"ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು.. ಅದ್ರಿಂದ ಹೊರಬರಲು ಬಹಳ ಕಷ್ಟಪಟ್ಟೆ": ಬಾಲಿವುಡ್ ನಟ

ಬಾಲಿವುಡ್‌ ಹಿರಿಯ ನಟ, ಗೀತ ರಚನೆಕಾರ, ಗಾಯಕ ಪಿಯೂಷ್ ಮಿಶ್ರಾ ತಮ್ಮ ಮೇಲೆ ಚಿಕ್ಕ ವಯಸ್ಸಿನಲ್ಲೇ ಲೈಂಗಿಗ ದೌರ್ಜನ್ಯ ನಡೆದಿತ್ತು ಎಂದು ಹೇಳಿದ್ದಾರೆ. 'ತುಮ್ಹಾರಿ ಔಕಾತ್ ಕ್ಯಾ ಹೈ ಪಿಯೂಷ್ ಮಿಶ್ರಾ' ಎನ್ನುವ ತಮ್ಮ ಆತ್ಮಚರಿತ್ರೆಯಲ್ಲಿ ಅದನ್ನು ದಾಖಲಿಸಿದ್ದಾರೆ. ಆ ಘಟನೆ ನನ್ನ ಮೇಲೆ ಗಾಢವಾದ ಪರಿಣಾಮ ಬೀರಿತ್ತು. ಆದರೆ ಅದಕ್ಕಾಗಿ ನನಗೆ ಆಕೆಯ ಮೇಲೆ ಸೇಡು ತೋರಿಸಿಕೊಳ್ಳಬೇಕು ಎನಿಸಲಿಲ್ಲ" ಎಂದು ಹೇಳಿದ್ದಾರೆ.

"ನಾನು 7ನೇ ತರಗತಿಯಲ್ಲಿದ್ದಾಗ ನಮ್ಮ ಮಹಿಳಾ ಸಂಬಂಧಿಕರೊಬ್ಬರು ಲೈಂಗಿಕವಾಗಿ ನನಗೆ ಹಿಂಸಿಸಿದರು ಎಂದಿದ್ದಾರೆ. ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿರುವುದನ್ನು ಮಾಧ್ಯಮಗಳ ಮುಂದೆಯೂ ಮಾತನಾಡಿದ್ದಾರೆ. "ಶೃಂಗಾರ ಎನ್ನುವುದು ಹೆಲ್ದಿಯಾಗಿ ಇರಬೇಕು. ಆದರೆ ಅದು ಅಭ್ಯಂತರವಾಗಿ ಇಷ್ಟವಿಲ್ಲದಿದ್ದರೆ ಅದರಿಂದ ಹೊರ ಬರುವುದು ಬಹಳ ಕಷ್ಟ. ಜೀವನವಿಡೀ ಅದು ನೋವು ಕೊಡುತ್ತದೆ" ಎಂದು ಪಿಯೂಷ್ ಮಿಶ್ರಾ ಹೇಳಿದ್ದಾರೆ. ಸದ್ಯ ಅವರ ಹೇಳಿಕೆ ಬಹಳ ವೈರಲ್ ಆಗ್ತಿದೆ.

Bollywood Actor Piyush Mishra opened up on being sexually abused in the 7th standard

"ಹೀಗೆ ಚಿಕ್ಕ ವಯಸ್ಸಿನಲ್ಲೇ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಅಷ್ಟೇ ಅಲ್ಲ, ಮತ್ತೆ ಕೆಲವರ ಹೆಸರನ್ನು ಗುಟ್ಟಾಗಿಯೇ ಇಡಬೇಕು ಎಂದುಕೊಂಡಿದ್ದೇನೆ. ಯಾಕೆಂದರೆ ಅವರಲ್ಲಿ ಕೆಲವು ಮಹಿಳೆಯರು ಹಾಗೂ ಪುರುಷರು ಈಗ ಚಿತ್ರರಂಗದಲ್ಲಿ ಚೆನ್ನಾಗಿ ನೆಲೆ ಕಂಡುಕೊಂಡಿದ್ದಾರೆ. ಹಾಗಾಗಿ ಇಂತಹ ಸಮಯದಲ್ಲಿ ಅವರ ವಿರುದ್ಧ ಸೇಡು ತೋರಿಸಿಕೊಳ್ಳುವುದಿಲ್ಲ" ಎಂದು ಪಿಯೂಷ್ ಮಿಶ್ರಾ ವಿವರಿಸಿದ್ದಾರೆ. ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ಪಿಯೂಷ್ ಚಿತ್ರರಂಗಕ್ಕೆ ಬಂದು ಗೆದ್ದರು.

ಗ್ವಾಲಿಯರ್‌ನಲ್ಲಿ ಹುಟ್ಟಿ ಬೆಳೆದ ಪಿಯೂಷ್ ಮಿಶ್ರಾ ಚಿಕ್ಕಂದಿನಿಂದಲೂ ಆಟ ಪಾಠಗಳಲ್ಲಿ ಮುಂದಿದ್ದರು. ರಂಗಭೂಮಿ ನಂಟಿನಿಂದ ಚಿತ್ರರಂಗಕ್ಕೆ ಬಂದರು. ನಟರಾಗಿ, ಗೀತ ಸಾಹಿತಿಯಾಗಿ, ಸಂಗೀತ ನಿರ್ದೇಶಕರಾಗಿ, ಗಾಯಕರಾಗಿ, ಬರಹಗಾರರಾಗಿ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. 'ಗ್ಯಾಂಗ್ಸ್ ಆಫ್ ವಸ್ಸೇಪುರ್', 'ರಾಕ್‌ಸ್ಟಾರ್', 'ರಿವಾಲ್ವರ್‌ ರಾಣಿ', 'ಪಿಂಕ್', 'ಸಂಜು', 'ತಮಾಷಾ' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಪಿಯೂಷ್ ಮಿಶ್ರಾ ಬಣ್ಣ ಹಚ್ಚಿದ್ದಾರೆ.

Bollywood Actor Piyush Mishra opened up on being sexually abused in the 7th standard

'ಯಹಾನ್', '1971', 'ಭಗತ್ ಸಿಂಗ್,' 'ಗಜಿನಿ', 'ಅಗ್ನಿಪತ್', 'ಲಾಹೋರ್' 'ಶಂಷೇರಾ' ಸೇರಿದಂತೆ ಹಲವು ಸಿನಿಮಾಗಳಿಗೆ ಪಿಯೂಷ್ ಮಿಶ್ರಾ ಸಂಭಾಷಣೆ ಬರೆದಿದ್ದಾರೆ. 'ಗುಲಾಲ್', 'ಲಾಹೋರ್', 'ಜಲ್‌ಪರಿ' ಸೇರಿದಂತೆ ಕೆಲ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ಧಾರೆ.

More from Filmibeat

English summary
Piyush Mishra opened up on being sexually abused in the 7th standard. veteran actor has revealed about the same in his autobiography novel Tumhari Auqaat Kya Hai Piyush Mishra. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X