For Quick Alerts
  ALLOW NOTIFICATIONS  
  For Daily Alerts

  ಗಾಯಕ ಅರ್ಮಾನ್ ಮಲಿಕ್‌ ತಂದೆಗೆ 6 ಕೋಟಿ ರೂ. ಬಂಗಲೆ ಮಾರಿದ ಅಕ್ಷಯ್ ಕುಮಾರ್!

  |

  ಬಾಲಿವುಡ್ ಸೆಲೆಬ್ರೆಟಿಗಳು ದಿನಕ್ಕೊಂದು ಪ್ರಾಪರ್ಟಿ ಖರೀದಿ ಮಾಡುತ್ತಾರೆ. ದಿನಕ್ಕೊಂದು ಸೇಲ್ ಮಾಡುತ್ತಾರೆ. ಇದು ಅವರ ಜೀವನದ ಡೈಲಿ ರೊಟೀನ್ ಆಗಿದೆ. ಇತ್ತೀಚೆಗೆ ಬಾಲಿವುಡ್‌ನ ಅತೀ ತೆರಿಗೆ ಕಟ್ಟುವ ನಟ ಅಕ್ಷಯ್ ಕುಮಾರ್ ತಮ್ಮ ಐಶಾರಾಮಿ ಬಂಗಲೆಯನ್ನು ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.

  ಮುಂಬೈನ ದುಬಾರಿ ಏರಿಯಾ ಅಂದೇರಿಯಲ್ಲಿ ಅಕ್ಷಯ್ ಕುಮಾರ್ ಬಂಗಲೆ ಖರೀದಿ ಮಾಡಿದ್ದರು. ಅದೇ ಬಂಗಲೆಯನ್ನು ಅಕ್ಷಯ್ ಕುಮಾರ್ ದುಬಾರಿ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ ಎಂದು ಜಾಪ್‌ಕೀ.ಕಾಮ್‌ಗೆ ವರದಿ ಮಾಡಿದೆ.

  'ಗುಟ್ಕಾ ಜಾಹೀರಾತಿನಲ್ಲಿ ಹಣ ಮಾಡ್ತಿರುವ ನಟರಿಗೆ ಸಿನಿಮಾ ಮಾಡಲು ಸಮಯವಿಲ್ಲ''ಗುಟ್ಕಾ ಜಾಹೀರಾತಿನಲ್ಲಿ ಹಣ ಮಾಡ್ತಿರುವ ನಟರಿಗೆ ಸಿನಿಮಾ ಮಾಡಲು ಸಮಯವಿಲ್ಲ'

  ಅರ್ಮಾನ್ ಮಲ್ಲಿಕ್ ತಂದೆಗೆ ಬಂಗಲೆ ಮಾರಾಟ

  ಅಕ್ಷಯ್ ಕುಮಾರ್ ಮುಂಬೈನ ಅಂದೇರಿಯಲ್ಲಿರುವ ಐಶಾರಾಮಿ ಬಂಗಲೆಯನ್ನು ಗಾಯಕ ಅರ್ಮಾನ್ ಮಲ್ಲಿಕ್ ತಂದೆಗೆ ಮಾರಿದ್ದಾರೆ. ಅಂದ್ಹಾಗೆ ಈ ಅಕ್ಷಯ್ ಕುಮಾರ್ ಈ ಬಂಗಲೆಯನ್ನು ಸುಮಾರು 6 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

  ಬಾಲಿವುಡ್‌ನ ಫೇಮಸ್ ಸಂಗೀತಗಾರರಾಗಿರೋ ಅರ್ಮಾನ್ ಮಲಿಕ್ ಹಾಗೂ ಅಮಾಲ್ ಮಲಿಕ್ ತಂದೆ ಡಬೂ ಮಲಿಕ್. ಇವರೂ ಕೂಡ ಬಾಲಿವುಡ್ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಡಬೂ ಮಲಿಕ್ ಐಶಾರಾಮಿ ಬಂಗಲೆಯನ್ನು ಖರೀದಿ ಮಾಡಿದ್ದಾರೆ.

