For Quick Alerts
  ALLOW NOTIFICATIONS  
  For Daily Alerts

  ಏಷ್ಯಾದ ಸೆಕ್ಸಿಯಸ್ಟ್ ಮ್ಯಾನ್ ಪಟ್ಟಿಯಲ್ಲಿ ಹೃತಿಕ್ ರೋಷನ್ ಗೆ ಮೊದಲ ಸ್ಥಾನ

  |

  ಬಾಲಿವುಡ್ ನ ಸ್ಟಾರ್ ನಟ ಹೃತಿಕ್ ರೋಷನ್ ಏಷ್ಯಾದ ಸೆಕ್ಸಿಯಸ್ಟ್ ಮ್ಯಾನ್ ಆಗಿ ಹೊರಹೊಮ್ಮಿದ್ದಾರೆ. ಅಂದ್ಹಾಗೆ ಹೃತಿಕ್ ಗೆ ಈ ಗೌರವ ಸಿಗುತ್ತಿರುವುದು ಇದೆ ಮೊದಲೇನಲ್ಲ. ಕಳೆದ 10 ವರ್ಷಗಳಲ್ಲಿ ಹೃತಿಕ್ ಗೆ ಅತೀ ಹೆಚ್ಚು ಬಾರಿ ಸೆಕ್ಸಿಯಸ್ಟ್ ಮ್ಯಾನ್ ಎನ್ನುವ ಗೌರವ ಲಭಿಸಿದೆ.

  ಲಂಡನ್ ನ ಖ್ಯಾತ ಮ್ಯಾಗಜಿನ್ ಈಸ್ಟರ್ನ್ ಐ ನಡೆಸುವ ಸಮೀಕ್ಷೆಯಲ್ಲಿ ಹೃತಿಕ್ 2019ರಲ್ಲೂ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈಸ್ಟರ್ನ್ ಐ ಮ್ಯಾಗಜಿನ್ ಪ್ರಪಂಚದಾದ್ಯಂತ ಚಿತ್ರಾಭಿಮಾನಿಗಳಿಂದ ಆನ್ ಲೈನ್ ಮತ ಸಂಗ್ರಹ ಮಾಡುತ್ತೆ. ಈ ಮತಗಳ ಆಧಾರದ ಮೇಲೆ ರ್ಯಾಂಕಿಂಗ್ ನೀಡಲಾಗುತ್ತೆ.

  ಹೃತಿಕ್ ರೋಷನ್ ಮೇಲೆ ಕ್ರಶ್ ಹೊಂದಿದ್ದಕ್ಕೆ ಪತ್ನಿಯನ್ನೆ ಕೊಂದ ಪತಿಹೃತಿಕ್ ರೋಷನ್ ಮೇಲೆ ಕ್ರಶ್ ಹೊಂದಿದ್ದಕ್ಕೆ ಪತ್ನಿಯನ್ನೆ ಕೊಂದ ಪತಿ

  ವಿಶೇಷ ಅಂದರೆ ಲಂಡನ್ ಮ್ಯಗಜಿನ್ ನಡೆಸಿದ ಸಮೀಕ್ಷೆಯಲ್ಲಿ ಕಳೆದ ಒಂದು ದಶಕದಲ್ಲಿ ಹೃತಿಕ್ ರೋಷನ್ ಅಗ್ರಸ್ಥಾನದಲ್ಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೃತಿಕ್ ಇದು ಸಾಧನೆ ಅಲ್ಲ. ಆದರೆ ನನಗೆ ಮತ ಹಾಕಿದ ಪ್ರತಿಯೊಬ್ಬರಿಗೂ ಧನ್ಯವಾದ. ವ್ಯಕ್ತಿಯ ರೂಪ ಮುಖ್ಯವಲ್ಲ, ಉತ್ತಮ ಪಾತ್ರಗಳು ಯಾವಾಗಲು ನಿಮ್ಮನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ" ಎಂದು ಹೇಳಿದ್ದಾರೆ.

  ಏಷ್ಯಾದ ಸೆಕ್ಸಿಯಸ್ಟ್ ಮ್ಯಾನ್ ಸಮೀಕ್ಷೆ ಪ್ರಾರಂಭಿಸಿ 16 ವರ್ಷಗಳು ಆಗಿದೆಯಂತೆ. ಈ 16 ವರ್ಷಗಳಲ್ಲಿ ಅತೀ ಹೆಚ್ಚು ಮತ ಪಡೆದ ನಟ ಹೃತಿಕ್ ರೋಷನ್ ಎನ್ನುವ ಹೆಗ್ಗಳಿಕೆ ಕೂಡ ಗಳಿಸಿದ್ದಾರೆ. 2017ರಲ್ಲಿ ಏಷ್ಯಾದ ಸೆಕ್ಸಿಯಸ್ಟ್ ಮ್ಯಾನ್ ಆಗಿ ಬಾಲಿವುಡ್ ನಟ ಶಾಹಿದ್ ಕಪೂರ್ ಹೊರಹೊಮ್ಮಿದ್ದರು.

  ಈ ಬಾರಿ ಶಾಹಿದ್ ಕಪೂರ್ ಎರಡನೆ ಸ್ಥಾನ ಪಡೆದುಕೊಂಡಿದ್ದಾರೆ. ಮೂರನೆ ಸ್ಥಾನದಲ್ಲಿ ಮೊದಲ ಸ್ಥಾನ ಹೃತಿಕ್ ಪಾಲಾದರೆ ಎರಡನೆ ಸ್ಥಾನದಲ್ಲಿ ಟಿವಿ ನಟ ವಿವಿಯನ್ ತ್ಸೆನಾ ಮತ್ತು ನಾಲ್ಕನೆ ಸ್ಥಾನದಲ್ಲಿ ಬಾಲಿವುಡ್ ಟೈಗರ್ ಶ್ರಾಫ್ ಪಡೆದುಕೊಂಡಿದ್ದಾರೆ. ಹೃತಿಕ್ ರೋಷನ್ ಅಭಿನಯದ ಎರಡು ಸಿನಿಮಾ ಈ ವರ್ಷ ತೆರೆಗೆ ಬಂದಿದೆ. ಸೂಪರ್ 30 ಮತ್ತು ವಾರ್ ಸಿನಿಮಾಗಳ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.

  English summary
  Bollywood star Hrithik Roshan has been voted the Sexiest Asian Male of 2019.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X