ಖಿಲಾಡಿ ಅಕ್ಷಯ್ ಕುಮಾರ್ 'ಬಚ್ಚನ್ ಪಾಂಡೆ' ಲುಕ್ ಗೆ ಅಭಿಮಾನಿಗಳು ಫಿದಾ
ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮಿಷನ್ ಮಂಗಲ್ ಚಿತ್ರದ ರಿಲೀಸ್ ಗೆ ಎದುರು ನೋಡುತ್ತಿರುವ ಅಕ್ಷಯ್ ಈಗ ಮತ್ತೊಂದು ಹೊಸ ಸಿನಿಮಾದ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದಾರೆ.
ಅಕ್ಷಯ್ ಕುಮಾರ್ ಈಗ ಬಚ್ಚನ್ ಪಾಂಡೆಯಾಗಿ ಎಂಟ್ರಿ ಕೊಟ್ಟಿದ್ದಾರೆ. 'ಬಚ್ಚನ್ ಪಾಂಡೆ', ಅಕ್ಷಯ್ ಅಭಿನಯದ ಮುಂದಿನ ಸಿನಿಮಾದ ಹೆಸರು. ಸದ್ಯ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಕಪ್ಪು ಬಣ್ಣದ ಲುಂಗಿ ಧರಿಸಿ ಹಣೆಗೆ ವಿಭೂತಿ ಇಟ್ಟು, ಕೊರಳು ತುಂಬ ಬಂಗಾರದ ಸರಗಳನ್ನು ಹಾಕಿಕೊಂಡಿರುವ ಅಕ್ಷಯ್ ಕುಮಾರ್ ರಗಡ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಚಿತ್ರದಲ್ಲಿ ಅಕ್ಷಯ್ ಟೈಟಲ್ ರೋಲ್ ಅಂದ್ರೆ ಬಚ್ಚನ್ ಪಾಂಡೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಬಗ್ಗೆ ಹೆಚ್ಚೇನು ಬಿಟ್ಟುಕೊಡದ ಚಿತ್ರತಂಡ ಸದ್ಯ ಫಸ್ಟ್ ಲುಕ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಈ ಬಗ್ಗೆ ಅಕ್ಷಯ್ ಟ್ವೀಟ್ ಮಾಡಿದ್ದಾರೆ.

2020 ಕ್ರಿಸ್ ಮಸ್ ಗೆ ಬಚ್ಚನ್ ಪಾಂಡೆ
ಚಿತ್ರದ ಫಸ್ಟ್ ಲುಕ್ ನ್ನು ಶೇರ್ ಮಾಡುವ ಜೊತೆಗೆ ಅಕ್ಷಯ್ ಮುಂದಿನ ವರ್ಷ 2020 ಕ್ರಿಸ್ ಮಸ್ ಗೆ ಸಿನಿಮಾ ತೆರೆಗೆ ಬರುವುದಾಗಿ ಬಹಿರಂಗ ಪಡಿಸಿದ್ದಾರೆ. ಅಂದ್ಹಾಗೆ ಚಿತ್ರಕ್ಕೆ ಫರ್ಹಾದ್ ಸಂಜಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೌಸ್ ಫುಲ್-4 ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಈ ಜೋಡಿ ಮತ್ತೆ ಎರಡನೆ ಬಾರಿ ಒಂದಾಗಿದೆ. ಅಂದ್ಹಾಗೆ ಅಕ್ಷಯ್ ಗೆ ಜೋಡಿಯಾಗಿ ಕೃತಿ ಸನೂನ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

