ಅಸ್ಸಾಂ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ ಖಿಲಾಡಿ ಅಕ್ಷಯ್ ಕುಮಾರ್

ಅಸ್ಸಂ ರಾಜ್ಯಗಳಲ್ಲಿ ಪ್ರವಾಸ ಪರಿಸ್ಥಿತಿ ಮುಂದುವರೆದಿದ್ದು ಲಕ್ಷಾಂತರ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ರಾಜ್ಯದ 30 ಜಿಲ್ಲೆಗಳು ಬೀಕರ ಪ್ರವಾಹಕ್ಕೆ ತುತ್ತಾಗಿದ್ದು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಸಂಕಷ್ಟದಲ್ಲಿ ಸಿಲುಕಿರುವ ಅಸ್ಸಾಂ ಜನರ ನೆರವಿಗೆ ಧಾವಿಸಿದ್ದಾರೆ ಬಾಲಿವುಡ್ ಸ್ಟಾರ್ಸ್.

ಈಗಾಗಲೆ ಸಾಕಷ್ಟು ಬಾಲಿವುಡ್ ಸ್ಟಾರ್ಸ್ ಅಸ್ಸಾಂ ಪರಿಹಾರ ನಿಧಿಗೆ ಹಣ ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಅಸ್ಸಾಂ ಜನರ ನೆರವಿಗೆ ದಾವಿಸುವಂತೆ ಜನರಲ್ಲಿ ಮನವಿ ಕೂಡ ಮಾಡಿ ಕೊಳ್ಳುತ್ತಿದ್ದಾರೆ. ಕಷ್ಟ ಎಂದಕ್ಷಣ ಮೊದಲು ಸ್ಪಂದಿಸುವ ನಟ ಅಕ್ಷಯ್ ಕುಮಾರ್. ಈ ಬಾರಿ ಅಸ್ಸಾಂ ವಿಚಾರದಲ್ಲು ಕೂಡ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ 2 ಕೋಟಿ ಪರಿಹಾರ ನೀಡಿದ್ದಾರೆ.

ಒಂದು ಕೋಟಿ ಅಸ್ಸಾಂ ಮುಖ್ಯಮಂತ್ರಿ ಪರಿಹಾರ ನಿಧಿಗೆ ಮತ್ತು ಮತ್ತೊಂದು ಕೋಟಿಯನ್ನು ನೀರಿನಲ್ಲಿ ಮುಳುಗಿ ಹೋಗಿರುವ ಕಾಜಿರಂಗ ಉದ್ಯಾನವನಕ್ಕೆ ನೀಡಿದ್ದಾರೆ. ಮನುಷ್ಯರಂತೆ ಲಕ್ಷಾಂತರ ಪ್ರಾಣಿಗಳು ಸಹ ನೀರಿನಲ್ಲಿ ಮುಳುಗಿ ಸಂಕಷ್ಟದ ಸ್ಥಿತಿಯಲ್ಲಿವೆ. ಈ ಬಗ್ಗೆ ಅಕ್ಷಯ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

2 ಕೋಟಿ ನೀಡಿದ ಅಕ್ಷಯ್ ಕುಮಾರ್

2 ಕೋಟಿ ನೀಡಿದ ಅಕ್ಷಯ್ ಕುಮಾರ್

ಅಸ್ಸಾಂನ ಪ್ರವಾಹ ಪರಿಸ್ಥಿತಿ ನಿಜಕ್ಕು ಹೃದಯವಿದ್ರಾವಕವಾಗಿದೆ. ಪ್ರವಾಹ ಪೀಡಿತರಾದ ಎಲ್ಲಾ ಮನುಷ್ಯರು ಹಾಗೂ ಪ್ರಾಣಿಗಳು ಈ ಸಂಕಷ್ಟದ ಸಮಯದಲ್ಲಿ ಸಹಾಕ್ಕೆ ಅರ್ಹ. ಆದ್ದರಿಂದ ನಾನು ಸಿಎಂ ಪರಿಹಾರ ನಿಧಿಗೆ ಹಾಗೂ ಕಾಜಿರಂಗ ಪಾರ್ಕ್ ರಕ್ಷಣೆಗೆ ಒಂದು ಕೋಟಿ ದಾನ ಮಾಡಲು ಬಯಸುತ್ತೇನೆ. ಇಂತಹ ಪರಿಸ್ಥಿಯಲ್ಲಿ ಎಲ್ಲರೂ ಕೂಡ ನೆರವಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಬಾಲಿವುಡ್ ನಟ-ನಟಿಯರ ಸಾಥ್

