ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಪಟ್ಟಿಯಲ್ಲಿ ಜಾಕಿಚಾನ್ ಹಿಂದಿಕ್ಕಿದ ಅಕ್ಷಯ್ ಕುಮಾರ್

Recommended Video

ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಆಕ್ಷಯ್ ಕುಮಾರ್ | Akshay Kumar

ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಭಾರತದ ಏಕೈಕ ನಟ ಬಾಲಿವುಡ್ ಖಿಲಾಡಿ ಆಕ್ಷಯ್ ಕುಮಾರ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಕ್ಷಯ್ ವಿಶ್ವದ ಹೆಚ್ಚು ಸಂಭಾವನೆ ಪಡೆಯುವ ಪಟ್ಟಿಯಲ್ಲಿ ನಾಲ್ಕನೆ ಸ್ಥಾನದಲ್ಲಿದ್ದಾರೆ. ವಿಶೇಷ ಅಂದ್ರೆ ಖ್ಯಾತ ನಟ ಜಾಕಿಚಾನ್ ಅವರನ್ನು ಹಿಂದಿಕ್ಕಿ ಅಕ್ಷನ್ ಮುನ್ನುಗ್ಗಿದ್ದಾರೆ.

ಅಮೆರಿಕದ ನಿಯತಕಾಲಿಕೆ ಫೋರ್ಬ್ಸ್ 2019ರ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಫೋರ್ಬ್ಸ್ ಪಟ್ಟಿಯ ಪ್ರಕಾರ ಟಾಪ್ ಹತ್ತರ ಪಟ್ಟಿಯಲ್ಲಿ ಜಾಗ ಪಡೆದ ಭಾರತದ ಏಕೈಕ ನಟ ಅಕ್ಷಯ್ ಕುಮಾರ್.

ಅಕ್ಷಯ್ ಕುಮಾರ್ ವಾರ್ಷಿಕ ಸಂಭಾವನೆ ಒಟ್ಟು 466 ಕೋಟಿ. ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ಅಕ್ಷಯ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ವರ್ಷಕ್ಕೆ ಏನಿಲ್ಲ ಅಂದರು ನಾಲ್ಕರಿಂದ ಐದು ಸಿನಿಮಾಗಳನ್ನು ಮಾಡುತ್ತಾರೆ.

Bollywood Actor Akshay Kumar World 4th Highest Paid Actor On Forbes List

ಅಂದ್ಹಾಗೆ ಫೋರ್ಬ್ಸ್ ಪಟ್ಟಿಯ ಪ್ರಕಾರ ಮೊದಲ ಸ್ಥಾನದಲ್ಲಿ ಹಾಲಿವುಡ್ ನಟ ದಿ ರಾಕ್ ಖ್ಯಾತಿಯ ಡ್ವೇನ್ ಜಾನ್ಸನ್ ಇದ್ದಾರೆ. ಜಾನ್ಸನ್ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ. ಬರೋಬ್ಬರಿ 640 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.

ಇನ್ನು ಎರಡನೆ ಸ್ಥಾನ ಆಸ್ಟ್ರೇಲಿಯದ ನಟ ಕ್ರಿಸ್ ಹೆಮ್ಸ್ ವರ್ತ್ ಪಾಲಾಗಿದೆ. 547 ಕೋಟಿ ಸಂಭಾವನೆ ಪಡೆಯುವ ಮೂಲಕ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು 473 ಕೋಟಿ ಸಂಭಾವನೆ ಪಡೆಯುವ ಮೂಲಕ ರಾಬರ್ಟ್ ಡೌನಿ ಜೂನಿಯರ್ ಮೂರನೆ ಸ್ಥಾನದಲ್ಲಿದ್ದಾರೆ.

ನಾಲ್ಕನೆ ಸ್ಥಾನದಲ್ಲಿ ಅಕ್ಷಯ್ ಕುಮಾರ್ ಇದ್ರೆ, 415 ಕೋಟಿ ಸಂಭಾವನೆ ಪಡೆಯುವ ಮೂಲಕ ನಟ ಜಾಕಿ ಚಾನ್ ಐದನೆ ಸ್ಥಾನದಲ್ಲಿದ್ದಾರೆ. ಟಾಪ್ ಫೈವ್ ಸ್ಥಾನದಲ್ಲಿರುವ ವಿಶ್ವದ ಸ್ಟಾರ್ ನಟರಿವರು. ಅಕ್ಷಯ್ ಕುಮಾರ್ ಅಭಿನಯದ ಮಿಷನ್ ಮಂಗಲ್ ಇತ್ತೀಚಿಗಷ್ಟೆ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡುವ ಮೂಲಕ ನೂರು ಕೋಟಿ ಕ್ಲಬ್ ದಾಟಿ ಮುನ್ನುಗ್ಗುತ್ತಿದೆ.

2019ರ ಹೆಚ್ಚು ಸಂಭಾವನೆ ಪಡೆಯುವ ಟಾಪ್ ಟೆನ್ ನಟರ ಲಿಸ್ಟ್ ಹೀಗಿದೆ

ದಿ ರಾಕ್ ಡ್ವೇನ್ ಜಾನ್ಸನ್ - 640 ಕೋಟಿ

ಕ್ರಿಸ್ ಹೆಮ್ಸ್ ವರ್ತ್ - 547 ಕೋಟಿ
ರಾಬರ್ಟ್ ಡೌನಿ ಜೂನಿಯರ್ - 473 ಕೋಟಿ

ಅಕ್ಷಯ್ ಕುಮಾರ್ - 466 ಕೋಟಿ

ಜಾಕಿ ಚಾನ್ - 415 ಕೋಟಿ

ಬ್ರಾಡ್ಲಿ ಕೂಪರ್ - 408 ಕೋಟಿ

ಆಡಮ್ ಸ್ಯಾಂಡ್ಲರ್ - 408 ಕೋಟಿ

ಕ್ರಿಸ್ ಇವಾನ್ಸ್ - 311 ಕೋಟಿ

ಪಾಲ್ ರುಡ್ - 293 ಕೋಟಿ

ವಿಲ್ ಸ್ಮಿತ್ - 250 ಕೋಟಿ

More from Filmibeat

English summary
Bollywood actor Akshay Kumar world 4th highest paid actor on Forbes list. The list was topped by Hollywood actor Dwayne Johnson
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X