»   » 75ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್

75ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್

Posted By:
Subscribe to Filmibeat Kannada

ಬಾಲಿವುಡ್ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಇಂದು ತಮ್ಮ 75ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬರ್ತ್ ಡೇ ಸಂಭ್ರಮದಲ್ಲಿರುವ ಅವರಿಗೆ ಈಗಾಗಲೇ ಸಾವಿರಾರು ಶುಭಾಶಯಗಳು ಹರಿದು ಬಂದಿದೆ. ಟ್ವಿಟ್ಟರ್ ನಲ್ಲಿ #Happy75thBirthdayABSir ಎಂಬ ಹ್ಯಾಶ್ ಟ್ಯಾಗ್ ಬಳಸಿ ಎಲ್ಲರೂ ವಿಶ್ ಮಾಡುತ್ತಿದ್ದಾರೆ.

ಬಚ್ಚನ್ ಅವರ ಈ ವರ್ಷದ ಹುಟ್ಟುಹಬ್ಬದ ಆಚರಣೆ ಅದ್ದೂರಿಯಾಗಿ ನಡೆಯುತ್ತಿಲ್ಲ. ಕಾರಣ ಈ ಹಿಂದೆಯೇ ಅಮಿತಾಭ್ ತಮ್ಮ ಹುಟ್ಟುಹಬ್ಬದ ಆಚರಣೆ ಮಾಡುವುದು ಬೇಡ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ತಮ್ಮ ಟ್ವಿಟ್ಟರ್ ಖಾತೆ ಮೂಲಕ ಬಚ್ಚನ್ ಅಭಿಮಾನಿಗಳಿಗೆ ''ನನ್ನ 75ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುವುದು ಸುದ್ದಿ ಸುಳ್ಳು. ಯಾರಾದರೂ ನನ್ನ ಹುಟ್ಟುಹಬ್ಬದ ಆಚರಣೆಯ ತಯಾರಿಯಲ್ಲಿ ಇದ್ದರೆ, ಅದನ್ನು ಕೈ ಬಿಡಿ'' ಎಂದು ಹಿಂದೆಯೇ ಹೇಳಿದ್ದಾರೆ.

Bollywood Actor Amitabh Bachchan turns 75

ಆದರೆ ನಿನ್ನೆ ಮಧ್ಯರಾತ್ರಿ ತಮ್ಮ ಕುಟುಂಬದ ಜೊತೆ ಬಚ್ಚನ್ ಸಿಂಪಲ್ ಆಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಜಯಾ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಸೇರಿದಂತೆ ಕುಟುಂಬದರು ಸರಳವಾಗಿ ಅಮಿತಾಭ್ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

Bollywood Actor Amitabh Bachchan turns 75

ಅಂದಹಾಗೆ, ಬಚ್ಚನ್ ಸದ್ಯ 'ಪದ್ಮನ್', 'ಥಗ್ಸ್ ಆಫ್ ಹಿಂದೂಸ್ತಾನ್' ಮತ್ತು '102 ನಾಟ್ ಔಟ್' ಎಂಬ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಹುಟ್ಟುಹಬ್ಬದ ಖುಷಿಯಲ್ಲಿರುವ ಬಿಗ್ ಬಿ ಅವರಿಗೆ ನಮ್ಮ ಕಡೆಯಿಂದ ಕೂಡ ಒಂದು ಶುಭಾಶಯ.

English summary
Bollywood Actor Big B Amitabh Bachchan celebrating his 75th birthday today (11th october).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada