''ಮದುವೆಯಾದರೂ ಅಕ್ರಮ ಸಂಬಂಧ ಹೊಂದುವುದು ಕೂಡ ಒಂದು ಚಟ'' ಎಂದ ಬಾಲಿವುಡ್ ಸ್ಟಾರ್...!
ಒಮ್ಮೊಮ್ಮೆ ಎಲ್ಲರ ಕಣ್ಣಿಗೆ ಕಾಮಿಡಿ ಪೀಸುಗಳಂತೆ ಕಾಣುತ್ತಿದ್ದವರು. ನೋಡ ನೋಡುತ್ತಿದ್ದಂತೇ ಹೇಳಿಮಾಡಿಸಿದಂತಾ ಬದುಕನ್ನು ರೂಪಿಸಿಕೊಂಡು, ಲೇವಡಿ ಮಾಡೋರ ಮುಂದೆ ಗೆದ್ದು ಬೀಗುತ್ತಾರೆ. ಇನ್ನೂ ಕೆಲವೊಮ್ಮೆ ತುಂಬಾನೇ ಇಷ್ಟ ಪಟ್ಟು ಮದುವೆಯಾದವರು, ಒಬ್ಬರನ್ನು ಬಿಟ್ಟು ಒಬ್ಬರು ಉಸಿರಾಡಲೂ ಸಾಧ್ಯವಿಲ್ಲ ಅಂದುಕೊಂಡವರು, ವಿರೋಧಗಳನ್ನು ಧಿಕ್ಕರಿಸಿ ಮದುವೆಯಾದವರು, ಜೊತೆಗೂಡಿದ ಕೆಲವೇ ದಿನಗಳಲ್ಲಿ ದೂರವಾಗುತ್ತಾರೆ. ಇದಕ್ಕೆ ಬಾಲಿವುಡ್ ಸ್ಟಾರ್ ಅರ್ಜುನ್ ರಾಂಪಾಲ್ ಮತ್ತು ಮೆಹರ್ ಜೆಸಿಯಾ ಅತ್ಯುತ್ತಮ ಉದಾಹರಣೆ.
ಹೌದು, ಪ್ಯಾರ್ ಇಷ್ಕ್ ಔರ್ ಮೊಹಬ್ಬತ್ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ಅರ್ಜುನ್ ರಾಂಪಾಲ್, ಆ ನಂತರ ದಿವಾನಾಪನ್.. ಆಂಖೆ.. ದಿಲ್ ಹೈ ತುಮ್ಹಾರಾ.. ದಿಲ್ ಕಾ ರಿಷ್ತಾ.. ಅಸಂಭವ್.. ವಾದಾ.. ಹೀಗೆ ಒಂದಾದ ಮೇಲೊಂದು ಸಿನಿಮಾಗಳಲ್ಲಿ ನಾಯಕನಾಗಿ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡರು. ಡಾನ್.. ಓಂ ಶಾಂತಿ ಓಂ.. ರಾಜ್ ನೀತಿ.. ರಾ ವನ್.. ರಾಕ್ ಆನ್.. ಹೀರೋಯಿನ್ ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಜನ ಮನ ಗೆದ್ದರು. ತಮ್ಮದೇ ಅಭಿಮಾನಿ ಬಳಗವನ್ನೂ ಸಂಪಾದಿಸಿದರು.

