For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟ ಅನಿಲ್ ಕಪೂರ್‌ರನ್ನೇ ಹೋಲುವ ವ್ಯಕ್ತಿಯ ಪೋಟೊ ವೈರಲ್!

  |

  ಬಾಲಿವುಡ್‌ನ ಎವರ್‌ಗ್ರೀನ್ ಹ್ಯಾಂಡ್ಸಮ್ ನಟ ಅನಿಲ್ ಕಪೂರ್. ವಯಸ್ಸಾಗಿದ್ದರೂ, ಇನ್ನೂ ಯಂಗ್ ಅಂಡ್ ಎನೆರ್ಜೆಟಿಕ್ ಆಗಿ ಕಾಣಿಸಿಕೊಳ್ಳುವ ಬಾಲಿವುಡ್‌ನ ಏಕೈಕ ನಟ. ಇಂತಹ ನಟನ ತದ್ರೂಪಿಯೊಬ್ಬನ ಫೋಟೊ ಈಗ ವೈರಲ್ ಆಗಿದೆ.

  ಸಾಕಷ್ಟು ಸಿನಿಮಾ ತಾರೆಯರು, ಕ್ರಿಕೆಟ್ ಆಟಗಾರರನ್ನೇ ಹೋಲುವ ಮತ್ತೊಬ್ಬ ವ್ಯಕ್ತಿ ವಿಶ್ವದ ಯಾವುದೋ ಮೂಲೆಯಲ್ಲಿ ಕಂಡಿದ್ದು ಇದೆ. ಆ ಫೋಟೊಗಳು ರಾತ್ರೋ ರಾತ್ರಿ ವೈರಲ್ ಆಗಿದ್ದೂ ಇದೆ. ಅದರಂತೆಯೇ ಈಗ ಬಾಲಿವುಡ್‌ ದಿಗ್ಗಜ ಅನಿಲ್ ಕಪೂರ್ ಅನ್ನೇ ಹೋಲುವ ಮತ್ತೊಬ್ಬ ವ್ಯಕ್ತಿಯ ದರ್ಶನವಾಗಿದೆ.

  ಸೈಮಾ 2022: ಪ್ರಶಸ್ತಿ ಪಡೆಯಲು ಬಂದ ಬಾಲಿವುಡ್‌ನ ರಣ್ವೀರ್ ಸಿಂಗ್‌ ಕೆನ್ನೆಗೆ ಬಿತ್ತು ಏಟು! ಸೈಮಾ 2022: ಪ್ರಶಸ್ತಿ ಪಡೆಯಲು ಬಂದ ಬಾಲಿವುಡ್‌ನ ರಣ್ವೀರ್ ಸಿಂಗ್‌ ಕೆನ್ನೆಗೆ ಬಿತ್ತು ಏಟು!

  ಬಾಲ್ಯದಿಂದಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅನಿಲ್ ಕಪೂರ್ ಕನ್ನಡಿಗರಿಗೂ ತೀರಾ ಹತ್ತಿರ. ಮಣಿರತ್ನಂ ನಿರ್ದೇಶಿಸಿದ ಕನ್ನಡ ಸಿನಿಮಾ 'ಪಲ್ಲವಿ ಅನುಪಲ್ಲವಿ' ಸಿನಿಮಾದಲ್ಲಿ ಅನಿಲ್ ಕಪೂರ್ ನಟಿಸಿದ್ದರು. ಅಲ್ಲಿಂದ ಇಲ್ಲಿವರೆಗೂ ಅನಿಲ್ ಕಪೂರ್ ಲುಕ್ ಬದಲಾಗಿಲ್ಲ. ಸದ್ಯ ಈ ನಟ ಬಾಲಿವುಡ್‌ನ ಎವರ್‌ಗ್ರೀನ್ ಹೀರೊ. ಅಷ್ಟಕ್ಕೂ ಈ ನಟನ ತದ್ರೂಪಿ ಎಲ್ಲಿಯವನು? ಯಾರು? ಅನ್ನೋ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

  ಅನಿಲ್ ಕಪೂರ್ ಹೋಲುವ ವ್ಯಕ್ತಿ ಜಾನ್

  ಅನಿಲ್ ಕಪೂರ್ ಹೋಲುವ ವ್ಯಕ್ತಿ ಜಾನ್

  ಸೋಶಿಯಲ್ ಮೀಡಿಯಾದಲ್ಲಿ ಬಾಲಿವುಡ್ ನಟ ಅನಿಲ್ ಕಪೂರ್‌ರನ್ನೇ ಹೋಲುವ ಮತ್ತೊಬ್ಬ ವ್ಯಕ್ತಿಯ ಪೋಟೊ ವೈರಲ್ ಆಗಿದೆ. ಅಂದ್ಹಾಗೆ ಅನಿಲ್ ಕಪೂರ್‌ನಂತೆ ಕಾಣುವ ಆ ವ್ಯಕ್ತಿಯ ಹೆಸರು ಜಾನ್ ಎಫೆರ್. ಈತ ಅಮೆರಿಕದ ಪ್ರಜೆ. ಸ್ವತ: ಜಾನ್ ಎಫೆರ್ ತನ್ನದೇ ಇನ್‌ಸ್ಟಾಗ್ರಾಂನಲ್ಲಿ ಫೋಟೊವನ್ನು ಪೋಸ್ಟ್ ಮಾಡಿದ್ದರು. ತನ್ನ ಫೋಟೊ ಜೊತೆಗೆ ಅನಿಲ್ ಕಪೂರ್ ಫೋಟೊವನ್ನು ಶೇರ್ ಮಾಡಿದ್ದರು. ಅದೇ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲೀಗ ವೈರಲ್ ಆಗಿವೆ.

