು ತಮ್ಮ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಯಾವಾಗಲೂ ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿ ಇರುವ ಅವರು ಈ ದಿನವನ್ನು ತಮ್ಮ ಆಪ್ತರೊಂದಿಗೆ ಕಳೆದಿದ್ದಾರೆ.
ಅಕ್ಷಯ್ ಕುಮಾರ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪತ್ನಿ ಟ್ವಿಂಕಲ್ ಖನ್ನಾ, 'ಹೌಸ್ ಫುಲ್ 4' ಸಿನಿಮಾ ಸಹ ನಟ ಬಾಬಿ ಡಿಯೋಲ್, ಅವರ ಪತ್ನಿ ತಾನ್ಯಾ ಡಿಯೋಲ್ ಭಾಗಿಯಾಗಿದ್ದರು. ನೀಲಿ ಬಣ್ಣದ ಶರ್ಟ್ ನಲ್ಲಿ ಬರ್ತ್ ಡೇ ಬಾಯ್ ಅಕ್ಷಯ್ ಮಿಂಚುತ್ತಿದ್ದರು.
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅಕ್ಷಯ್ ಕುಮಾರ್ ಗೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುಭಕೋರಿದ್ದಾರೆ. ಅನುಪಮ್ ಖೇರ್, ಫಾರ ಖಾನ್, ರಕುಲ್ ಪ್ರೀತ್ ಸಿಂಗ್, ಕೃತಿ ಕರಾಬಂಧ ಸೇರಿದಂತೆ ಅನೇಕರು ವಿಶ್ ಮಾಡಿದ್ದಾರೆ.

ಬರ್ತ್ ಡೇಗೆ ಶುಭಾಶಯ ತಿಳಿಸಿದ ಎಲ್ಲರಿಗೆ ಅಕ್ಷಯ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ.
'ಗೋಲ್ಡ್' ಚಿತ್ರದ ನಂತರ ಅಕ್ಷಯ್ ಕುಮಾರ್ '2.0' ಸಿನಿಮಾ ಅಭಿಮಾನಿಗಳ ಮುಂದೆ ಬರಲಿದೆ. ಈ ಚಿತ್ರದ ಟೀಸರ್ ಸಪ್ಟೆಂಬರ್ 13ಕ್ಕೆ ಬಿಡುಗಡೆಯಾಗಲಿದೆ.
English summary
Bollywood actor Akshay Kumar calibrated his 51th birthday with his family.


Click it and Unblock the Notifications