ವೈರಲ್ ವಿಡಿಯೋ: ಕುರಿ-ಕೋಳಿಗಳಿಗೆ ಮೇವು ತಿನ್ನಿಸುತ್ತಿರುವ ಅಕ್ಷಯ್ ಕುಮಾರ್
ಬಾಲಿವುಡ್ ಕಿಲಾಡಿ ಎಂದೇ ಪ್ರಸಿದ್ಧಿಯಾಗಿರುವ ನಟ ಅಕ್ಷಯ್ ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಷಯ್ ಕುಮಾರ್ ನಟಿಸುವ ಪ್ರತೀ ಸಿನಿಮಾವು ಗಲ್ಲಾ ಪೆಟ್ಟಿಗೆಯಲ್ಲೂ ಉತ್ತಮ ಕಲೆಕ್ಷನ್ ಮಾಡೋದ್ರಲ್ಲಿ ಡೌಟೇ ಇಲ್ಲ. ಅಕ್ಷಯ್ ಕುಮಾರ್ ಅವರ ಪ್ರತೀ ಸಿನಿಮಾದಲ್ಲೂ ನಿರ್ಮಾಪಕರು ಲಾಭ ತಮ್ಮದಾಗಿಸಿಕೊಳ್ಳುತ್ತರೆ. ಹೀಗಾಗಿ ಅಕ್ಷಯ್ ಕುಮಾರ್ ಅವರ ಕಾಲ್‌ಶೀಟ್‌ಗಾಗಿ ಹಲವು ನಿರ್ಮಾಪಕರು ಕಾದು ನಿಲ್ಲುತ್ತಾರೆ. ಹೀಗೆ ಬಾಲಿವುಡ್ ಸಿನಿಮಾಗಳಲ್ಲಿ ಸಖತ್ ಬ್ಯುಸಿಯೆಸ್ಟ್ ನಟನಾಗಿ ಗುರುತಿಸಿಕೊಂಡಿರುವ ಅಕ್ಷಯ್ ಕುಮಾರ್ ಬಿಡುವಿನ ಸಂದರ್ಭದಲ್ಲಿ ಏನು ಮಾಡುತ್ತಾರೆ ಅನ್ನೋದು ಅಭಿಮಾನಿಗಳಿಗೆ ತಿಳಿದುಕೊಳ್ಳುವ ಕುತೂಹಲ.
ಇದೀಗ ಸ್ವತಃ ಅಕ್ಷಯ್ ಕುಮಾರ್ ಅವರೇ ತಾನು ಶೂಟಿಂಗ್ ಬಿಡುವಿನಲ್ಲಿ ಏನು ಮಾಡುತ್ತೀನಿ ಎಂಬ ಬಗ್ಗೆ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಯಾಕೆಂದರೇ ಅಕ್ಷಯ್ ಕುಮಾರ್ ಸದ್ಯ ಶೂಟಿಂಗ್‌ನಿಂದ ಕೊಂಚ ಬಿಡುವು ಪಡೆದುಕೊಂಡು ಪರಿಸರ ಮತ್ತು ಕುರಿ ಕೋಳಿಗಳಿಗೆ ಮೇವು ಹಾಕುವು ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೋ ಶೇರ್ ಮಾಡಿರುವ ಅಕ್ಕಿ ಪರಿಸರಕ್ಕೆ ಧನ್ಯವಾದ ಕೂಡ ತಿಳಿಸಿದ್ದಾರೆ.
ತಮ್ಮ ಪೋಸ್ಟ್‌ಗೆ "ಸರ್ವಶಕ್ತನಿಂದ ನಾವು ಇನ್ನೇನು ಕೇಳಬಹುದು?! ನಾವು ಪ್ರಕೃತಿಯ ನಡುವೆ ಜೀವಂತವಾಗಿರುವ ಪ್ರತಿಯೊಂದು ದಿನಕ್ಕಾಗಿ ದೇವರಿಗೆ ಧನ್ಯವಾದಗಳು" ಎಂದಿದ್ದಾರೆ ಅಕ್ಷಯ್ ಕುಮಾರ್. ಹೌದು ಮುಂಬೈನಲ್ಲಿರುವ ತಮ್ಮ ಫಾರ್ಮ್ ಹೌಸ್‌ನಲ್ಲಿ ಸಮಯ ಕಳೆಯುತ್ತಿರುವ ಅಕ್ಷಯ್ ಕುಮಾರ್ ಅಲ್ಲಿ ಸಾಕಲಾಗಿರುವ ಕುರಿ ಕೋಳಿಗಳಿಗೆ ಮೇವುಗಳನ್ನು ಹಾಕಿ ಸಂತಸ ಪಡುತ್ತಿದ್ದಾರೆ. ಪ್ರಾಣಿ ಪಕ್ಷಿಗಳನ್ನು ಹೆಚ್ಚಾಗಿ ಇಷ್ಪಡುವ ಅಕ್ಷಯ್‌ಕುಮಾರ್ ತಮ್ಮ ಫಾರ್ಮ್ ಹೌಸ್‌ನಲ್ಲಿ ಸಾಕಷ್ಟು ಕೆಲಸಗಳನ್ನು ಮಾಡುತ್ತಾರೆ. ಈ ಬಗ್ಗೆ ಹಿಂದೆ ಖಾಸಗೀ ವಾಹಿನಿಯ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದರು ಅಕ್ಷಯ್ ಕುಮಾರ್. ಇದೀಗ ಸ್ವತಃ ತಾವೇ ಈ ಬಗ್ಗೆ ವಿಡಿಯೋ ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳು ಇದನ್ನು ಶೇರ್ ಮಾಡುತ್ತಿದ್ದಾರೆ ಹಾಗೇ ಸಾಕಷ್ಟು ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಇನ್ನು ಈ ವೀಡಿಯೋವನ್ನು ಅಕ್ಷಯ್ ಕುಮಾರ್ ಅಪ್‌ಲೋಡ್ ಮಾಡಿ ಕೇವಲ ಒಂದು ಗಂಟೆಯಲ್ಲಿ 641 ಕಮೆಂಟ್, 1300 ರೀ ಟ್ವೀಟ್ ಮತ್ತು 11200 ಮಂದಿ ಲೈಕ್ಸ್ ಮಾಡಿದ್ದಾರೆ.

