ಶತಕ ಬಾರಿಸಿ ಮುನ್ನುಗ್ಗುತ್ತಿರುವ ಖುಷಿಯಲ್ಲಿ 'ಡ್ರೀಮ್ ಗರ್ಲ್'

ಬಾಲಿವುಡ್ ನಲ್ಲಿ ಸದ್ಯ ಸದ್ದು ಮಾಡುತ್ತಿರುವ ಸಿನಿಮಾ ಡ್ರೀಮ್ ಗರ್ಲ್. ಆಯುಷ್ಮಾನ್ ಖುರಾನ ನಾಯಕನಾಗಿ ಮಿಂಚಿರುವ ಡ್ರೀಮ್ ಗರ್ಲ್ ಗೆ ಚಿತ್ರಕ್ಕೆ ಚಿತ್ರಪ್ರಿಯರು ಫಿದಾ ಆಗಿದ್ದಾರೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದಲ್ಲದೆ ಬಾಕ್ಸ್ ಆಫೀಸ್ ನಲ್ಲಿಯೂ ಉತ್ತಮ ಕಲೆಕ್ಷನ್ ಮಾಡಿದೆ.

ಸಿನಿಮಾ ರಿಲೀಸ್ ಆಗಿ 10 ದಿನಕ್ಕೆ 100ಕೋಟಿ ಕ್ಲಬ್ ಸೇರಿದೆ. ವಿಶೇಷ ಅಂದ್ರೆ ಆಯುಷ್ಮಾನ್ ಖುರಾನ ಅಭಿನಯದ ಎರಡನೆ ಸಿನಿಮಾ ಸೆಂಚುರಿ ಕ್ಲಬ್ ಸೇರುತ್ತಿದೆ. ಕಳೆದ ವರ್ಷ ತೆರೆ ಕಂಡಿದ್ದ ಬದೈ ಹೋ ಸಿನಿಮಾ ಕೂಡ 100 ಕೋಟಿ ಕ್ಲಬ್ ಸೇರಿತ್ತು.

ಆಯೂಶ್ಮಾನ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಬರೇಲಿ ಕಿ ಬರ್ಫಿ, ಅಂಧಾದುನ್, ಬದೈ ಹೋ, ಆರ್ಟಿಕಲ್ 15 ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ ಆಯೂಶ್ಮಾನ್. ಸದ್ಯ ರಿಲೀಸ್ ಆಗಿರುವ ಡ್ರೀಮ್ ಗರ್ಲ್ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.

Bollywood Actor Ayushmann Khurrana Starrer Dream Girl Movie Crossed 100 Crore

ಆಯೂಶ್ಮಾನ್ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಾ, ಶುಭ್ ಮಂಗಳ್ v/s ಜಾದಾ ಸಾವಧಾನ್, ಗುಲಾಬೋ ಸಿತಾಬೊ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ವಿಶೇಷ ಅಂದ್ರೆ ಈ ಬಾರಿ ಭಾರತದಿಂದ ಆಸ್ಕರ್ ಎಂಟ್ರಿ ಕೊಡುವ 28 ಸಿನಿಮಾಗಳ ಲಿಸ್ಟ್ ನಲ್ಲಿ ಆಯೂಶ್ಮಾನ್ ಅಭಿನಯದ ಮೂರು ಸಿನಿಮಾ ರೇಸ್ ನಲ್ಲಿ ಇತ್ತು.

English summary
Bollywood actor Ayushmann Khurrana starrer dream Girl movie crossed 100 crore. Dream Girl is Ayushmann’s second film to cross Rs 100 crore mark at the box office after Badhaai Ho, which released last year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X