  ಅಕ್ಷಯ್ ಕುಮಾರ್ ಖರೀದಿ ಮಾಡಿದ್ದು ಎಷ್ಟಕ್ಕೆ?

  ಅಕ್ಷಯ್ ಕುಮಾರ್ ಮಾರಾಟ ಮಾಡಿರುವ ಐಶಾರಾಮಿ ಬಂಗಲೆಯನ್ನು ಕೆಲವು ವರ್ಷಗಳ ಹಿಂದೆ 4.12 ಕೋಟಿ ರೂ.ಗೆ ಖರೀದಿಸಿದ್ದರು. ಅದನ್ನು ಹೆಚ್ಚು-ಕಡಿಮೆ ಎರಡು ಕೋಟಿ ಲಾಭದಲ್ಲಿ ಮಾರಾಟ ಮಾಡಿದ್ದಾರೆ ಎಂದು ವರದಿ ಮಾಡಲಾಗಿದೆ.

  ಅಂದ್ಹಾಗೆ ಮುಂಬೈನ ಅಂದೇರಿಯ ಟ್ರಾನ್ಸ್‌ಕಾನ್ ಟ್ರ್ಯಾಂಪ್ ಟವರ್ 1ನಲ್ಲಿದೆ. ಎ2104 ಬಂಗಲೆಯ ವಿಸ್ತೀರ್ಣ ಸುಮಾರು 1281 ಚದರ ಅಡಿ ಹೊಂದಿದೆ. ಇದರಲ್ಲಿ 59 ಚದರ ಅಡಿ ಬಾಲ್ಕನಿ ಇದೆ. ಆಗಸ್ಟ್ 12, 2022 ರಂದು ಇಬ್ಬರೂ ಈ ಡೀಲ್ ಅನ್ನು ಓಕೆ ಮಾಡಿದ್ದಾರೆ ಎನ್ನಲಾಗಿದೆ.

  Bollywood Actor Akshay Kumar Sold Andheri Property To Armaan Malik Father Daboo Malik

  ಮುಂಬೈನಲ್ಲಿ ಹಲವೆಡೆ ಬಂಗಲೆ ಇದೆ

  ಅಕ್ಷಯ್ ಕುಮಾರ್ ಸಾಕಷ್ಟು ಮುಂಬೈನಲ್ಲಿಯೇ ಹಲವು ಬಂಗಲೆಗಳಿವೆ. ಬೋರಿವಲಿ, ಮುಲುಂಡ್ ಹಾಗೂ ಜೂಹುವಿನಲ್ಲಿ ಐಶಾರಾಮಿ ಬಂಗಲೆ ಹೊಂದಿದ್ದಾರೆ. ಇನ್ನು ಅಕ್ಷಯ್ ಕುಮಾರ್ ಕೈಯಲ್ಲಿ ಹಲವು ಪ್ರಾಜೆಕ್ಟ್‌ಗಳಿವೆ. ಕೆಲವು ದಿನಗಳ ಹಿಂದಷ್ಟೇ ಓಟಿಟಿಯಲ್ಲಿ 'ಕಟ್‌ಪುತ್ಲಿ' ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ.

  ಅಕ್ಷಯ್ ಕುಮಾರ್ 'ರಾಮ್ ಸೇತು' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇಮ್ರಾನ್ ಹಾಶ್ಮಿ ಜೊತೆ 'ಸೆಲ್ಫಿ', ಟೈಗರ್ ಶ್ರಾಫ್ ಜೊತೆ 'ಬಡೇ ಮಿಯ್ಯಾ ಚೋಟೆ ಮಿಯ್ಯಾ' ಹಾಗೇ 'ಗೂರ್ಕಾ' ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ 'ಸೂರರೈ ಪೋಟ್ರು' ಬಾಲಿವುಡ್ ರಿಮೇಕ್‌ನಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Bollywood Actor Akshay Kumar Sold Andheri Property To Armaan Malik Father Daboo Malik, Know More.
  Saturday, September 24, 2022, 9:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X