14 ವರ್ಷಗಳ ವನವಾಸ ಮುಗಿಸಿ, ರಾಜಕೀಯಕ್ಕೆ ಮರಳಿದ ಬಾಲಿವುಡ್ ನ ಹೀರೋ ನಂ 1

ತನ್ನ 'ನಡಾವಳಿ' ಹಾಗೂ 'ದುರಂಹಕಾರ'ಗಳಿಂದ ತನ್ನ 'ಕಾಲ' ಮೇಲೆ ತಾವೇ 'ಚಪ್ಪಡಿ ಕಲ್ಲು' ಎಳೆದುಕೊಂಡವರು 'ಗೋವಿಂದ'. 'ಆ ಕಾಲ'ದಲ್ಲಿಯೇ 'ಸೂಪರ್ ಸ್ಟಾರ್' ಪಟ್ಟವನ್ನ ಅಲಂಕರಿಸಿ ಆ ನಂತರ ಹೇಳ ಹೆಸರಿಲ್ಲದಂತೆ 'ಬಾಲಿವುಡ್' ನಿಂದ 'ಕಣ್ಮರೆ'ಯಾದ 'ಗೋವಿಂದ' ಸದ್ಯಕ್ಕೆ 'ರಾಜಕೀಯ'ದ ಪಡಸಾಲೆಗೆ 'ಎರಡನೇ' ಬಾರಿ ಬಂದಿದ್ದಾರೆ.

ಹೌದು, ಸರಿ ಸುಮಾರು '20 ವರ್ಷ'ಗಳ ಹಿಂದೆ, ಕಾಂಗ್ರೆಸ್ 'ಕೈ' ಹಿಡಿದು ರಾಜಕೀಯದ 'ದೋಣಿ'ಯನ್ನ ಹತ್ತಿದ್ದ 'ಗೋವಿಂದ' ಮುಂಬೈನ 'ವಿರಾರ್' ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅಚ್ಚರಿ ಅಂದರೆ ಆ ಕಾಲದಲ್ಲಿ 'ಬಿಜೆಪಿ'ಯ ರಾಮ್ ನಾಯಕ್ ಅವರನ್ನ 50000 ಮತಗಳ ಅಂತರದಿಂದ 'ಸೋಲಿಸಿದ್ದರು'. ಗೆದ್ದು ಬೀಗಿದ್ದರು. ಆ ನಂತರ 2009ರವರೆಗೆ ಹೆಚ್ಚು ಕಡಿಮೆ ರಾಜಕೀಯದಲ್ಲಿ 'ಆಕ್ಟಿವ್' ಆಗಿದ್ದ ಗೋವಿಂದಗೆ ಏನಾಯಿತು ಗೊತ್ತಿಲ್ಲ. ಏಕಾಏಕಿ ರಾಜಕೀಯಕ್ಕೆ 'ದೀರ್ಘ ದಂಡ ನಮಸ್ಕಾರ' ಹಾಕಿ ಮರಳಿ 'ಚಿತ್ರರಂಗ'ಕ್ಕೆ ಬಂದರು.

Bollywood Actor Govinda Joins Shiva Sena In Mumbai

ಇಂಥ ಗೋವಿಂದ ಈಗ ಮತ್ತೆ ರಾಜಕೀಯಕ್ಕೆ 'ರೀ ಎಂಟ್ರಿ' ಕೊಟ್ಟಿದ್ದಾರೆ. ಆದರೆ ಈ ಬಾರಿ 'ಕಾಂಗ್ರೆಸ್' ಪಾಳಯದಿಂದ ಅಲ್ಲ, ಬದಲಿಗೆ 'ಶಿವಸೇನಾ' ಕಡೆಯಿಂದ ಅನ್ನುವುದು ವಿಶೇಷ. ಮಹಾರಾಷ್ಟ್ರ ಮುಖ್ಯಮಂತ್ರಿ 'ಏಕನಾಥ್ ಶಿಂಧೆ' ಸಮ್ಮುಖದಲ್ಲಿ ಇಂದು 'ಶಿವಸೇನೆ'ಗೆ ಸೇರ್ಪಡೆಗೊಂಡ ಗೋವಿಂದ, ಎಲ್ಲವೂ ದೈವಿಚ್ಚೆ ಮತ್ತೆ ರಾಜಕೀಯಕ್ಕೆ ನಾನು ಬರ್ತಿನಿ ಎಂದು ಅಂದುಕೊಂಡಿರಲಿಲ್ಲ ಎಂದರು.

