ನೂರು ಕೋಟಿ ಕ್ಲಬ್ ಸೇರಿದ "ಮಿಷನ್ ಮಂಗಲ್"

Recommended Video

Mission Mangal Movie:ಅಕ್ಷಯ್ ಕುಮಾರ್ ಜತೆ ತೆರೆ ಹಂಚಿಕೊಂಡ ದತ್ತಣ್ಣ | FILMIBEAT KANNADA

ಬಾಲಿವುಡ್ ಖಿಲಾಡಿ ಅಕ್ಷಯ್ ಅಭಿನಯದ ಮಿಷನ್ ಮಂಗಲ್ ಚಿತ್ರದ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡುತ್ತಿದೆ. ಕೋಟಿ ಕೋಟಿ ಬಾಚಿಕೊಳ್ಳುತ್ತಿರುವ ಮಿಷನ್ ಮಂಗಲ್ ಈಗ ನೂರು ಕೋಟಿ ಕ್ಲಬ್ ಸೇರಿದೆ.

ಚಿತ್ರ ರಿಲೀಸ್ ಆಗಿ ಐದು ದಿನದಲ್ಲೆ ನೂರು ಕೋಟಿಗೂ ಅಧಿಕ ಗಳಿಸುವ ಮೂಲಕ ಅಕ್ಷನ್ ಅಭಿನಯದ ಮತ್ತೊಂದು ಸಿನಿಮ ದಾಖಲೆ ನಿರ್ಮಿಸಿದೆ. ಮಿಷನ್ ಮಂಗಲ್ ರಿಲೀಸ್ ಆಗಿ ಆರು ದಿನಗಳಾಗಿವೆ. ಇದುವರೆಗೂ 112.50 ಕೋಟಿ ಕಲೆಕ್ಷನ್ ಮಾಡಿದೆಯಂತೆ. ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ದಿನ ದೇಶ ವಿದೇಶದಲ್ಲಿ ರಿಲೀಸ್ ಆಗಿತ್ತು ಮಿಷನ್ ಮಂಗಲ್.

ಸುಮಾರು ಮೂರು ಸಾವಿರಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬಂದ ಮಿಷನ್ ಮಂಗಲ್ ರಿಲೀಸ್ ಆದ ದಿನದಿಂದನೆ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಈ ಬಗ್ಗೆ ನಟಿ ಸೋನಾಕ್ಷಿ ಸಿನ್ಹ ಟ್ವೀಟ್ ಮಾಡಿದ್ದಾರೆ.

Bollywood Actor Akshay Kumar Starrer Mission Mangal Entered 100 Crore Club

"ಮಿಷನ್ ಮಂಗಲ್ ಸಿನಿಮಾ ನೂರು ಕೋಟಿ ಗಳಿಸಿದೆ. ಚಂದ್ರಯಾನ-2 ನೌಕೆ ಚಂದ್ರನ ಕಕ್ಷೆ ಸೇರಿದೆ" ಹೇಳಿದ್ದಾರೆ. ಭಾರತದ ಹೆಮ್ಮೆಯ ಚಂದ್ರಯಾನ-2 ನೌಕೆ ನಿನ್ನೆಯಷ್ಚೆ ಚಂದ್ರನ ಕಕ್ಷೆ ಸೇರಿದೆ. ಮಿಷನ್ ಮಂಗಲ್ ಚಿತ್ರಕ್ಕೆ ಜಗನ್ ಶಕ್ತಿ ಆಕ್ಷನ್ ಕಟ್ ಹೇಳಿದ್ದಾರೆ.

ಚಿತ್ರದಲ್ಲಿ ಅಕ್ಷಯ್ ಕುಮಾರ್ ನಾಯಕನಾಗಿ ಕಾಣಿಸಿಕೊಂಡರೆ, ವಿದ್ಯಾ ಬಲನ್, ತಾಪ್ಸ್ ಪನ್ನು, ಸೋನಾಕ್ಷಿ ಸಿನ್ಹಾ, ಕೃತಿ ಕೊಲ್ಹಾರಿ ಮತ್ತು ನಿತ್ಯಾ ಮೆನನ್ ಸೇರಿದಂತೆ ಸಾಕಷ್ಟು ನಟಿಮಣಿಯರು ಬಣ್ಣಹಚ್ಚಿದ್ದಾರೆ. ವಿಶೇಷ ಅಂದ್ರೆ ಕನ್ನಡದ ಹಿರಿಯ ನಟ ದತ್ತಣ್ಣ ಕೂಡ ಪ್ರಮುಕ ಪಾತ್ರದಲ್ಲಿ ಮಿಂಚಿದ್ದಾರೆ.

More from Filmibeat

English summary
Bollywood actor Akshay Kumar starrer Mission Mangal entered 100 crore club. The film has managed to collect a 112.50 crore in six days at the box office.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X