ಕಾಶ್ಮೀರಿ ಫೈಲ್ಸ್‌ ಹಿಂದಿಕ್ಕಿದ ಬ್ರಹ್ಮಾಸ್ತ್ರ: ಕಂಗನಾ ಲೇವಡಿ

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಚಿತ್ರ ಬಾಕ್ಸ್‌ ಆಫೀಸ್‌ನ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿದೆ. ಕಳೆದ ವಾರ ಬಿಡುಗಡೆಯಾದ ಬ್ರಹಾಸ್ತ್ರ ಚಿತ್ರ ಭಾರತದಲ್ಲಿಯೇ 220 ಕ್ಕೂ ಹೆಚ್ಚು ಕೋಟಿ ರೂಪಾಯಿ ಬಾಕ್ಸ್‌ ಆಫೀಸ್ ಕಲೆಕ್ಷನ್ ಗಳಿಸಿದೆ. ಈ ಮೂಲಕ ಕಾಶ್ಮೀರಿ ಫೈಲ್ಸ್‌ ಚಿತ್ರದ ದಾಖಲೆಯನ್ನು

ಬ್ರಹ್ಮಾಸ್ತ್ರ ಚಿತ್ರ ಮುರಿದಿದೆ. 5 ಸಾವಿರ ಸ್ಕ್ರೀನ್ ಗಳಲ್ಲಿ, ಐದು ಭಾಷೆಗಳಲ್ಲಿ ತೆರೆಕಂಡ ಬ್ರಹ್ಮಾಸ್ತ್ರ ಚಿತ್ರ ವಿಶ್ವದಾದ್ಯಂತ 360 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಕಳೆದ ಎರಡು ವಾರಗಳಿಂದ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವ ಬ್ರಹ್ಮಾಸ್ತ್ರ ಚಿತ್ರ ಪ್ರೇಕ್ಷಕರಿಂದ ಮಿಶ್ರ ಪತ್ರಿಕ್ರಿಯೆ ಪಡೆದುಕೊಂಡರೂ, ನಿರ್ಮಾಪಕರು ಹಾಕಿರುವ ಬಂಡವಾಳದಲ್ಲಿ ಶೇ.80ರಷ್ಷು ವಾಪಸ್‌ ಪಡೆದುಕೊಂಡಿದೆ. ಇನ್ನೂ ಹಲವು ಚಿತ್ರಮಂದಿರಗಳಲ್ಲಿ ಬ್ರಹ್ಮಾಸ್ತ್ರ ಪ್ರದರ್ಶನ ಮುಂದುವರಿದಿದ್ದು, ತಿಂಗಳಾಂತ್ಯದಲ್ಲಿ ಚಿತ್ರ 400 ಕೋಟಿಗೂ ಅಧಿಕ ಗಳಿಕೆ ಮಾಡುವ ನಿರೀಕ್ಷೆ ಇದೆ.

Bollywood Actor Kangana Ranaut Mocks Ranbir Kapoor stars Brahmastras Box Office Collection Again

ಸದ್ಯ ಬ್ರಹ್ಮಾಸ್ತ್ರ ಬಾಕ್ಸ್‌ ಆಫೀಸ್‌ ಕಲೆಕ್ಷನ್ ವಿಚಾರ ಬಾಲಿವುಡ್‌ ಅಂಗಳದಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ. ಬಾಯ್ಕಾಟ್ ಬಿಸಿಯ ನಡುವೆಯೇ ಚಿತ್ರ ಗೆದ್ದಿದೆ ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಚಿತ್ರದ ಕಲೆಕ್ಷನ್ ಬಗ್ಗೆ ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಬಾಲಿವುಡ್‌ ಕಾಂಟವರ್ಸಿ ಕ್ವೀನ್‌ ಕಂಗನಾ ರನೌತ್ ಈಗಾಗಲೇ ಕರಣ್ ಜೋಹರ್ ಚಿತ್ರದ ಕಲೆಕ್ಷನ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಇಂದು(ಸಪ್ಟೆಂಬರ್ 20) ಮತ್ತೆ ಬ್ರಹ್ಮಾಸ್ತ್ರ ಚಿತ್ರವನ್ನು ವ್ಯಂಗ್ಯ ಮಾಡಿದ್ದಾರೆ.

