For Quick Alerts
  ALLOW NOTIFICATIONS  
  For Daily Alerts

  'ಆಮಿರ್ ಖಾನ್ ಯಾರು?' ಬಾಲಿವುಡ್ ನಟ ಅನ್ನು ಕಪೂರ್ ಶಾಕಿಂಗ್ ರಿಯಾಕ್ಷನ್!

  |

  ಬಾಲಿವುಡ್‌ ಸೂಪರ್‌ಸ್ಟಾರ್ ಆಮಿರ್ ಖಾನ್ ಅಭಿನಯದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಲಾಲ್ ಸಿಂಗ್ ಚಡ್ಡಾ' . ಈ ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ವೇಳೆ ಸೋಶಿಯಲ್ ಮೀಡಿಯಾದಲ್ಲಿ 'ಲಾಲ್ ಸಿಂಗ್ ಚಡ್ಡಾ' ಪರ-ವಿರೋಧದ ಬಗ್ಗೆ ಚರ್ಚೆ ನಡೆಯುತ್ತಿದೆ.

  ಆಗಸ್ಟ್ 11ರಂದು ಆಮಿರ್ ಖಾನ್ ಸಿನಿಮಾ 'ಲಾಲ್ ಸಿಂಗ್ ಚಡ್ಡಾ' ವಿಶ್ವದಾದ್ಯಂತ ಗ್ರ್ಯಾಂಡ್ ರಿಲೀಸ್ ಆಗುತ್ತಿದೆ. ಆದರೆ, ಈ ಸಿನಿಮಾ ಹಾಗೂ ಆಮಿರ್ ಖಾನ್ ಸುತ್ತ ಸುತ್ತಿಕೊಂಡಿರುವ ವಿವಾದದಿಂದ ಮಾತ್ರ ಹೊರಬರಲು ಸಾಧ್ಯ ಆಗುತ್ತಿಲ್ಲ. ಹ್ಯಾಶ್‌ಟ್ಯಾಗ್ '#ಬಾಯ್‌ಕಾಟ್ ಲಾಲ್‌ಸಿಂಗ್‌ಚಡ್ಡಾ' ಅನ್ನೋ ಅಭಿಯಾನ ಇನ್ನು ಮುಂದುವರೆಯುತ್ತಿದೆ. ಈ ಮಧ್ಯೆ ಬಾಲಿವುಡ್ ನಟ ಅನ್ನು ಕಪೂರ್ ಆಮಿರ್ ಖಾನ್ ಗೊತ್ತೇ ಇಲ್ಲ ಅನ್ನೋ ಹೇಳಿಕೆ ಕೊಟ್ಟಿದ್ದಾರೆ.

  ಬಾಯ್‌ಕಾಟ್ 'ಲಾಲ್‌ ಸಿಂಗ್ ಚಡ್ಡಾ' ಬೆಂಬಲಿಸಿದ ವಿಜಯಶಾಂತಿ: ಚಿರಂಜೀವಿಗೆ ಟಾಂಗ್ಬಾಯ್‌ಕಾಟ್ 'ಲಾಲ್‌ ಸಿಂಗ್ ಚಡ್ಡಾ' ಬೆಂಬಲಿಸಿದ ವಿಜಯಶಾಂತಿ: ಚಿರಂಜೀವಿಗೆ ಟಾಂಗ್

  ಆಮಿರ್ ಖಾನ್ ಬಗ್ಗೆ ಬಾಲಿವುಡ್ ನಟ ಅನ್ನು ಕಪೂರ್ ಕೊಟ್ಟ ಹೇಳಿಕೆಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಬಾಯ್‌ಕಾಟ್ ಲಾಲ್ ಸಿಂಗ್ ಚಡ್ಡಾ ಬಗ್ಗೆ ಚರ್ಚೆಯಾಗುತ್ತಿರುವಾಗಲೇ ಬಾಲಿವುಡ್‌ ನಟ ಕೊಟ್ಟ ಹೇಳಿಕೆ ಹಾಟ್ ಟಾಪಿಕ್ ಆಗಿದೆ. ಅಷ್ಟಕ್ಕೂ ಆಮಿರ್ ಖಾನ್ ಬಗ್ಗೆ ಅನ್ನು ಕಪೂರ್ ಹೇಳಿದ್ದೇನು? ತಿಳಿಯಲು ಮುಂದೆ ಓದಿ.

