twitter
    For Quick Alerts
    ALLOW NOTIFICATIONS  
    For Daily Alerts

    ಬಾಲಿವುಡ್ ನಟ ದಿಲೀಪ್ ಕುಮಾರ್ ಗೆ ಎದೆ ಸೋಂಕು, ಆಸ್ಪತ್ರೆಗೆ ದಾಖಲು

    By Harshitha
    |

    ಎದೆ ಸೋಂಕಿನಿಂದ ಬಳಲುತ್ತಿರುವ ಬಾಲಿವುಡ್ ನಟ ದಿಲೀಪ್ ಕುಮಾರ್ ರನ್ನ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ದಿಲೀಪ್ ಕುಮಾರ್ ಅವರ ಅನಾರೋಗ್ಯದ ವಿಚಾರವನ್ನ ಸಂಬಂಧಿ ಫೈಸಲ್ ಫಾರೂಕಿ ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ.

    ಕಳೆದ ವರ್ಷ ಕೂಡ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ದಿಲೀಪ್ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದರು. ಸೂಕ್ತ ಚಿಕಿತ್ಸೆ ಬಳಿಕ ದಿಲೀಪ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು.

    ಬಾಲಿವುಡ್ ನಟ ದಿಲೀಪ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಬಾಲಿವುಡ್ ನಟ ದಿಲೀಪ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ

    Bollywood Actor Dilip Kumar hospitalized due to Chest infection

    ಇದೀಗ 95 ವರ್ಷದ ದಿಲೀಪ್ ಕುಮಾರ್ ಎದೆ ಸೋಂಕು ಕಾಣಿಸಿಕೊಂಡಿದೆ. ''ಆತಂಕ ಪಡುವ ಅವಶ್ಯಕತೆ ಇಲ್ಲ. ನಿತಿನ್ ಗೋಖಲೆ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಕೆಲ ಪರೀಕ್ಷೆಗಳನ್ನು ಮಾಡಿಸಬೇಕಾಗಿರುವ ಕಾರಣ, ಕೆಲವು ದಿನ ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ'' ಎಂದು ಪತ್ನಿ ಸಾಯಿರಾ ಬಾನು ತಿಳಿಸಿದ್ದಾರೆ.

    ನಟ ದಿಲೀಪ್ ಕುಮಾರ್ ಭೇಟಿ ಮಾಡಿದ ಶಾರೂಖ್ ನಟ ದಿಲೀಪ್ ಕುಮಾರ್ ಭೇಟಿ ಮಾಡಿದ ಶಾರೂಖ್

    ಬಾಲಿವುಡ್ ಲೋಕದ ಲೆಜೆಂಡ್ ದಿಲೀಪ್ ಕುಮಾರ್ 1998 ರಲ್ಲಿ ತೆರೆಕಂಡ 'ಖಿಲಾ' ಚಿತ್ರದ ಬಳಿಕ ಯಾವುದೇ ಸಿನಿಮಾದಲ್ಲಿ ಅಭಿನಯಿಸಿಲ್ಲ. 'ದೇವದಾಸ್', 'ಕರ್ಮ', 'ಮುಘಲ್ ಎ ಆಝಾಮ್' ಅಂತಹ ಹಿಟ್ ಚಿತ್ರಗಳನ್ನು ಕೊಟ್ಟ ದಿಲೀಪ್ ಕುಮಾರ್ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಅವರಿಗೆ ಸಂದಿವೆ.

    English summary
    Bollywood Actor Dilip Kumar hospitalized in Mumbai's Lilavati Hospital due to Chest infection.
    Thursday, September 6, 2018, 12:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X