ಈ ಹಿಂದೆ ಟ್ವೀಟ್ ಮಾಡಿದ್ದ ಕಂಗನಾ ಈ ಚಿತ್ರ ಇಷ್ಟು ಕೋಟಿ ಗಳಿಸಿಯೇ ದೊಡ್ಡ ಹಿಟ್‌ ಎಂದು ಘೋಷಿಸಲಾಗುತ್ತಿದೆ. ಇದು ಮೂವಿ ಮಾಫಿಯಾ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ತೋರಿಸುತ್ತದೆ ಎಂದು ಕಂಗನಾ ಕಿಡಿ ಹೊತ್ತಿಸಿದ್ದರು. ಕಂಗನಾ ಈ ಟ್ವೀಟ್ ಸಖತ್‌ ವೈರಲ್ ಆಗಿದ್ದು, ಬಾಲಿವುಡ್‌ನ ಅನೇಕರು ಕಂಗನಾ ವಿರುದ್ಧ ಕಿಡಿಕಾರಿದ್ದರು. ಇಂದು ಕೂಡ ಕಂಗನಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕಾಶ್ಮೀರಿ ಫೈಲ್ಸ್‌ ಚಿತ್ರದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರ ಅವರ ಟ್ವೀಟ್ ಹಂಚಿಕೊಂಡು ಬ್ರಹ್ಮಾಸ್ತ್ರ ಚಿತ್ರದ ಬಗ್ಗೆ ಲೇವಡಿ ಮಾಡಿದ್ದಾರೆ.

ಬ್ರಹ್ಮಾಸ್ತ್ರ ಚಿತ್ರವು ಕರಣ್ ಜೋಹರ್ ಚಲನಚಿತ್ರಗಳಿಗಾಗಿ ವಿಶೇಷವಾಗಿ ಆವಿಷ್ಕರಿಸಿದ ಪೋಸ್ಟ್‌ ಪ್ಯಾಂಡಮಿಕ್ ತೀರ್ಪಿನ ಮಾದರಿ. 10 ಕೋಟಿ ರೂಪಾಯಿ ಬಜೆಟ್ ನಲ್ಲಿ ತಯಾರಾದ ಕಾಶ್ಮೀರಿ ಫೈಲ್ಸ್‌ ಚಿತ್ರವನ್ನು, 410 ಕೋಟಿ ರೂಪಾಯಿ ಬಜೆಟ್ ನಲ್ಲಿ ಮಾಡಲಾದ ಬ್ರಹ್ಮಾಸ್ತ್ರ ಚಿತ್ರವು ಬಹಳ ಭೀಕರ ಪೈಪೋಟಿ ನೀಡಿ ಬೀಟ್‌ ಮಾಡಿದೆ ಎಂದು ಪೋಸ್ಟ್ ಮಾಡಿದ್ದು, ಜೊತೆಗೆ ನಗುವಿನ ಇಮೋಜಿ ಹಾಕಿ ಚಿತ್ರ ತಂಡವನ್ನು ಛೇಡಿಸಿದ್ದಾರೆ.

ಇನ್ನು ಕಾಶ್ಮೀರಿ ಫೈಲ್ಸ್‌ ಚಿತ್ರದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರ ಕೂಡ ಬ್ರಹ್ಮಾಸ್ತ್ರ ಚಿತ್ರದ ಕಲೆಕ್ಷನ್ ಬಗ್ಗೆ ಮಾತನಾಡಿದ್ದು, ಬ್ರಹ್ಮಾಸ್ತ್ರ ಚಿತ್ರವು, ಕಾಶ್ಮೀರ್ ಫೈಲ್ಸ್‌ ಚಿತ್ರವನ್ನು ಹೇಗೆ ಬೀಟ್‌ ಮಾಡಿತು ಎಂದು ನನಗೆ ಗೊತ್ತಿಲ್ಲ. ಸ್ಟಿಕ್ಸ್, ರಾಡ್, ಹಾಕಿ ಸ್ಟಿಕ್ಸ್, ಎಕೆ 47 ಅಥವಾ ಕಲ್ಲಿನಿಂದ ಬೀಟ್‌ ಮಾಡಿದ್ದಾರೋ ಅಲ್ಲ, ಹಣ ಪಡೆದ ಪಿಆರ್ ಹಾಗೂ ಪ್ರಭಾವಿಗಳ ಪ್ರಭಾವವೋ ಎಂದು ಪ್ರಶ್ನಿಸಿದ್ದಾರೆ. ಬಾಲಿವುಡ್ ಚಿತ್ರಗಳು ಒಂದಕ್ಕೊಂದು ಪೈಪೋಟಿ ನೀಡಲಿ. ನಮ್ಮನ್ನು ಮಾತ್ರ ನಮ್ಮ ಪಾಡಿಗೆ ಬಿಟ್ಟುಬಿಡಿ ಎಂದಿದ್ದಾರೆ.

More from Filmibeat

English summary
Bollywood actor Kngana Ranaut mocks Brahmastra's Box Office Collection Again, Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X