ಬಾಲಿವುಡ್ ನಟ-ನಟಿಯರ ಸಾಥ್

ಅಕ್ಷಯ್ ಕುಮಾರ್ ಜೊತೆಗೆ ಪ್ರಿಯಾಂಕಾ ಚೋಪ್ರ, ಶ್ರದ್ಧಾ ಕಪೂರ್, ದಿಯಾ ಮಿರ್ಜಾ ಸೇರಿದಂತೆ ಅನೇಕರು ಅಸ್ಸಾಂ ಜನರ ಸಂಕಷ್ಟಕ್ಕೆ ನೆರವಾಗಿದ್ದಾರೆ. "ಪ್ರಾಣಹಾನಿ, ಸಂತ್ರಸ್ತರ ಸ್ಥಳಾಂತರ ಹೀಗೆ ಅಸ್ಸಾಂನಿಂದ ಬರುವ ಸುದ್ದಿ ಕೇಳಲು ಹೃದಯವಿದ್ರಾವಕವಾಗಿದೆ. ಸಂಕಷ್ಟದಲ್ಲಿರುವರಿಗೆ ನನ್ನ ಪ್ರಾರ್ಥನೆ" ಎಂದು ಪ್ರಿಯಾಂಕಾ ಚೋಪ್ರ ಬರೆದುಕೊಂಡಿದ್ದಾರೆ.

ಸಹಾಯ ಹಸ್ತ ಚಾಚಿದ ಹಿಮಾ ದಾಸ್

ಸಹಾಯ ಹಸ್ತ ಚಾಚಿದ ಹಿಮಾ ದಾಸ್

ಭಾರತಯದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಕೂಡ ತಮ್ಮ ಒಂದು ತಿಂಗಳ ಸಂಬಳದ ಅರ್ಧ ಭಾಗವನ್ನು ಅಸ್ಸಾಂ ಪ್ರವಾಹ ಸಂತ್ರಸ್ತರ ನೆರವಿಗೆ ದಾನ ಮಾಡಿದ್ದಾರೆ. "ಬೀಕರ ನೆರೆಯಿಂದ ನಮ್ಮ ರಾಜ್ಯದ ಜನರ ಸ್ಥಿತಿ ತುಂಬ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ನಮ್ಮ ರಾಜ್ಯಕ್ಕೆ ಸಹಾಯ ಮಾಡಿ" ಎಂದು ಹಿಮಾ ದಾಸ್ ಮನವಿ ಮಾಡಿಕೊಂಡಿದ್ದಾರೆ.

15 ಜನರ ಸಾವು, 46ಲಕ್ಷ ಜನರು ಸಂಕಷ್ಟದಲ್ಲಿ

15 ಜನರ ಸಾವು, 46ಲಕ್ಷ ಜನರು ಸಂಕಷ್ಟದಲ್ಲಿ

ಬ್ರಹ್ಮಪುತ್ರ ನದಿಯಿಂದ ಉಂಟಾದ ಪ್ರವಾಹದಿಂದ ಅಸ್ಸಾಂನಲ್ಲಿ ಭೂಕುಸಿತವಾಗುತ್ತಿದೆ. ಇದುವರೆಗೂ 15 ಜನ ಸಾವನ್ನಪ್ಪಿದ್ದು 46 ಲಕ್ಷಕ್ಕು ಹೆಚ್ಚು ಜನ ಪ್ರವಾಸದಲ್ಲಿ ಸಿಲುಕಿಕೊಂಡಿದ್ದಾರೆ. 4,175 ಹಳ್ಳಿಗಳು ಜಲಾವೃತವಾಗಿವೆ. ಇನ್ನು ಕಾಜಿರಂಗ ಉದ್ಯಾನವನ ಸಂಪೂರ್ಣ ಮುಳುಗಿ ಹೋಗಿ 10ಲಕ್ಷಕ್ಕು ಹೆಚ್ಚು ಪ್ರಾಣಿಗಳು ಸಂಕಷ್ಟದಲ್ಲಿ ಸಿಲುಕಿವೆ.

More from Filmibeat

English summary
Bollywood actor Akshay Kumar donates Rs. 2 crores to Assam flood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X