ಇನ್ನು ನಟ ಅಕ್ಷಯ್ ಕುಮಾರ್ ಮತ್ತು ನಟಿ ಟ್ವಿಂಕಲ್ ಖನ್ನಾ ತಮ್ಮ 21ನೇ ವಿವಾಹ ವಾರ್ಷಿಕೋತ್ಸವವನ್ನು ಜನವರಿ 17ರಂದು ಆಚರಿಸಿಕೊಂಡರು. ಈ ವಿಶೇಷ ಸಂದರ್ಭದಲ್ಲಿ, ಅಕ್ಷಯ್ ತನ್ನ ಪತ್ನಿಗೆ ಶುಭ ಹಾರೈಸಿ ಸಾಮಾಜಿಕ ಮಾಧ್ಯಮದಲ್ಲಿ ಹೀಗೆಂಸು ಫೋಸ್ಟ್ ಮಾಡಿದ್ದಾರೆ. 'ಪ್ರತಿ ದಿನ ಮೊದಲನೆಯದು ಎಂಬ ಭಾವನೆ ಮೂಡಿಸಿದ್ದಕ್ಕಾಗಿ ಧನ್ಯವಾದ, ಹ್ಯಾಪಿ ಆನಿವರ್ಸರಿ ಟೀನಾ' ಎಂದು ಬರೆದುಕೊಂಡಿದ್ದರು. ಇನ್ನು ಖನ್ನಾ ಕೂಡ ಇನ್ಸ್ಟಾಗ್ರಾಂನಲ್ಲಿ ಪತಿ ಅಕ್ಷಯ್ ಕುಮಾರ್ ಅವರಿಗೆ ಶುಭ ಹಾರೈಸಿದರು. ತಮ್ಮ 21 ನೇ ವಿವಾಹ ವಾರ್ಷಿಕೋತ್ಸವದ ಸಂತೋಷದ ಕ್ಷಣದ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

ಇನ್ನು ಅಕ್ಷಯ್ ಕುಮಾರ್ ಅವರ ಸಿನಿಮಾ ವಿಚಾರಕ್ಕೆ ಬರೋದಾದರೇ, ಅಕ್ಷಯ್ ಕುಮಾರ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಷಯ್ ಕುಮಾರ್ ಅನಗತ್ಯವಾಗಿ ಚಿತ್ರೀಕರಣ ವಿಳಂಬ ಆಗುವುದನ್ನು ಅವರು ಸಹಿಸುವುದಿಲ್ಲ. ಹಾಗಾಗಿ ಅವರ ಸಿನಿಮಾಗೆ ಬಂಡವಾಳ ಹೂಡಲು ಎಲ್ಲ ನಿರ್ಮಾಪಕರು ಮುಂದೆ ಬರುತ್ತಾರೆ. ಕಳೆದ ವರ್ಷ ಲಾಕ್ಡೌನ್ ಬಳಿಕ ಕಷ್ಟದ ಸಂದರ್ಭದಲ್ಲೂ ಅಕ್ಷಯ್ ಕುಮಾರ್ ಅವರ ಬೆಲ್ಬಾಟಂ ಚಿತ್ರ ಬಿಡುಗಡೆಯಾಗಿತ್ತು. ತದನಂತರದಲ್ಲಿ ಸೂರ್ಯವಂಶಿ ಸಿನಿಮಾ ಕೂಡ ನವೆಂಬರ್ 5ರಂದು ತೆರೆಕಂಡು ಉತ್ತಮ ಪ್ರದರ್ಶನ ಕಂಡಿತ್ತು. ಜೊತೆಗೆ ಓಟಿಟಿಯಲ್ಲೂ ಕಮಾಲ್ ಮಾಡುತ್ತಿದೆ. ಇನ್ನುಳಿದಂತೆ ಈಗ ಅವರ ಕೈಯಲ್ಲಿ ಗೋರ್ಕಾ, ರಾಮ್ ಸೇತು, ರಕ್ಷಾ ಬಂಧನ್ ಮುಂತಾದ ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದು, ಅಭಿಮಾನಿಗಳು ಈ ಸಿನಿಮಾಗಳ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.


Click it and Unblock the Notifications










