ನಟನೆಗೆ ಗುಡ್ ಬೈ ಹೇಳಿದ ನಟ ಆಮೀರ್ ಖಾನ್ ಸೋದರಳಿಯ ಇಮ್ರಾನ್ ಖಾನ್

ಬಾಲಿವುಡ್ ನಟ ಇಮ್ರಾನ್ ಖಾನ್ ಪರಿಚಯ ಹಿಂದಿ ಚಿತ್ರಪ್ರಿಯರಿಗೆ ಇದ್ದೇ ಇರುತ್ತೆ. ಕೆಲವೇ ಸಿನಿಮಾಗಳಲ್ಲಿ ನಟಿಸಿದರೂ ತಕ್ಕ ಮಟ್ಟಿಗಿನ ಖ್ಯಾತಿಗಳಿಸಿದ್ದಾರೆ ಇಮ್ರಾನ್. ಅಂದಹಾಗೆ ಇಮ್ರಾನ್ ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಅವರ ಸೋದರಳಿಯ.

ಸುಮಾರು 5 ವರ್ಷಗಳಿಂದ ಇಮ್ರಾನ್ ತೆರೆಮೇಲೆ ಕಾಣಿಸಿಕೊಂಡಿಲ್ಲ. ಬಣ್ಣದ ಲೋಕದಿಂದ ದೂರ ಸರಿದಿರುವ ಇಮ್ರಾನ್ ಇದೀಗ ನಟನೆ ತ್ಯಜಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಹೌದು, ಇಮ್ರಾನ್ ಖಾನ್ ಆಪ್ತ ಸ್ನೇಹಿತ ಮತ್ತು ನಟ ಅಕ್ಷಯ್ ಒಬೆರಾಯ್ ಬಹಿರಂಗ ಪಡಿಸಿದ್ದಾರೆ. 2015ರ ಬಳಿಕ ಇಮ್ರಾನ್ ಖಾನ್ ಸಿನಿಮಾ ಮಾಡಿಲ್ಲ. ಸುಮಾರು 5 ವರ್ಷಗಳಿಂದ ಬಾಲಿವುಡ್ ನಿಂದ ದೂರ ಉಳಿದಿರುವ ಇಮ್ರಾನ್ ನಟನೆಯನ್ನು ತ್ಯಜಿಸಿದ್ದಾರಂತೆ. ಮುಂದೆ ಓದಿ..

ಇಮ್ರಾನ್ ಖಾನ್ ಬಗ್ಗೆ ಸ್ನೇಹಿತನ ಮಾತು

ಇಮ್ರಾನ್ ಖಾನ್ ಬಗ್ಗೆ ಸ್ನೇಹಿತನ ಮಾತು

ಇತ್ತೀಚಿಗೆ ಸಂದರ್ಶವೊಂದರಲ್ಲಿ ಮಾತನಾಡಿರುವ ಅಕ್ಷಯ್, 'ಬಾಲಿವುಡ್ ನಲ್ಲಿ ಉತ್ತಮ ಸ್ನೇಹಿತ ಇಮ್ರಾನ್ ಖಾನ್. ಅವರೀಗ ನಟನಾಗಿ ಉಳಿದಿಲ್ಲ. ಯಾಕೆಂದರೆ ಇಮ್ರಾನ್ ಈಗ ನಟನೆ ತ್ಯಜಿಸಿದ್ದಾರೆ. ನಾನು ಮತ್ತು ಇಮ್ರಾನ್ ಸುಮಾರು 18 ವರ್ಷಗಳಿಂದ ಸ್ನೇಹಿತರು. ಇಬ್ಬರು ಒಟ್ಟಿಗೆ ನಟನೆ ಕಲಿತ್ತಿದ್ದೇವೆ, ಒಟ್ಟಿಗೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದೇವೆ' ಎಂದು ಹೇಳಿದ್ದಾರೆ.