  ಅನಿಲ್ ಕಪೂರ್ ತದ್ರೂಪಿ ಯಾರು?

  ಅನಿಲ್ ಕಪೂರ್ ತದ್ರೂಪಿ ಯಾರು?

  ಅನಿಲ್ ಕಪೂರ್ ಅನ್ನೇ ಹೋಲುವ ಜಾನ್ ಎಫೆರ್ ಅಮೆರಿಕಾದಲ್ಲಿ ಫಿಟ್ನೆಸ್ ಟ್ರೈನರ್. ತನ್ನ ಸಿಕ್ಸ್ ಪ್ಯಾಕ್ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಫೋಸ್ಟ್ ಮಾಡುತ್ತಿದ್ದಂತೆ ವೈರಲ್ ಆಗುತ್ತಿದೆ. ಜಾನ್ ಎಫೆರ್ ಫೋಟೊವನ್ನು ಶೇರ್ ಮಾಡಿದ್ದಷ್ಟೇ ಅಲ್ಲ. ಅನಿಲ್ ಕಪೂರ್‌ಗೆ ಟ್ಯಾಗ್ ಮಾಡಿದ್ದು, " ಬಾಲಿವುಡ್‌ನಿಂದ ಬರುವ ಕರೆಗಾಗಿ ಕಾಯುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಅನಿಲ್ ಕಪೂರ್ ಅಭಿಮಾನಿಗಳು ಥ್ರಿಲ್ ಆಗಿದ್ದು, ಇನ್‌ಸ್ಟಾಗ್ರಾಂನಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

  ಏನಂದ್ರು ಫ್ಯಾನ್ಸ್?

  ಏನಂದ್ರು ಫ್ಯಾನ್ಸ್?

  ಅನಿಲ್ ಕಪೂರ್‌ರನ್ನೇ ಹೋಲುವ ವ್ಯಕ್ತಿಯ ಪೋಟೊವನ್ನು ನೋಡುತ್ತಿದ್ದಂತೆ ನೆಟ್ಟಿಗರು ಥ್ರಿಲ್ ಆಗಿದ್ದಾರೆ. ಬಾಲಿವುಡ್‌ಗೆ ಕರೆ ಬರೆಬೇಕು ಅಂದರೆ, ನೀವು ಅನಿಲ್ ಕಪೂರ್ ಸಿಗ್ನೇಚರ್ ಸ್ಟೈಲ್ ಅನ್ನು ಕಲಿಯಬೇಕು ಎಂದಿದ್ದಾರೆ. ಒಬ್ಬರು " ಅನಿಲ್ ಕಪೂರ್‌ನಂತೆ ಡ್ಯಾನ್ಸ್ ಮಾಡುವುದನ್ನು ಕಲಿ" ಎಂದಿದ್ದಾರೆ. ಮತ್ತೊಬ್ಬರು " ಮೊದಲು ಒನ್‌ ಟು ಕಾ ಫೋರ್.. ಪೋರ್ ಟು ಕಾ ಒನ್ ಅಂತಲೂ ಹಾಗೂ ಜಕಾಸ್ ಅಂತಲೂ ಹೇಳುವುದನ್ನು ಕಲಿ: ಎಂದಿದ್ದಾರೆ.

  ಚಿಕ್ಕ ವಯಸ್ಸಿನಲ್ಲೇ ಸಿನಿಮಾಗೆ ಎಂಟ್ರಿ

  ಚಿಕ್ಕ ವಯಸ್ಸಿನಲ್ಲೇ ಸಿನಿಮಾಗೆ ಎಂಟ್ರಿ

  ಅನಿಲ್ ಕಪೂರ್ ತನ್ನ 14ನೇ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಶಶಿ ಕಪೂರ್ ಅಭಿನಯದ 'ತು ಪಾಯಲ್ ಮೇ ಗೀತ್' ಸಿನಿಮಾ ನಟಿಸಿದ್ದರು. ಅಲ್ಲಿಂದ ನಿರಂತರವಾಗಿ ಸಿನಿಮಾದಲ್ಲಿ ನಟಿಸಿಕೊಂಡು ಬಂದಿದ್ದಾರೆ. ಇತ್ತೀಚೆಗೆ ವರುಣ್ ಧವನ್ ಅಭಿನಯದ 'ಜುಗ್ ಜುಗ್ ಜಿಯೋ' ಸಿನಿಮಾದಲ್ಲಿ ನಟಿಸಿ, ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು.

  English summary
  Bollywood Actor Anil Kapoor Duplicate in US Is Fitness Coach John Effer, Know More.
  Tuesday, September 20, 2022, 10:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X