ಇಂಥಾ ಅರ್ಜುನ್ ರಾಂಪಾಲ್ ಚಿತ್ರರಂಗಕ್ಕೆ ಬರುವ ಮೊದಲೇ ಮದುವೆಯ ಕನಸು ಕಂಡಿದ್ದರು. ತೀರಾ ಚಿಕ್ಕ ವಯಸ್ಸಿನಲ್ಲಿಯೇ ತನಗಿಂತ ಹಿರಿಯರಾದ ಮಾಡೆಲ್ ಮೆಹರ್ ಜೆಸಿಯಾ ಅವರನ್ನು 1998ರಲ್ಲಿ ಮದುವೆಯಾದರು. ಆದರೆ. ಇದು ಬಣ್ಣದ ಲೋಕ. ಇಲ್ಲಿ ಪ್ರೀತಿ ಅನ್ನೋ ಪದಕ್ಕೆ ಅರ್ಥ ಬದಲಾಗದೇ ಇದ್ರೂ, ಈ ಪ್ರೀತಿಯನ್ನು ಅನೇಕರು ಅವರವರ ಶಕ್ತಿಯನುಸಾರ ಅರ್ಥೈಸಿಕೊಂಡಿದ್ದಾರೆ. ಅರ್ಜುನ್ ರಾಂಪಾಲ್ ಕೂಡ ಇದರಿಂದ ಹೊರತಾಗಿಲ್ಲ.ಹೀಗಾಗಿಯೇ ಮದುವೆಯಾಗಿ ಮಹಿಕಾ ಮತ್ತು ಮೈರಾ ಎಂಬ ಇಬ್ಬರು ಮುದ್ದಾದ ಹೆಣ್ಣು ಮಕ್ಕಳ ತಂದೆಯಾದ ಮೇಲೂ ಅರ್ಜುನ್ ರಾಂಪಾಲ್ ತಮ್ಮ 20 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದರು. ಮಹಿಕಾ ಮತ್ತು ಮೈರಾ ಅವರನ್ನು ಅವರ ತಾಯಿ ಮೆಹರ್ ಜೊತೆಯಲ್ಲಿಯೇ ಇರುವಂತೆ ಹೇಳಿ ವಿಚ್ಛೇದನವನ್ನು ಪಡೆದರು.
ಮೆಹರ್ ಅವರಿಂದ ದೂರವಾದ ಅರ್ಜುನ್ ರಾಂಪಾಲ್ ಆ ನಂತರ ಮಾಡೆಲ್ ಗೆಬ್ರಿಲ್ಲಾ ಡೆಮೆಟ್ರಿಯಾಡೆಸ್ ಜೊತೆ ಲವ್ವಲ್ಲಿ ಬಿದ್ದರು. ಮದ್ವೆಯಾಗದೇ ಒಂದೇ ಸೂರಿನಡಿ ಗೆಬ್ರಿಲ್ಲಾ ಜೊತೆ ವಾಸ ಮಾಡಲು ಕೂಡ ಶುರು ಮಾಡಿದರು. ಇವರಿಬ್ಬರ ಪ್ರೀತಿಯ ಸಂಕೇತವಾಗಿ ಈ ಜೋಡಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಹೀಗೆ ಮದುವೆಯಾದ ಮೇಲೂ ಬೇರೆಯವರ ಮೋಹ ಪಾಶದಲ್ಲಿ ಸಿಲುಕಿದ ಅರ್ಜುನ್ ರಾಂಪಾಲ್, ಮೊನ್ನೆಯಷ್ಟೇ ಮದುವೆ ಅನ್ನುವುದು ಕೇವಲ ಚಿಕ್ಕ ಪೇಪರ್‌ಗಷ್ಟೇ ಸೀಮಿತವಾದದ್ದು ಎಂದಿದ್ದಾರೆ. ಪ್ರೇಮ-ಮದುವೆ-ವಿಚ್ಛೇದನ-ಲಿವ್ ಇನ್ ರಿಲೇಶಿನ್‌ಶಿಫ್ ಬಗ್ಗೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಅಕ್ರಮ ಸಂಬಂಧ ಮತ್ತು ಲೈಂಗಿಕತೆಯ ಬಗ್ಗೆಯೂ ಮುಕ್ತವಾಗಿ ಅರ್ಜುನ್ ರಾಂಪಾಲ್ ಮಾತನಾಡಿದ್ದಾರೆ.
