ಎರಡು ಬಾಳೆಹಣ್ಣಿನ ಬೆಲೆ ಕೇಳಿ ಬೆಚ್ಚಿಬಿದ್ದ ಬಾಲಿವುಡ್ ನಟ
Recommended Video
ಬಹುಭಾಷ ನಟ ರಾಹುಲ್ ಬೋಸ್ ಅವರು ಇತ್ತೀಚಿಗಷ್ಟೆ ಎರಡು ಬಾಳೆಹಣ್ಣನ್ನು ಕೊಂಡು ಭಾರಿ ಮೋಸ ಹೋಗಿದ್ದಾರೆ. ಬಾಳೆಹಣ್ಣಿನಿಂದ ಭಾರಿ ಮೋಸನಾ ಅಂತ ಅಂದ್ಕೋತ್ತಿದ್ದೀರಾ. ಹೌದು, ಹೆಚ್ಚು ಬೆಲೆ ಕೊಟ್ಟು ರಾಹುಲ್ ಕೊಂಡುಕೊಂಡ ಎರಡು ಬಾಳೆಹಣ್ಣು ಈಗ ಭಾರಿ ಚರ್ಚೆಯಾಗತ್ತಿದೆ. ಹಾಗಾದ್ರೆ ಎರಡು ಬಾಳೆಹಣ್ಣಿನ ಬೆಲೆ ಎಷ್ಟಿರ ಬಹುದು? ಅಬ್ಬಬ್ಬಾ ಅಂದ್ರೆ 10 ರೂ, ಇಲ್ಲ 30 ಹೋಗಲಿ 50 ರುಪಾಯಿ ಇರಬಹುದಾ? ಆದ್ರೆ ರಾಹುಲ್ ಬೋಸ್ ಎರಡು ಬಾಳೆಹಣ್ಣಿಗೆ ಕೊಟ್ಟಿರುವ ಕಾಸು ಬರೋಬ್ಬರಿ 442 ರೂಪಾಯಿ.
ಹೌದು, ಅಚ್ಚರಿ ಎನಿಸುತ್ತಿದ್ದರು ಇದು ಸತ್ಯ. ನಟ ರಾಹುಲ್ ಬೋಸ್ ಸದ್ಯ ಚಿತ್ರೀಕರಣಕ್ಕೆಂದು ಚಂಡೀಗಢದಲ್ಲಿ ಬೀಡುಬಿಟ್ಟಿದ್ದಾರೆ. ಅಲ್ಲಿಯೇ ಸಮೀಪವಿರುವ ಐಷಾರಾಮಿ ಹೋಟೆಲ್ JW Marriott ನಲ್ಲಿ ತಂಗಿದ್ದಾರೆ. ಅದೇ ಹೋಟೆಲ್ ನಲ್ಲಿ ಜಿಮ್ ಮಾಡುತ್ತಿದ್ದಾಗ ರಾಹುಲ್ ಎರಡು ಬಾಳೆಹಣ್ಣನ್ನು ಆರ್ಡರ್ ಮಾಡಿದ್ದಾರೆ.
ಹೋಟೆಲ್ ನವರು ಎರಡು ಬಾಳೆ ಹಣ್ಣಿನ ಜೊತೆಗೆ ಬಿಲ್ ಕೂಡ ನೀಡಿದ್ದಾರೆ. ಬಾಳೆಹಣ್ಣುತಿನ್ನಬೇಕು ಅಂತಿದ್ದ ರಾಹುಲ್ ಅವರಿಗೆ ಪಕ್ಕದಲ್ಲಿದ್ದ ಬಿಲ್ ನೋಡಿ ಶಾಕ್ ಆಗಿದ್ದಾರೆ. ಎರಡು ಬಾಳಿಹಣ್ಣಿನ ಬೆಲೆ 442 ರೂಪಾಯಿ ಅಂತ ಆ ಬಿಲ್ ನಲ್ಲಿ ಬರೆದಿತ್ತು. ಒಮ್ಮೆ ಶಾಕ್ ಆದ ರಾಹುಲ್ ಬಿಲ್ ನೀಡಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.

ಅಂದ್ಹಾಗೆ ರಾಹುಲ್ ಬೋಸ್ ಪರಿಸ್ಥಿತಿ ಕಂಡು ಅನೇಕರು ಸಾಹಾನುಭೂತಿ ತೋರಿದ್ರೆ, ಇನ್ನು ಕೆಲವರು ಟ್ರೋಲ್ ಮಾಡಿದ್ದಾರೆ. ವಿಡಿಯೋದಲ್ಲಿ ರಾಹುಲ್ ತಾವು ತಂಗಿರುವ ಹೋಟೆಲ್ ಅನ್ನು ತೋರಿಸುವ ಜೊತೆಗೆ ಬಿಲ್ ಅನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.


Click it and Unblock the Notifications