2020ಕ್ಕೆ ಆಮೀರ್-ಅಕ್ಷಯ್ ಬಿಗ್ ಫೈಟ್
ಸದ್ಯ ಅಕ್ಷಯ್ ಅಭಿನಯದ 'ಕುಮಾರ್ ಬಚ್ಚನ್ ಪಾಂಡೆ ಸಿನಿಮಾ 2020 ಕ್ರಿಸ್ ಮಸ್ ಗೆ ರಿಲೀಸ್ ಆಗಲಿದೆ ಎಂದು ಹೇಳಿಕೊಂಡಿದ್ದಾರೆ. ಆದ್ರೆ ಈಗಾಗಲೆ ಮುಂದಿನ ವರ್ಷ ಕ್ರಿಸ್ ಮಸ್ ಗೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ರಿಲೀಸ್ ಆಗಲಿದೆ. ಈ ಮೊದಲೆ ಚಿತ್ರತಂಡ 'ಲಾಲ್ ಸಿಂಗ್ ಚಡ್ಡಾ' ಚಿತ್ರವನ್ನು ಮುಂದಿನ ವರ್ಷ ಕ್ರಿಸ್ ಮಸ್ ಗೆ ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಿದೆ. ಹಾಗಾಗಿ ಮುಂದಿನ ವರ್ಷ ಕ್ರಿಸ್ ಮಸ್ ಗೆ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ವಾರ್ ಆಗಲಿದೆ ಎನ್ನುವುದು ಬಾಲಿವುಡ್ ಸಿನಿಮಾ ಪಂಡಿತರ ಅಭಿಪ್ರಾಯ.

ಎರಡು ವರ್ಷದ ನಂತರ ಆಮೀರ್ ಸಿನಿಮಾ ರಿಲೀಸ್
ಆಮೀರ್ ಖಾನ್ ಎರಡು ವರ್ಷ ನಂತರ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. 'ಥಗ್ಸ್ ಆಫ್ ಹಿಂದೂಸ್ಥಾನ್' ಸಿನಿಮಾ ನಂತರ ಆಮೀರ್ ಒಪ್ಪಿಕೊಂಡಿರುವ ಸಿನಿಮಾ 'ಲಾಲ್ ಸಿಂಗ್ ಚಡ್ಡಾ'. ಎರಡು ವರ್ಷದ ನಂತರ ತೆರೆಗೆ ಬರುತ್ತಿರುವ ಆಮೀರ್ ಗೆ ಅಕ್ಷಯ್ ಕುಮಾರ್ ಬಿಗ್ ಫೈಟ್ ನೀಡಲಿದ್ದಾರೆ. ಚಿತ್ರಕ್ಕಾಗಿ ಆಮೀರ್ ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದು ಪಾತ್ರಕ್ಕಾಗಿ ಸಖತ್ ವರ್ಕೌಟ್ ಮಾಡುತ್ತಿದ್ದಾರೆ.

ಅಕ್ಷಯ್ ಬಳಿ ಇವೆ ಸಾಲು ಸಾಲು ಸಿನಿಮಾ
ಅಕ್ಷಯ್ ಕುಮಾರ್ ಬಳಿ ಸಾಲು ಸಾಲು ಸಿನಿಮಾಗಳಿವೆ. ಈ ವರ್ಷ ಕೇಸರಿ ಸಿನಿಮಾ ರಿಲೀಸ್ ಮಾಡಿ ಸದ್ಯ ಮಿಷನ್ ಮಂಗಲ್ ಚಿತ್ರದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಅಲ್ಲದೆ 'ಹೌಸ್ ಫುಲ್-4', 'ಸೂರ್ಯವಂಶಿ', ಲ'ಕ್ಷ್ಮಿ ಬಾಂಬ್' ಮತ್ತು ಸದ್ಯ ಪೋಸ್ಟರ್ ರಿಲೀಸ್ ಮಾಡಿರುವ 'ಬಚ್ಚನ್ ಪಾಂಡೆ' ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್ ಅಭಿನಯಿಸುತ್ತಿದ್ದಾರೆ. ವಿಶೇಷ ಅಂದ್ರೆ ಈ ಒಂದೆ ವರ್ಷ ಅಕ್ಷಯ್ ಕುಮಾರ್ ಅಭಿನಯದ ನಾಲ್ಕು ಸಿನಿಮಾಗಳು ತೆರೆಗೆ ಬರಲಿದೆ. ಮುಂದಿನ ವರ್ಷ ಮೂರು ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ.


Click it and Unblock the Notifications











