For Quick Alerts
  ALLOW NOTIFICATIONS  
  For Daily Alerts

  ಅನುಪಮ್ ಖೇರ್ ಟ್ವಿಟ್ಟರ್ ನಿಂದ 80 ಸಾವಿರ ಫಾಲೋವರ್ಸ್ ನಾಪತ್ತೆ; ಏನಾಯ್ತು?

  |

  ಬಾಲಿವುಡ್ ನ ಹಿರಿಯ ನಟ, ನಿರ್ಮಾಪಕ ಅನುಪಮ್ ಖೇರ್ ಟ್ವಿಟ್ಟರ್ ಖಾತೆಯಿಂದ 80 ಸಾವಿರ ಫಾಲೋವರ್ಸ್ ನಾಪತ್ತೆಯಾಗಿದ್ದಾರೆ. ಕೆಲವೇ ಗಂಟೆಗಳಲ್ಲಿ ಇಷ್ಟು ಮಂದಿ ನಾಪತ್ತೆಯಾಗಿರುವುದನ್ನು ನೋಡಿ ಅನುಪಮ್ ಖೇರ್ ಶಾಕ್ ಆಗಿದ್ದಾರೆ. ದೀಢಿರ್ ನಾಪತ್ತೆಗೆ ಕಾರಣವೇನು ಎಂದು ಟ್ವಿಟ್ಟರ್ ಇಂಡಿಯಾಗೆ ಪ್ರಶ್ನೆ ಮಾಡಿದ್ದಾರೆ.

  ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರೀಯರಾಗಿರುವ ನಟ ಅನುಪಮ್ ಖೇರ್, ಆಗಾಗ ಫೋಟೋಗಳು, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೆ ಟ್ರೆಂಡಿಂಗ್ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ.

  ಚಿತ್ರರಂಗದಲ್ಲಿ 37 ವರ್ಷ ಪೂರೈಸಿದ ನಟ ಅನುಪಮ್ ಖೇರ್ ಭಾವನಾತ್ಮಕ ಪೋಸ್ಟ್ ಚಿತ್ರರಂಗದಲ್ಲಿ 37 ವರ್ಷ ಪೂರೈಸಿದ ನಟ ಅನುಪಮ್ ಖೇರ್ ಭಾವನಾತ್ಮಕ ಪೋಸ್ಟ್

  ಆದರೀಗ ತಮ್ಮ ಟ್ವಿಟ್ಟರ್ ಖಾತೆಯಿಂದ 80ಸಾವಿರ ಮಂದಿ ದಿಢೀರ್ ನಾಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ. ಇದು ತಾಂತ್ರಿಕ ತೊಂದರೆನಾ ಅಥವಾ ಇನ್ನೇನಾದ್ರು ಇದಿಯ ಎಂದು ತಿಳಿದುಕೊಳ್ಳಬೇಕೆೆಂದು ಅನುಪಮ್ ಖೇರ್ ಹೇಳಿದ್ದಾರೆ.

  ಈ ಬಗ್ಗೆ ಟ್ವೀಟ್ ಮಾಡಿರುವ ಅನುಪಮ್ ಖೇರ್, 'ಆತ್ಮೀಯ ಟ್ವಿಟ್ಟರ್ ಮತ್ತು ಟ್ವಿಟ್ಟರ್ ಇಂಡಿಯಾ, ಕಳೆದ 36 ಗಂಟೆಗಳಲ್ಲಿ ನನ್ನ ಖಾತೆಯಲ್ಲಿ 80,000 ಫಾಲೋವರ್ಸ್ ಕಡಿಮೆ ಆಗಿದ್ದಾರೆ. ನಿಮ್ಮ ಆಪ್ ನಲ್ಲಿ ಏನಾದರು ತೊಂದರೆ ಇದಿಯೇ ಅಥವಾ ಇನ್ನೇನಾದರೂ ನಡೆಯುತ್ತಿದೆಯೇ? ಇದು ಒಂದು ಅವಲೋಕನ. ನನ್ನ ದೂರ ಅಲ್ಲ' ಎಂದು ಹೇಳಿದ್ದಾರೆ.

  ಅಂದಹಾಗೆ ಟ್ವಿಟ್ಟರ್ ನಿಂದ ದಿಢೀರ್ ಫಾಲೋವರ್ಸ್ ಕಳೆದುಕೊಂಡಿದ್ದು ಅನುಪಮ್ ಖೇರ್ ಮಾತ್ರವಲ್ಲ ಈ ಹಿಂದೆ ಅಮಿತಾಬ್ ಬಚ್ಚನ್ ಮತ್ತು ಕಂಗನಾ ರಣಾವತ್ ಸಹ ಫಾಲೋವರ್ಸ್ ಕಳೆದುಕೊಂಡಿದ್ದಾರೆ.

  ಅನುಪಮ್ ಖೇರ್ ಇತ್ತೀಚಿಗಷ್ಟೆ ಚಿತ್ರರಂಗದಲ್ಲಿ 37 ವರ್ಷ ಪೂರೈಸಿದ್ದು, ಭಾವುಕ ಸಂದೇಶ ಹಂಚಿಕೊಂಡಿದ್ದರು. 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅನುಪಮ್ ಖೇರ್ ಹಿಂದಿ ಮಾತ್ರವಲ್ಲದೆ ಬೇರೆ ಬೇರೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ನಿರೂಪಕ Danish Sait | Filmibeat Kannada

  ಅನುಪಮ್ ಖೇರ್ ಕೊನೆಯದಾಗಿ ಒನ್ ಡೇ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ದಿ ಲಾಸ್ಟ್ ಶೋ, ಮುಂಗಿಲಾಲ್ ರಾಕ್ಸ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅನುಪಮ್ ಖೇರ್ ಪತ್ನಿ ನಟಿ ಮತ್ತು ರಾಜಕಾರಣಿ ಕಿರಣ್ ಖೇರ್ ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮಾರಕ ಕ್ಯಾನ್ಸರ್‌ಗೆ ತುತ್ತಾಗಿರುವ ಕಿರಣ್ ಖೇರ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.

  English summary
  Bollywood Actor Anupam Kher lost 80000 followers in 36 hours on Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X