ಹೌದು, ರಣವೀರ್ ಅಲ್ಲಾಬಾಡಿಯಾ ಅವರಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅರ್ಜುನ್ ರಾಂಪಾಲ್, ಸೆಕ್ಸ್ ನನಗೆ ತುಂಬಾ ಇಷ್ಟವಾದದ್ದು ಎಂದು ಮುಕ್ತವಾಗಿ ಹೇಳಿಕೊಂಡಿದ್ಧಾರೆ. ಬದುಕಿನಲ್ಲಿ ದೈಹಿಕ ಅನ್ಯೋನ್ಯತೆ ತುಂಬಾ ಮುಖ್ಯ ಎಂದಿರುವ ಅರ್ಜುನ್ ರಾಂಪಾಲ್, ಕೇವಲ ಒಬ್ಬರ ಜೊತೆ ಸಂಬಂಧ ಹೊಂದುವುದು ಕೂಡ ಅಷ್ಟೇ ಮುಖ್ಯ ಅಂದಿದ್ದಾರೆ. ಮುಂದುವರೆದು ನಮ್ಮ ಸಂಗಾತಿಯ ಜೊತೆ ಹಾಸಿಗೆ ಹಂಚಿಕೊಳ್ಳುವಾಗ ಅಲ್ಲೇನೋ ಒಂದು ರೀತಿಯ ಶಕ್ತಿ ಅಡಗಿದೆ ಎಂದು ನಾನು ಅಂದುಕೊಂಡಿದ್ದೇನೆ ಎಂದಿರುವ ಅರ್ಜುನ್ ರಾಂಪಾಲ್ ಲೈಂಗಿಕ ಕ್ರಿಯೆಯಲ್ಲಿ ದೊಡ್ಡ ಶಕ್ತಿ ವಿನಿಮಯವಾಗುತ್ತೆ ಎಂದು ಆ ಕ್ಷಣಕ್ಕೆ ನಮಗೆ ಗೊತ್ತಿರಲ್ಲ. ಆದರೆ ಆಗ ನಮ್ಮ ಡಿಎನ್ಎ ಎಲ್ಲೋ ಹೋಗಿರುತ್ತದೆ. ಆದ್ದರಿಂದ ಲೈಂಗಿಕತೆ ಅವಶ್ಯಕವಾಗಿ ಬೇಕು ಎಂದು ಕೂಡ ಹೇಳಿದ್ದಾರೆ.

ಇನ್ನೂ ಇದೇ ಸಂದರ್ಶನದಲ್ಲಿ ಅಕ್ರಮ ಸಂಬಂಧದ ಬಗ್ಗೆಯೂ ಮಾತನಾಡಿರುವ ಅರ್ಜುನ್ ರಾಂಪಾಲ್, ಮದುವೆಯಾದರೂ ಅಕ್ರಮ ಸಂಬಂಧಕ್ಕೆ ಕೆಲವರು ಹಾತೊರೆಯುತ್ತಾರೆ ಅಂದರೆ ಅದು ಅವರ ಚಟ ಎಂದಿದ್ದಾರೆ. ಅಭ್ಯಾಸ ಎಂದಿದ್ದಾರೆ. ಮೇಲ್ನೋಟಕ್ಕೆ ನಮ್ಮದು ಸುಖಿ ಸಂಸಾರ ಎಂದು ಹೇಳಿಕೊಳ್ಳುವ ಸಾಕಷ್ಟು ಜನ ಇನ್ನೊಬ್ಬ ಮಹಿಳೆಗಾಗಿ ಹಪಹಪಿಸುವುದನ್ನು ನಾನು ನೋಡಿದ್ದೇನೆ ಎಂದಿರುವ ಅರ್ಜುನ್ ರಾಂಪಾಲ್, ಅವರದ್ದು ಅದ್ಹೇಗೆ ಸುಖಿ ದಾಂಪತ್ಯವಾಗುತ್ತೆ ಎನ್ನುವುದು ನನಗೆ ಈಗಲೂ ಅರ್ಥವಾಗುತ್ತಿಲ್ಲ ಎಂದಿದ್ದಾರೆ. ವಿವಾಹೇತರ ಸಂಬಂಧ ಚಟವಾದರೂ ಅದು ಯಾವತ್ತು ಒಳ್ಳೇಯದಲ್ಲ ಅದು ಯಾವತ್ತಿದ್ದರೂ ಮಾರಕವೆಂದು ಕೂಡ ಹೇಳಿರುವ ಅರ್ಜುನ್ ರಾಂಪಾಲ್, ಈ ತರಹದ ಸಂಬಂಧದ ಬಗ್ಗೆ ಹೆಚ್ಚು ಆಲೋಚನೆ ಮಾಡಬಾರದು. ನಾನು ಹೀಗೆ ಮಾಡಿದ್ದೇ. ಆದರೆ ಸುಮ್ಮನೆ ಯೋಚ್ನೇ ಮಾಡುತ್ತಾ ಸಮಯ ವ್ಯರ್ಥ ಮಾಡುವ ಬದಲು ತಪ್ಪುಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು ಎಂದು ಕೂಡ ಹೇಳಿದ್ದಾರೆ.
ಸದ್ಯ ಅರ್ಜುನ್ ರಾಂಪಾಲ್ ಅವರ ಈ ಹೇಳಿಕೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಅರ್ಜುನ್ ರಾಂಪಾಲ್ ಅವರ ಸಂದರ್ಶನದ ವಿಡಿಯೋ ವೈರಲ್ ಆಗುತ್ತಿದೆ.


Click it and Unblock the Notifications











