ನಟ ಪರೇಶ್ ರಾವಲ್ ನಿಧನದ ಬಗ್ಗೆ ವಂದತಿ: ಟ್ವಿಟ್ಟರ್‌ನಲ್ಲಿ ತಿರುಗೇಟು
ಕೊರೊನಾ ವೈರಸ್ ಎರಡನೇ ಅಲೆಯಿಂದ ಅನೇಕ ಸೆಲೆಬ್ರಿಟಿಗಳು ಪ್ರಾಣ ಕಳೆದುಕೊಂಡಿದ್ದಾರೆ. ದಿನನಿತ್ಯ ಸಿನಿ ಇಂಡಸ್ಟ್ರಿಗೆ ಸಂಬಂಧಪಟ್ಟ ಒಬ್ಬರಲ್ಲ ಒಬ್ಬ ವ್ಯಕ್ತಿಯ ನಿಧನ ಸುದ್ದಿ ವರದಿಯಾಗುತ್ತಿದೆ. ಈ ನಡುವೆ ಕೆಲವು ಕಲಾವಿದರ ಸಾವಿನ ಬಗ್ಗೆ ವದಂತಿಗಳು ಸಹ ಹುಟ್ಟಿಕೊಳ್ಳುತ್ತಿವೆ.
ಬಾಲಿವುಡ್ ನಟ ಪರೇಶ್ ರಾವಲ್ ಹೆಸರು ಹೊಸದಾಗಿ ಈ ವದಂತಿಗೆ ಸಿಕ್ಕಿಹಾಕಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಪರೇಶ್ ರಾವಲ್ ಇನ್ನಿಲ್ಲ ಎಂಬ ಪೋಸ್ಟ್‌ಗಳು ಅಭಿಮಾನಿಗಳಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತ್ತು. ನಂತರ, ಇದು ನಕಲಿ ಪೋಸ್ಟ್‌ಗಳು ಎಂದು ತಿಳಿದು ಬಂದಿದೆ.
ಈ ರೀತಿಯಾದ ಪೋಸ್ಟ್‌ವೊಂದಕ್ಕೆ ಪರೇಶ್ ರಾವಲ್ ಸ್ಪಷ್ಟನೆ ನೀಡಿದ್ದು, ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ಪರೇಶ್ ರಾವಲ್ ಮೇ 14 ರಂದು ನಿಧನರಾಗಿದ್ದಾರೆ ಎಂಬ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನಟ ''ಕ್ಷಮೆ ಇರಲಿ, ನಾನು ಬೆಳಗ್ಗೆ 7 ಗಂಟೆಯಿಂದ ನಿದ್ರೆಯಲ್ಲಿದ್ದೆ'' ಎಂದು ಟಾಂಗ್ ಕೊಟ್ಟಿದ್ದಾರೆ.

ಇತ್ತೀಚಿಗೆ ಕನ್ನಡ ನಟ ದೊಡ್ಡಣ್ಣ ಅವರ ಸಾವಿನ ಬಗ್ಗೆಯೂ ಇಂತಹದ್ದೇ ವದಂತಿ ಹರಿದಾಡಿತ್ತು. ಬಳಿಕ, ದೊಡ್ಡಣ್ಣ ಅವರೇ ವಿಡಿಯೋ ಮಾಡಿ ವಂದತಿಗಳನ್ನು ಹಬ್ಬಿಸಬೇಡಿ, ನಾನು ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದರು.
ಕೊರೊನಾ ಪಾಸಿಟಿವ್
ಪರೇಶ್ ರಾವಲ್ ಅವರಿಗೆ ಮಾರ್ಚ್ ತಿಂಗಳಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಬಳಿಕ ಚೇತರಿಸಿಕೊಂಡು, ಪೂರ್ಣವಾಗಿ ಗುಣಮುಖರಾಗಿದ್ದರು.


Click it and Unblock the Notifications