  ಯಾರು ಆಮಿರ್ ಖಾನ್?

  ಬಾಯ್‌ಕಾಟ್ ಲಾಲ್‌ ಸಿಂಗ್ ಚಡ್ಡಾ ಅಭಿಯಾನದ ಹಿನ್ನೆಲೆ ಸೆಲೆಬ್ರೆಟಿಗಳು ಆಮಿರ್ ಖಾನ್ ಬೆಂಬಲಕ್ಕೆ ನಿಂತಿದ್ದಾರೆ. 'ಲಾಲ್‌ ಸಿಂಗ್ ಚಡ್ಡಾ' ಸಿನಿಮಾ ಗೆಲ್ಲಿಸುವುದಕ್ಕೆ ಪಣ ತೊಟ್ಟು ನಿಂತಿದ್ದಾರೆ. ಇದೇ ವೇಳೆ ಅನ್ನು ಕಪೂರ್‌ಗೆ ಪತ್ರಕರ್ತರು ಲಾಲ್ ಸಿಂಗ್ ಚಡ್ಡಾ ಬಗ್ಗೆ ಪ್ರಶ್ನೆ ಮಾಡಿದ್ದರು. ಆ ಪ್ರಶ್ನೆಗೆ ಆಮಿರ್ ಖಾನ್ ಯಾರು? ಎಂದು ಕೇಳಿದ್ದರು. ಇದು ಬಾಲಿವುಡ್ ಮಂದಿಗೆ ದೊಡ್ಡ ಶಾಕ್ ಆಗಿದೆ. ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಗ್ಗೆ ಕೇಳಿದಾಗ, " ಅದೇನದು.. ನಾನು ಸಿನಿಮಾವನ್ನೇ ನೋಡುವುದಿಲ್ಲ. ನನಗೆ ಗೊತ್ತಿಲ್ಲ. ನಾನು ಬೇರೆಯವರ ಹಾಗೂ ನನ್ನ ಸಿನಿಮಾವನ್ನು ನೋಡುವುದಿಲ್ಲ. ಹಾಗಾಗಿ ಅವರು ಯಾರು ಅಂತ ಗೊತ್ತಿಲ್ಲ. ನಿಜವಾಗಲೂ ಅವರು ಯಾರು ಅಂತ ಗೊತ್ತಿಲ್ಲ. ಯಾರು ಅವರು?" ಎಂದು ಪ್ರಶ್ನೆ ಮಾಡಿದ್ದಾರೆ.

  ಹೇಳಿಕೆ ಕೊಟ್ಟಿದ್ದು ಯಾವಾಗ?

  ಹೇಳಿಕೆ ಕೊಟ್ಟಿದ್ದು ಯಾವಾಗ?