ಇಮ್ರಾನ್ ಖಾನ್ ಉತ್ತಮ ಬರಹಗಾರ

ಇಮ್ರಾನ್ ಖಾನ್ ಉತ್ತಮ ಬರಹಗಾರ

'ಇಮ್ರಾನ್ ಖಾನ್ ನಟನೆ ತೊರೆದಿದ್ದಾರೆ. ನನಗೆ ತಿಳಿದ ಮಟ್ಟಿಗೆ, ಇಮ್ರಾನ್ ಒಳಗೆ ಉತ್ತಮ ಬರಹಗಾರ ಮತ್ತು ನಿರ್ದೇಶಕನಿದ್ದಾನೆ. ಅವರು ಚಿತ್ರವನ್ನು ಯಾವಾಗ ನಿರ್ದೇಶಿಸುತ್ತಾರೆ ಎಂದು ನನಗೆ ತಿಳಿದಿಲ್ಲ. ಆದರೆ ನಾನು ಯಾವುದೇ ಒತ್ತಡ ಹೇರಿಲ್ಲ. ಆದರೆ ಶೀಘ್ರದಲ್ಲೇ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂದು ನಾನು ಭಾವಿಸಿದ್ದೇನೆ. ಅದ್ಭುತ ಸಿನಿಮಾ ಮಾಡುತ್ತಾರೆ ಎಂದು ನನಗೆ ತಿಳಿದಿದೆ. ಯಾಕೆಂದರೆ ಅವರಿಗೆ ಸಿನಿಮಾದ ಬಗ್ಗೆ ಸಂವೇದನೆ ಮತ್ತು ತಿಳುವಳಿಕೆ ತುಂಬಾ ಇದೆ' ಎಂದಿದ್ದಾರೆ.

2008ರಲ್ಲಿ ಚಿತ್ರರಂಗ ಪ್ರವೇಶ

2008ರಲ್ಲಿ ಚಿತ್ರರಂಗ ಪ್ರವೇಶ

2008ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ನಟ ಇಮ್ರಾನ್ ಖಾನ್, ಜಾನೆ ತು ಯಾ ಜಾನೆ ನಾ ಚಿತ್ರದ ಮೂಲಕ ಚಿತ್ರಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಸಿನಿಮಾವನ್ನು ನಟ ಆಮೀರ್ ಖಾನ್ ನಿರ್ಮಾಣ ಮಾಡಿದ್ದರು. 2015ರಲ್ಲಿ ಕೊನೆಯಬಾರಿಗೆ ಕಟ್ಟಿ ಬಟ್ಟಿ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಇಮ್ರಾನ್ ಖಾನ್ ಗೆ ನಾಯಕಿಯಾಗಿ ಕಂಗನಾ ಕಾಣಿಸಿಕೊಂಡಿದ್ದರು. ನಟನೆ ಜೊತೆಗೆ ಕಿರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

Recommended Video

ಭಜರಂಗಿ ಭಾಯಿಜಾನ್ ಪುಟ್ಟ ಪೋರಿ ಈಗ ಹೇಗಿದ್ದಾಳೆ ನೋಡಿ | Filmibeat Kannada
ಪತ್ನಿಯಿಂದ ದೂರ ಆಗಿರುವ ನಟ ಇಮ್ರಾನ್

ಪತ್ನಿಯಿಂದ ದೂರ ಆಗಿರುವ ನಟ ಇಮ್ರಾನ್

ಇನ್ನೂ ಸಿನಿಮಾ ಹೊರತುಪಡಿಸಿ ಇಮ್ರಾನ್ ಪತ್ನಿ ಅವಂತಿಕಾ ಮಲಿಕ್ ಯಿಂದ ದೂರ ಆಗಿ ಮತ್ತೆ ಸುದ್ದಿ ಮಾಡಿದ್ದರು. ಸದ್ಯ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿರುವ ಇಮ್ರಾನ್ ನಿರ್ದೇಶನದ ಮೂಲಕ ವಾಪಸ್ ಆಗ್ತಾರಾ ಎಂದು ಕಾದುನೋಡಬೇಕು.

More from Filmibeat

English summary
Bollywood Actor And Aamir Khan nephew Imran Khan quits Acting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X