2004ರಿಂದ 2009ರವರೆಗೆ ನಾನು ರಾಜಕೀಯದಲ್ಲಿದ್ದೆ. ಆಗ 2009ರಲ್ಲಿ 14ನೇ ಲೊಕಸಭಾ ಚುನಾವಣೆ ನಡೆದಿತ್ತು. 'ಕಾಕತಾಳೀಯ' ಎಂದರೆ '14 ವರ್ಷ'ದ ನಂತರ ಮತ್ತೆ ನಾನು ರಾಜಕೀಯ ಜೀವನಕ್ಕೆ ಮರಳಿದ್ದೇನೆ ಎಂದರು. 'ಏಕನಾಥ್ ಶಿಂಧೆ' ನೇತೃತ್ವದಲ್ಲಿ 'ಮುಂಬೈ' ನಗರವು ಈಗ 'ಸ್ವಚ್ಛ'ವಾಗಿ ಮತ್ತು 'ಉತ್ತಮ'ವಾಗಿ ಕಾಣುತ್ತಿದೆ ಎಂದು ತಮ್ಮ ಮನದ ಮಾತನ್ನ ಹಂಚಿಕೊಂಡರು.

Bollywood Actor Govinda Joins Shiva Sena In Mumbai

ಮಿಕ್ಕಂತೆ 'ಶಿವಸೇನಾ ಶಿಂಧೆ ಬಣ' ಸೇರಿರುವ ಗೋವಿಂದ, ಲೋಕಸಭೆ ಚುನಾವಣೆಯಲ್ಲಿ ಮುಂಬೈ 'ಉತ್ತರ' ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಅನ್ನುವ ಸುದ್ದಿ ಇದೆ. 'ವಾಯುವ್ಯ' ಮುಂಬೈ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಯೂ ಇದೆ ಎಂಬ ಮಾತು ಇದೆ. ಎರಡರಲ್ಲಿ ಗೋವಿಂದ ಎಲ್ಲಿಂದ ಅಖಾಡಕ್ಕಿಳಿಯುತ್ತಾರೆ ಅನ್ನುವುದು ಸದ್ಯಕ್ಕೆ ಗೌಪ್ಯವಾದರೂ, ವಾಯುವ್ಯ ಮುಂಬೈ ಕ್ಷೇತ್ರದಿಂದ 'ಉದ್ಭವ್ ಠಾಕ್ರೆ' ಬಣದಿಂದ 'ಅಮೋಲ್ ಕೀರ್ತಿಕರ್' ಅವರನ್ನು ಅಭ್ಯರ್ಥಿಯನ್ನಾಗಿ ಈಗಾಗಲೇ ಘೋಷಣೆ ಮಾಡಲಾಗಿದೆ.

ಹೀಗಾಗಿ ಒಂದು ವೇಳೆ ಗೋವಿಂದ 'ವಾಯುವ್ಯ ಮುಂಬೈ ಕ್ಷೇತ್ರ'ದಿಂದ ಚುನಾವಣೆ ಸ್ಪರ್ಧಿಸಿದೆ ಆದಲ್ಲಿ 'ಅಮೋಲ್ ಕೀರ್ತಿಕರ್' ಅವರನ್ನ ಸೆಡ್ಡು ಹೊಡೆದು 'ಗೆಲ್ಲುತ್ತಾರಾ'..? ಅನ್ನುವ ಕುತೂಹಲ ಈಗ ಅನೇಕರಲ್ಲಿದೆ. ಯಾಕೆಂದರೆ 'ಕಾಲ' ಬದಲಾಗಿದೆ. ಗೋವಿಂದ ಅವರ 'ಜನಪ್ರಿಯತೆ'ಯೂ ಕುಗ್ಗಿದೆ.

ಒಟ್ನಲ್ಲಿ ಸಿನಿಮಾದಲ್ಲಿ ಗೋವಿಂದ ಕೊನೆಯದಾಗಿ 'ಗೆಲುವಿನ ನಗೆ' ಬೀರಿದ್ದು 2007ರಲ್ಲಿ. ಅದು 'ಪಾರ್ಟನರ್' ಚಿತ್ರದ ಮೂಲಕ. ಆ ನಂತರ ಗೋವಿಂದ 'ಕಾಲಿಟ್ಟಲೆಲ್ಲಾ' ಸಿಕ್ಕಿದ್ದು 'ನಿರಾಸೆ'ಯೇ. 'ಶಿವಸೇನೆ'ಯಿಂದ ಆದರೂ ಗೋವಿಂದ 'ಅದೃಷ್ಟ' ಬದಲಾಗುತ್ತಾ. ಲೆಟ್ಸ್ ಸೀ

More from Filmibeat

English summary
Ahead Of Lok Sabha Election Actor Govinda Returns To Politics And Joins Shiva Sena In Mumbai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X