  ಅನ್ನು ಕಪೂರ್ ಕೊಟ್ಟ ಹೇಳಿಕೆ ಬಗ್ಗೆ ಬಾಲಿವುಡ್‌ನಲ್ಲಿ ಚರ್ಚೆಯಾಗುತ್ತಲೇ ಇದೆ. ಬಾಲಿವುಡ್‌ನ ಸೀನಿಯರ್ ಆಕ್ಟರ್ ಯಾಕೆ ಹೀಗಂದರು? ಆಮಿರ್ ಖಾನ್ ಗೊತ್ತೇ ಇಲ್ಲ ಎಂದು ಹೇಳಿದ್ದೇಕೆ? ಅನ್ನೋ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದ್ರೀಗ ಅನ್ನು ಕಪೂರ್ ತಾವು ನಟಿಸಿದ ವೆಬ್ ಸಿರೀಸ್‌ವೊಂದನ್ನು ಪ್ರಚಾರ ಮಾಡುತ್ತಿದ್ದಾರೆ. ಅಮೆಜಾನ್ ಪ್ರೈಮ್‌ನಲ್ಲಿ 'ಕ್ರ್ಯಾಶ್ ಕೋರ್ಸ್' ಸೀರಿಸ್ ಬಿಡುಗಡೆಯಾಗುತ್ತಿದೆ. ಈ ಪ್ರಚಾರದ ವೇಳೆ ಆಮಿರ್ ಖಾನ್ ಸಿನಿಮಾ ಲಾಲ್ ಸಿಂಗ್ ಚಡ್ಡಾ ಬಗ್ಗೆ ಪ್ರಶ್ನೆ ಹೇಳಿದ್ದರು.

  ಅಮಿತಾಬ್ ಬಚ್ಚನ್ ಜೊತೆ ನಟನೆ

  ಅಮಿತಾಬ್ ಬಚ್ಚನ್ ಜೊತೆ ನಟನೆ

  ಬಾಲಿವುಡ್ ನಟ ಅನ್ನು ಕಪೂರ್ 80 ಹಾಗೂ 90ರ ದಶಕದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 1979ರಲ್ಲಿ ಅಮಿತಾಬ್ ಬಚ್ಚನ್ ಅಭಿನಯದ 'ಕಾಲಾ ಪತ್ಥರ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇತ್ತೀಚೆಗೆ ಇಮ್ರಾನ್ ಹಾಶ್ಮಿ ಹಾಗೂ ಅಮಿತಾಬ್ ಬಚ್ಚನ್ ನಟಿಸಿದ 'ಚೆಹ್ರೆ' ಸಿನಿಮಾ ಬಿಡುಗಡೆಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ 'ಅಂತ್ಯಾಕ್ಷರಿ' ಕಾರ್ಯಕ್ರಮದ ನಿರೂಪಕರಾಗಿಯೂ ಅನ್ನು ಕಪೂರ್ ಜನಪ್ರಿಯತೆ ಗಳಿಸಿದ್ದರು.

  'ಲಾಲ್ ಸಿಂಗ್ ಚಡ್ಡಾ' ರಿಲೀಸ್ ಯಾವಾಗ?

  'ಲಾಲ್ ಸಿಂಗ್ ಚಡ್ಡಾ' ರಿಲೀಸ್ ಯಾವಾಗ?

  ಆಮಿರ್ ಖಾನ್ ನಟಿಸಿದ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ಇದೇ ಆಗಸ್ಟ್ 11ರಂದು ಬಿಡುಗಡೆಯಾಗುತ್ತಿದೆ. ಆಮಿರ್ ಖಾನ್ ಜೊತೆ ಕರೀನಾ ಕಪೂರ್, ಮೋನಾ ಸಿಂಗ್ ಹಾಗೂ ನಾಗ ಚೈತನ್ಯ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್ ನಟಿಸಿದ್ದ ಆಸ್ಕರ್ ಪ್ರಶಸ್ತಿ ಗೆದ್ದಿರೋ 'ಫಾರೆಸ್ಟ್ ಗಂಪ್' ಸಿನಿಮಾದ ರಿಮೇಕ್. ಈ ಕಾರಣಕ್ಕೆ ಆಮಿರ್ ಖಾನ್ ಸಿನಿಮಾ ಬಗ್ಗೆ ಸಹಜವಾಗಿಯೇ ಕುತೂಹಲ ದುಪ್ಪಟ್ಟಾಗಿದೆ.

  English summary
  Bollywood Actor Annu Kapoor Says He doesn't Know Aamir Khan And Lal Singh Chaddha, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X